120ನೇ ಜನ್ಮದಿನ ಆಚರಿಸಿಕೊಂಡ ಮೊಸಳೆ ಪಾರ್ಕ್‌ನಲ್ಲಿರುವ ವಿಶ್ವದ ಅತಿ ದೊಡ್ಡ ಮೊಸಳೆ…!

ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಗ್ರೀನ್ ಐಲ್ಯಾಂಡ್‌ನಲ್ಲಿರುವ ಮರೀನ್‌ಲ್ಯಾಂಡ್ ಮೊಸಳೆ ಪಾರ್ಕ್‌ನಲ್ಲಿ ನೆಲೆಸಿರುವ ಕ್ಯಾಸಿಯಸ್ ಹೆಸರಿನ ವಿಶ್ವದ ಅತಿದೊಡ್ಡ ಮೊಸಳೆ, ಈ ವಾರ ತನ್ನ 120 ನೇ ಜನ್ಮದಿನ ಆಚರಿಸಿಕೊಂಡಿದೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.
ಸುಮಾರು 18 ಅಡಿ ಉದ್ದದ ಉಪ್ಪುನೀರಿನ ದೈತ್ಯ ಮೊಸಳೆ 1987 ರಿಂದ ಉದ್ಯಾನವನದಲ್ಲಿ ವಾಸಿಸುತ್ತಿದೆ ಮತ್ತು ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ ವಿಶ್ವದ ಅತಿದೊಡ್ಡ ಮೊಸಳೆ ಎಂಬ ದಾಖಲೆ ಹೊಂದಿದೆ.
ಮೈಲಿಗಲ್ಲು ದಾಟಿದ ಕ್ಯಾಸಿಯಸ್ ಹೆಸರಿನ ಈ ಗಂಡು ಮೊಸಳೆ ತನ್ನ 120 ನೇ ಜನ್ಮದಿನ ಆಚರಿಸಿಕೊಂಡಿತು. “ಆಗ ಅವನು ದೊಡ್ಡ ಮುದುಕ ಮೊಸಳೆಯಾಗಿದ್ದನು … ಆ ಗಾತ್ರದ ಮೊಸಳೆಗಳು ಸಾಮಾನ್ಯವಲ್ಲ. ಈಗ ಅದು 16 ಅಡಿ, 10 ಇಂಚುಗಳಷ್ಟು ಉದ್ದವಿದೆ. ಕನಿಷ್ಠ 6 ಇಂಚುಗಳಷ್ಟು ಬಾಲವು ಕಾಣೆಯಾಗಿದೆ ಮತ್ತು ಸ್ವಲ್ಪ ಮೂತಿಯಲ್ಲಿ ವ್ಯತ್ಯಾಸವಾಗಿದೆ” ಎಂದು ಮೊಸಳೆ ಸಂಶೋಧಕ ಗ್ರೇಮ್ ವೆಬ್ ಎಬಿಸಿಗೆ ತಿಳಿಸಿದ್ದಾರೆ.

1984 ರಲ್ಲಿ ಆಸ್ಟ್ರೇಲಿಯಾದ ಉತ್ತರ ಪ್ರಾಂತ್ಯದ ಫಿನ್ನಿಸ್ ನದಿಯಲ್ಲಿ ಸೆರೆಹಿಡಿಯುವ ಸಮಯದಲ್ಲಿ ಕ್ಯಾಸಿಯಸ್ ಮೊಸಳೆ 80 ವರ್ಷ ವಯಸ್ಸಿನದಾಗಿತ್ತು ಎಂದು ಅಂದಾಜಿಸಲಾಗಿದೆ ಎಂದು ಅವರು ಹೇಳಿದರು.
“ಬಹುಶಃ ಈ ಮೊಸಳೆಗೆ ಈಗ ಒಂದು ಶತಮಾನದ ಮೇಲ್ಪಟ್ಟು ವಯಸ್ಸಾಗಿದೆ- ಬಹುಶಃ 120 ವರ್ಷಗಳಾಗಿದೆ. ಸಂಶೋಧಕರ ಅಂದಾಜಿನ ಆಧಾರದ ಮೇಲೆ ಮೊಸಳೆಯು ಸುಮಾರು 120 ವರ್ಷ ಹಳೆಯದು ಎಂದು ಹೇಳಿದರು. ಈಗಲೂ ಸಹ, ಸುಮಾರು 120 ನೇ ವಯಸ್ಸಿನಲ್ಲಿಯೂ ಈ ಮೊಸಳೆಗೆ ಬಲ ಮತ್ತು ಶಕ್ತಿ ಇದೆ” ಎಂದು ಸ್ಕಾಟ್ ಹೇಳಿದರು.

ಇಂದಿನ ಪ್ರಮುಖ ಸುದ್ದಿ :-   ಅದ್ಭುತ ಕ್ಯಾಚ್‌...: ಎರಡನೇ ಸ್ಲಿಪ್‌ನಲ್ಲಿ ರೀ ಬೌಂಡ್‌ ಆದ ಅಸಾಧಾರಣವಾದ ಕ್ಯಾಚ್‌ ಅನ್ನು ಒಂದೇ ಕೈಯಲ್ಲಿ ಹಿಡಿದ ಆಟಗಾರ | ವೀಕ್ಷಿಸಿ

ವಯಸ್ಸಿನ ಹೊರತಾಗಿಯೂ, ಕ್ಯಾಸಿಯಸ್ ಗಮನಾರ್ಹವಾದ ಚೈತನ್ಯವನ್ನು ಪ್ರದರ್ಶಿಸುತ್ತದೆ, ಉದ್ಯಾನವನದ ಅತ್ಯಂತ ಉತ್ಸಾಹಭರಿತ ಮತ್ತು ಅತ್ಯಂತ ಆಕರ್ಷಕವಾಗಿರುವ ಸರೀಸೃಪಗಳಲ್ಲಿ ಇದು ಒಂದಾಗಿದೆ. ಸಾಮಾನ್ಯವಾಗಿ, ದೊಡ್ಡ ಹಳೆಯ ಸರೀಸೃಪಗಳು ಬಹಳ ವಿಧೇಯ ಮತ್ತು ನಿರಾಸಕ್ತಿಯಿಂದ ಕೂಡಿರುತ್ತವೆ. ಮೊಸಳೆ ಕ್ಯಾಸಿಯಸ್ ಯಾವಾಗಲೂ ತುಂಬಾ ತೊಡಗಿಸಿಕೊಂಡಿರುತ್ತದೆ, ಈ ಮೊಸಳೆ ನಮ್ಮನ್ನು ನೋಡಿದಾಗಲೆಲ್ಲಾ, ಸಮೀಪಕ್ಕೆ ಬಂದು ಶುಭಾಷಯ ಹೇಳಲು ಬಯಸುತ್ತದೆ ಮತ್ತು ನಮ್ಮನ್ನು ನೋಡಿದಾಕ್ಷಣ ಅದರ ಕಣ್ಣುಗಳು ಬೆಳಗುತ್ತವೆ ಎಂದು ಸ್ಕಾಟ್ ಹೇಳಿದ್ದಾರೆ.
ಬ್ರಿಟನ್‌ನ ದಿವಂಗತ ರಾಣಿ ಎಲಿಜಬೆತ್ II, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಥೈಲ್ಯಾಂಡ್ ರಾಜ ಮತ್ತು ಆಸ್ಟ್ರೇಲಿಯಾದ ಮಾಜಿ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಸೇರಿದಂತೆ ಕ್ಯಾಸಿಯಸ್ ನೋಡಲು ಹಲವು ದಿಗ್ಗಜರು ಆಗಮಿಸಿದ್ದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಇಂದಿನ ಪ್ರಮುಖ ಸುದ್ದಿ :-   ಕೆನಡಾದ ಅತ್ಯುತ್ತಮ ಪ್ರಧಾನಿ ಅಭ್ಯರ್ಥಿ: ಭಾರತ-ಕೆನಡಾ ಬಿಕ್ಕಟ್ಟಿನ ವೇಳೆ ಗ್ಲೋಬಲ್ ನ್ಯೂಸ್-ಇಪ್ಸೋಸ್ ಸಮೀಕ್ಷೆ ಡಾಟಾ ಬಿಡುಗಡೆ ; ಪೊಯ್ಲಿವ್ರೆಯತ್ತ ಒಲವು, ಹಿಂದೆ ಬಿದ್ದ ಪ್ರಧಾನಿ ಟ್ರುಡೊ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement