ವಿಶ್ವದ ‘ಅತ್ಯಂತ ದಟ್ಟದರಿದ್ರ’ ದೇಶಗಳ ಪಟ್ಟಿ 2022 : ಜಿಂಬಾಬ್ವೆ ವಿಶ್ವದ ಅತ್ಯಂತ ದಟ್ಟದರಿದ್ರ ರಾಷ್ಟ್ರ ; ಭಾರತ, ಪಾಕಿಸ್ತಾನಕ್ಕೆ ಎಷ್ಟನೇ ಸ್ಥಾನ ಗೊತ್ತಾ..?

ಹ್ಯಾಂಕೆ ಅವರ ವಾರ್ಷಿಕ ದುಃಖ ಸೂಚ್ಯಂಕ (HAMI) 2022 ರಲ್ಲಿ ‘ಅತ್ಯಂತ ಶೋಚನೀಯ ದೇಶ’ ಅಥವಾ ಅತ್ಯಂತ ದಟ್ಟದರಿದ್ರ ರಾಷ್ಟ್ರ ಎಂದು ಜಿಂಬಾಬ್ವೆ ಕರೆಯಲ್ಪಟ್ಟಿದೆ.
ಅಧ್ಯಕ್ಷ ಎಮ್ಮರ್ಸನ್ ಮ್ನಂಗಾಗ್ವಾ ಅವರು ಜಾರಿಗೊಳಿಸಿದ ನೀತಿಗಳಿಂದಾಗಿ ದೇಶದ ದುಃಖದ ಮಟ್ಟವು ಆಘಾತಕಾರಿಯಾಗಿದೆ. ಸೂಚ್ಯಂಕದ ಪ್ರಕಾರ, ಜಿಂಬಾಬ್ವೆಯಲ್ಲಿ ಹಣದುಬ್ಬರ ಶೇ. 243.8ರಷ್ಟು ಇದ್ದು, ಅಲ್ಲಿನ ಬಡ್ಡಿ ದರ ಶೇ. 131.8ರಷ್ಟು ಇದೆ.
ವಿಶ್ಲೇಷಿಸಿದ 157 ದೇಶಗಳಲ್ಲಿ, ಸ್ವಿಟ್ಜರ್ಲೆಂಡ್ ದಟ್ಟದರಿದ್ರ ದೇಶಗಳ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ. ಅಂದರೆ ಸ್ವಿಟ್ಜರ್ಲೆಂಡ್ ಅತ್ಯಂತ ಕಡಿಮೆ ಶೋಚನೀಯ ದೇಶವಾಗಿದೆ. ಉಳಿದಂತೆ ಕುವೈತ್ (156), ಐರ್ಲೆಂಡ್ (155), ಜಪಾನ್ (154), ಮಲೇಷ್ಯಾ (153), ತೈವಾನ್ (152), ನೈಜರ್ (151), ಥೈಲ್ಯಾಂಡ್ (150), ಟೋಗೊ (149) ಮತ್ತು ಮಾಲ್ಟಾ (148) ಕಡಿಮೆ ದುಃಖದ ಮಟ್ಟವನ್ನು ಹೊಂದಿರುವ ಇತರ ದೇಶಗಳು
ಭಾರತ 103ನೇ ಸ್ಥಾನದಲ್ಲಿದೆ, ನಿರುದ್ಯೋಗವು ದೇಶದ ದುಃಖಕ್ಕೆ ಪ್ರಾಥಮಿಕ ಕೊಡುಗೆ ಅಂಶವೆಂದು ಗುರುತಿಸಲಾಗಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಆರ್ಥಿಕ ಮತ್ತು ರಾಜಕೀಯ ಸವಾಲುಗಳನ್ನು ಎದುರಿಸುತ್ತಿರುವ ಪಾಕಿಸ್ತಾನವು ವಿಶ್ವದ ಅತ್ಯಂತ ದಟ್ಟದರಿದ್ರ ರಾಷ್ಟ್ರಗಳ ಪಟ್ಟಿಯಲ್ಲಿ 35 ನೇ ಸ್ಥಾನ ಪಡೆದುಕೊಂಡಿದೆ. ಸೂಚ್ಯಂಕದಲ್ಲಿ ಪಾಕಿಸ್ತಾನದ ಸ್ಥಾನಕ್ಕೆ ಹಣದುಬ್ಬರವನ್ನು ಪ್ರಾಥಮಿಕ ಕೊಡುಗೆ ಅಂಶವೆಂದು ಗುರುತಿಸಲಾಗಿದೆ.
ಅರ್ಥಶಾಸ್ತ್ರಜ್ಞ ಸ್ಟೀವ್ ಹ್ಯಾಂಕೆ ಅವರ ಸೂಚ್ಯಂಕವು ಒಟ್ಟು 157 ದೇಶಗಳಿಗೆ ಶ್ರೇಯಾಂಕಗಳನ್ನು ಒದಗಿಸಿದೆ. ಸೂಚ್ಯಂಕವು ವರ್ಷಾಂತ್ಯದ ನಿರುದ್ಯೋಗ, ಹಣದುಬ್ಬರ ಮತ್ತು ಬ್ಯಾಂಕ್-ಸಾಲ ದರಗಳ ಮೊತ್ತ ಹಾಗೂ ತಲಾವಾರು ನೈಜ ಜಿಡಿಪಿ (GDP)ಯಲ್ಲಿನ ವಾರ್ಷಿಕ ಶೇಕಡಾವಾರು ಬದಲಾವಣೆಯ ಅಂಶಗಳನ್ನು ಒಳಗೊಂಡಿದೆ.
ಶ್ರೇಯಾಂಕಿತ ದೇಶಗಳಲ್ಲಿ, ಜಿಂಬಾಬ್ವೆ, ವೆನೆಜುವೆಲಾ, ಸಿರಿಯಾ, ಲೆಬನಾನ್, ಸುಡಾನ್, ಅರ್ಜೆಂಟೀನಾ, ಯೆಮೆನ್, ಉಕ್ರೇನ್, ಕ್ಯೂಬಾ, ಟರ್ಕಿ, ಶ್ರೀಲಂಕಾ, ಹೈಟಿ, ಅಂಗೋಲಾ, ಟೋಂಗಾ ಮತ್ತು ಘಾನಾ ವಿಶ್ವದ 15 ಅತ್ಯಂತ ದಟ್ಟದರಿದ್ರ ದೇಶಗಳಾಗಿ ಹೊರಹೊಮ್ಮಿವೆ.

ಹಂಕೆ ಅವರು ಟ್ವಿಟರ್‌ನಲ್ಲಿ ಟಾಪ್ 15 ದೇಶಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ, ವರ್ಷಾಂತ್ಯದಲ್ಲಿನ ನಿರುದ್ಯೋಗ, ಹಣದುಬ್ಬರ ಮತ್ತು ಬ್ಯಾಂಕ್ ಸಾಲ ದರ, ತಲಾವಾರು ಆದಾಯ, ದೇಶದ ಜಿಡಿಪಿ ಮುಂತಾದ ಮಾನದಂಡಗಳನ್ನು ಅನುಸರಿಸಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಹ್ಯಾಂಕೆ ಸಂಸ್ಥೆಯ ಮುಖ್ಯಸ್ಥ ಹಾಗೂ ಅರ್ಥಶಾಸ್ತ್ರಜ್ಞ ಸ್ಟೀವ್ ಹ್ಯಾಂಕೆ ತಿಳಿಸಿದ್ದಾರೆ. ಹ್ಯಾಂಕೆ 2022 ವಾರ್ಷಿಕ ದುಃಖದ ಸೂಚ್ಯಂಕದಲ್ಲಿ ಜಿಂಬಾಬ್ವೆ ವಿಶ್ವದ ಅತ್ಯಂತ ಶೋಚನೀಯ ದೇಶವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಒಂಬತ್ತನೇ ಸ್ಥಾನದಲ್ಲಿರುವ ಕ್ಯೂಬಾದ ಶ್ರೇಯಾಂಕದ ಬಗ್ಗೆ “‘ಅನಾಹುತಕಾರಿ ಆರ್ಥಿಕ ನೀತಿಗಳು’ ದೇಶವನ್ನು ಶಿಥಿಲಗೊಳಿಸಿದೆ ಎಂದು ಹೇಳಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಅಬುಧಾಬಿಯ ‘ಬಿಗ್ ಟಿಕೆಟ್’ ಲಾಟರಿಯಲ್ಲಿ 45 ಕೋಟಿ ರೂ. ಗೆದ್ದ ಕೇರಳದ ನರ್ಸ್ ..!

ವರ್ಲ್ಡ್ ಹ್ಯಾಪಿನೆಸ್ ವರದಿಯ ಪ್ರಕಾರ ಸತತ ಆರು ವರ್ಷಗಳ ಕಾಲ ವಿಶ್ವದ ಅತ್ಯಂತ ಸಂತೋಷದಾಯಕ ದೇಶವಾಗಿ ನಿರಂತರವಾಗಿ ಸ್ಥಾನ ಪಡೆದಿರುವ ಫಿನ್‌ಲ್ಯಾಂಡ್, ದುಃಖದ ಸೂಚ್ಯಂಕದಲ್ಲಿ 109 ನೇ ಸ್ಥಾನವನ್ನು ಪಡೆದುಕೊಂಡಿದೆ. ಅಂದರೆ ಫಿನ್ಲೆಂಡ್ ಜನರು ಶೋಚನೀಯ ಸ್ಥಿತಿಯಲ್ಲಿಯೂ ಸಂತೋಷ ಅನುಭವಿಸುತ್ತಾರೆ ಎಂದು ಪಟ್ಟಿ ಮಾಹಿತಿ ನೀಡುತ್ತದೆ. ಅಮೆರಿಕ ದುಃಖದ ಸೂಚ್ಯಂಕದಲ್ಲಿ ತುಲನಾತ್ಮಕವಾಗಿ ಉತ್ತಮವಾಗಿದೆ, 134 ನೇ ಸ್ಥಾನದಲ್ಲಿದ್ದು ಕಡಿಮೆ ಶೋಚನೀಯ ದೇಶಗಳಲ್ಲಿ ಸ್ಥಾನ ಪಡೆದಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement