ಸಮುದ್ರಕ್ಕೆ ಹಾರಿ ನೀರಿನಲ್ಲಿ ಮುಳುಗುತ್ತಿದ್ದ ಮೂವರು ಯುವಕರನ್ನು ರಕ್ಷಿಸಿದ ಬಿಜೆಪಿ ಶಾಸಕ | ವೀಕ್ಷಿಸಿ

ಗುಜರಾತ್‌ನ ರಾಜುಲಾ ಕ್ಷೇತ್ರದ ಬಿಜೆಪಿ ಶಾಸಕ ಹೀರಾ ಸೋಲಂಕಿ ಅವರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅವರು ಮೂರು ಜೀವಗಳನ್ನ ಉಳಿಸಿದ್ದಾರೆ.
ನಾಲ್ವರು ಯುವಕರು ಗುಜರಾತ್‌ನ ರಾಜುಲಾ ಸಮೀಪದ ಪಟ್ವಾ ಗ್ರಾಮದ ಸಮುದ್ರ ತೀರದಲ್ಲಿರುವ ತೊರೆಗೆ ಸ್ನಾನ ಮಾಡಲು ಹೋಗಿದ್ದರು. ಈ ವೇಳೆ ಅವರು ಮುಳುಗುತ್ತಿದ್ದರು. ಘಟನೆಯ ಬಗ್ಗೆ ತಿಳಿದ ರಾಜುಲಾ ಕ್ಷೇತ್ರದ ಬಿಜೆಪಿ ಶಾಸಕ ಹೀರಾ ಸೋಲಂಕಿ ತಕ್ಷಣ ಸ್ಥಳಕ್ಕಾಗಮಿಸಿ ಇತರ ಕೆಲವರ ಸಹಾಯದಿಂದ ಯುವಕರನ್ನು ರಕ್ಷಿಸಲು ಸಮುದ್ರಕ್ಕೆ ಹಾರಿದ್ದಾರೆ ಎಂದು ಲೈವ್ ಹಿಂದೂಸ್ತಾನ್ ವರದಿ ಮಾಡಿದೆ.
ನಾಲ್ವರು ಯುವಕರು ಸಮುದ್ರ ತೀರದಲ್ಲಿರುವ ತೊರೆಗೆ ಸ್ನಾನಕ್ಕೆಂದು ಇಳಿದಾಗ ಬಲವಾದ ಪ್ರವಾಹ ಮತ್ತು ತೀವ್ರ ಅಲೆಗಳ ಕಾರಣದಿಂದ ನಾಲ್ವರು ಯುವಕರು ಆಳವಾದ ನೀರಿನ ಕಡೆಗೆ ತೇಲಿ ಹೋದರು. ಅವರು ಮುಳುಗಲು ಪ್ರಾರಂಭಿಸಿದಾಗ, ಸಹಾಯಕ್ಕಾಗಿ ಕಿರುಚಲು ಪ್ರಾರಂಭಿಸಿದರು, ಇದು ಹತ್ತಿರದ ಜನರ ಗಮನ ಸೆಳೆಯಿತು. ಸ್ಥಳಕ್ಕೆ ಧಾವಿಸಿದ ಸ್ಥಳೀಯರು ನೀರಿನಲ್ಲಿ ಮುಳುಗುತ್ತಿದ್ದ ಯುವಕರ ನೆರವಿಗೆ ಧಾವಿಸಿದ್ದಾರೆ. ಘಟನೆ ನಡೆದಾಗ ಬಿಜೆಪಿ ಶಾಸಕ ಸೋಲಂಕಿ ಬೀಚ್‌ನಲ್ಲಿದ್ದು, ಯುವಕರನ್ನು ರಕ್ಷಿಸಲು ನೀರಿಗೆ ಹಾರಿದ್ದಾರೆ.

ಪ್ರಮುಖ ಸುದ್ದಿ :-   ತಪ್ಪು ಮಾಹಿತಿ ನೀಡಲಾಗಿದೆ : ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಮೋದಿ ಭೇಟಿಗೆ ಸಮಯಾವಕಾಶ ಕೋರಿ ಬಹಿರಂಗ ಪತ್ರ ಬರೆದ ಖರ್ಗೆ

ನಾಲ್ವರು ಯುವಕರಲ್ಲಿ ಮೂವರನ್ನು ರಕ್ಷಿಸಲಾಗಿದೆ; ನಾಲ್ಕನೆಯವರಾದ, ಜೀವನ್ ಗುಜಾರಿಯಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಹೀರಾ ಸೋಲಂಕಿ ಅವರು ಇತರರ ಸಹಾಯದಿಂದ ಯಶಸ್ವಿಯಾಗಿ ಮೂವರು ಯುವಕರನ್ನು ರಕ್ಷಿಸಿದ್ದಾರೆ. ನಾಲ್ವರು ಯುವಕರಲ್ಲಿ ಕಲ್ಪೇಶ್ ಶಿಯಾ, ನಿಕುಲ್ ಗುಜಾರಿಯಾ, ವಿಜಯ್ ಗುಜಾರಿಯಾ ಅವರನ್ನು ಅವರು ರಕ್ಷಿಸಿದರು. ಆದರೆ ಮತ್ತೊಬ್ಬ ಯುವಕನ್ನು ರಕ್ಷಿಸಲು ಸಾಧ್ಯವಾಗಿಲ್ಲ.

ದೀರ್ಘ ಹುಡುಕಾಟದ ನಂತರ ಜೀವನ್ ಗುಜಾರಿಯಾ ಎಂಬಾತನ ಮೃತದೇಹ ಸಿಕ್ಕಿದೆ. ಯುವಕರನ್ನು ಸೋಲಂಕಿ ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ಶಾಸಕನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ಮೋದಿ, ರಾಹುಲ್ ಗಾಂಧಿಯಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಉತ್ತರ ನೀಡಲು ಚುನಾವಣಾ ಆಯೋಗ ಸೂಚನೆ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement