ಫ್ರೆಂಚ್ ಓಪನ್ 2023 : ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ಇಗಾ ಸ್ವಿಯಾಟೆಕ್

ಪ್ಯಾರಿಸ್‌: ಶನಿವಾರ ನಡೆದ 2023 ರ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಶ್ರೇಯಾಂಕ ರಹಿತ ಕರೋಲಿನಾ ಮುಚೋವಾ ಅವರನ್ನು ಸೋಲಿಸುವ ಮೂಲಕ ವಿಶ್ವದ ನಂಬರ್ ಒನ್ ಆಟಗಾರ್ತಿ ಹಾಗೂ ಹಾಲಿ ಚಾಂಪಿಯನ್‌ ಇಗಾ ಸ್ವಿಯಾಟೆಕ್ ತನ್ನ ಫ್ರೆಂಚ್‌ ಓಪನ್‌ ಟೆನಿಸ್‌ನ ರೋಲ್ಯಾಂಡ್ ಗ್ಯಾರೋಸ್ ಕಿರೀಟವನ್ನು ಮತ್ತೆ ಗೆದ್ದಿದ್ದಾರೆ.
22 ವರ್ಷದ ಸ್ವಿಯಾಟೆಕ್ ಅವರು ಜೆಕ್ ಗಣರಾಜ್ಯದ ಮುಚೋವಾ ವಿರುದ್ಧ 6-2, 5-7, 6-4 ಅಂತರದ ಜಯ ಸಾಧಿಸಿ, ಮೋನಿಕಾ ಸೆಲೆಸ್ (1990, 1991, 2002) ನಂತರ ಫ್ರೆಂಚ್ ಓಪನ್‌ನಲ್ಲಿ ಸತತ ಪ್ರಶಸ್ತಿಗಳನ್ನು ಗೆದ್ದ ಅತ್ಯಂತ ಕಿರಿಯ ಮಹಿಳಾ ಆಟಗಾರ್ತಿ ಎನಿಸಿಕೊಂಡರು. ಸ್ವಿಯಾಟೆಕ್ ಅವರು ತಮ್ಮ ಮೊದಲ ನಾಲ್ಕು ಗ್ರ್ಯಾಂಡ್ ಸ್ಲಾಮ್ ಫೈನಲ್‌ಗಳಲ್ಲಿ ಪ್ರತಿಯೊಂದನ್ನು ಗೆದ್ದುಕೊಂಡ ಮಹಿಳೆಯಾಗಿ ಸೆಲೆಸ್ ಮತ್ತು ನವೋಮಿ ಒಸಾಕಾ ಅವರ ಸಾಳಿಗೆ ಸೇರ್ಪಡೆಯಾದರು.
ಬೆಲ್ಜಿಯಂನ ಜಸ್ಟಿನ್ ಹೆನಿನ್ (2005, 2006, 2007) ನಂತರ ಸ್ವಿಯಾಟೆಕ್ ಫ್ರೆಂಚ್ ಓಪನ್ ಪ್ರಶಸ್ತಿಗಳನ್ನು ಬ್ಯಾಕ್-ಟು-ಬ್ಯಾಕ್ ಗೆದ್ದ ಮೊದಲ ಮಹಿಳೆಯಾದರು. ಪೋಲಿಷ್ ತಾರೆ ಸೆರೆನಾ ವಿಲಿಯಮ್ಸ್ (1999 ಯುಎಸ್ ಓಪನ್, 2002 ಫ್ರೆಂಚ್, 2002 ವಿಂಬಲ್ಡನ್, 2002 ಯುಎಸ್ ಓಪನ್) ನಂತರ ನಾಲ್ಕನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸ್ವಿಯಾಟೆಕ್‌ನ ನಾಲ್ಕು ಪ್ರಮುಖ ಪ್ರಶಸ್ತಿಗಳಲ್ಲಿ ಫ್ರೆಂಚ್ ಓಪನ್ (2020, 2022, 2023) ಮತ್ತು ಯುಎಸ್ ಓಪನ್ (2023) ಸೇರಿವೆ.
ಇಬ್ಬರು ಆಟಗಾರರ ನಡುವೆ ತೀವ್ರವಾದ ಸೆಣೆಸಾಟ ನಡೆಯಿತು. ನಿರ್ಣಾಯಕ ಅಂತಿಮ ಸೆಟ್‌ನಲ್ಲಿ 4-4 ರಲ್ಲಿ ಸಮಬಲ ಇದ್ದಾಗ ಸ್ವಿಯಾಟೆಕ್ ಶಕ್ತಿಯುತ ಹೊಡೆತಗಳೊಂದಿಗೆ ಆಟದಲ್ಲಿ ಪ್ರಾಬಲ್ಯ ಸಾಧಿಸಿದರು, ಇದೇ ವೇಳೆ ಮುಚೋವಾ ತಪ್ಪುಗಳನ್ನು ಮಾಡಿದರು. ಎರಡು ಚಾಂಪಿಯನ್‌ಶಿಪ್ ಪಾಯಿಂಟ್‌ ಇದ್ದಾಗ ಮುಚೋವಾ ಡಬಲ್ ಫಾಲ್ಟ್ ಮಾಡಿ, ಸ್ವಿಯಾಟೆಕ್ ಅನ್ನು ಮತ್ತೊಮ್ಮೆ ಫ್ರೆಂಚ್ ಓಪನ್ ಚಾಂಪಿಯನ್ ಆಗಿ ಮಾಡಿದರು.

ಇಂದಿನ ಪ್ರಮುಖ ಸುದ್ದಿ :-   ಇದೆಂಥ ಐಫೋನ್‌ ಕ್ರೇಜ್‌..: ಮಾಸ್ಕ್‌ ಧರಿಸಿ ಆಪಲ್ ಸ್ಟೋರ್ ಗೆ ನುಗ್ಗಿ ಐಫೋನ್‌-ಐಪ್ಯಾಡ್‌ಗಳನ್ನು ಲೂಟಿ ಹೊಡೆದು ನೂರಾರು ಟೀನೇಜರ್ಸ್‌ | ವೀಕ್ಷಿಸಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement