ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಇಂದಿನಿಂದ ಆರಂಭ : ಮೊಬೈಲ್‌ನಲ್ಲೂ ನೋಂದಣಿ ಸೌಲಭ್ಯ, ಇಲ್ಲಿದೆ ಲಿಂಕ್‌, 2 ದಾಖಲೆ ಅಗತ್ಯ

ಬೆಂಗಳೂರು: ರಾಜ್ಯ ಸರ್ಕಾರದ ಮಾಸಿಕ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಸೌಲಭ್ಯ ಕಲ್ಪಿಸುವ ‘ಗೃಹ ಜ್ಯೋತಿ’ ಯೋಜನೆಗೆ ಫಲಾನುಭವಿಗಳ ನೋಂದಣಿ ಇಂದಿನಿಂದ (ಜೂನ್‌ 18) ಆರಂಭವಾಗಲಿದೆ.
ಯೋಜನೆಯ ಸೌಲಭ್ಯ ಪಡೆಯಲು ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್‌ನಲ್ಲಿ ವಿಶೇಷವಾಗಿ ರೂಪಿಸಲಾಗಿರುವ ವೆಬ್‌ಪುಟಕ್ಕೆ ಲಾಗಿನ್‌ ಆಗಬೇಕು. ಆ ಪೋರ್ಟಲ್‌ನಲ್ಲಿ ಕೇಳಿರುವ ಮಾಹಿತಿಯನ್ನು ನೀಡುವ ಮೂಲಕ ಯೋಜನೆಗೆ ಹೆಸರು ನೋಂದಾಯಿಸಬಹುದು.
ಎರಡು ದಾಖಲೆ ಇದ್ದರೆ ಸಾಕು
ಗೃಹಜ್ಯೋತಿ ಉಚಿತ ಯೋಜನೆಗೆ ನೋಂದಣಿಗೆ ಮನೆಯ ಕರೆಂಟ್‌ ಬಿಲ್‌ ಮತ್ತು ಆಧಾರ್‌ ಕಾರ್ಡ್‌ ಬೇಕು. ಆಧಾರ್‌ ಕಾರ್ಡ್‌ ಸಂಖ್ಯೆ ಹಾಗೂ ಕರೆಂಟ್‌ ಬಿಲ್‌ನಲ್ಲಿ ನಮೂದಾರುವ ವಿದ್ಯುತ್‌ ಸಂಪರ್ಕದ ಖಾತೆ ಸಂಖ್ಯೆ ಕೇಳಲಾಗುತ್ತದೆ. ಅಲ್ಲದೆ, ಖಾತೆದಾರರ ಹೆಸರು, ನಿಮ್ಮದು ಯಾವ ಎಸ್ಕಾಂ (ವಿದ್ಯುತ್‌ ಸರಬರಾಜು ಕಂಪನಿ) ಎಂಬ ಮಾಹಿತಿ ಕೇಳಲಾಗುತ್ತದೆ.
ಗೃಹಜ್ಯೋತಿ ಯೋಜನೆ ನೋಂದಣಿಗೆ ನೆಟ್‌ ಸೆಂಟರ್‌ ಅಥವಾ ವಿದ್ಯುತ್ ಕಚೇರಿಗಳಿಗೆ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಮೊಬೈಲ್‌ನಲ್ಲಿಯೇ ಅಥವಾ ಲ್ಯಾಪ್‌ಟಾಪ್‌ನಲ್ಲಿ ನೋಂದಣಿ ಮಾಡಬಹುದು. ಇವುಗಳ ಜತಗೆ ಗ್ರಾಮ ಒನ್‌, ಬೆಂಗಳೂರು ಒನ್‌, ಕರ್ನಾಟಕ ಒನ್‌ ಕೇಂದ್ರಗಳು ಅಥವಾ ಯಾವುದೇ ವಿದ್ಯುತ್‌ ಕಚೇರಿಗಳಲ್ಲಿಯೂ ನೋಂದಾಯಿಸಬಹುದಾಗಿದೆ.

ಪ್ರಮುಖ ಸುದ್ದಿ :-   ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಲ್ಲೂ ತಮ್ಮ ಪಕ್ಷದಿಂದ ಸ್ಪರ್ಧೆ ; ಮಾಜಿ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್

ನೋಂದಣಿ ಲಿಂಕ್‌
200 ಯೂನಿಟ್‌ ಉಚಿತ ವಿದ್ಯುತ್‌ ಸೌಲಭ್ಯ ಪಡೆಯುವ ಗೃಹಲಕ್ಷ್ಮೀ ಯೋಜನೆ ನೋಂದಣಿ ಲಿಂಕ್‌ – http://sevasindhugs.karnataka.gov.in.
ಸೇವಾಸಿಂಧು ಪೋರ್ಟಲ್‌ ವೆಬ್‌ ಪುಟಕ್ಕೆ ಹೋದರೆ ಅಲ್ಲಿ ಗೃಹಜ್ಯೋತಿ ನೋಂದಣಿ ಲಿಂಕ್‌ ಕಾಣುತ್ತದೆ. ಆ ಲಿಂಕ್‌ ಕ್ಲಿಕ್‌ ಮಾಡಿದರೆ ನೋಂದಣಿ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಖಾತೆದಾರರ ಸಂಖ್ಯೆ ನಮೂದು ಮಾಡುತ್ತಿದ್ದಂತೆ ವಿದ್ಯುತ್‌ ಸಂಪರ್ಕ, ಖಾತೆದಾರರ ಹೆಸರು, ವಿಳಾಸ ಎಲ್ಲಾ ಬರುತ್ತದೆ. ಆ ಬಳಿಕ ಬಾಡಿಗೆದಾರರೋ ಅಥವಾ ಮಾಲೀಕರೋ ಎಂಬುದನ್ನು ನಮೂದು ಮಾಡಿ ಆಧಾರ್‌ ಸಂಖ್ಯೆ ನಮೂದು ಮಾಡಿ, ಸಂಪರ್ಕಕ್ಕೆ ಮೊಬೈಲ್‌ ನಂಬರ್‌ ನೀಡಬೇಕು. ಆಗ ಆಧಾರ್‌ ಓಟಿಪಿ ಹಾಗೂ ಮೊಬೈಲ್‌ ನಂಬರ್‌ ಓಟಿಪಿ ಬರುತ್ತದೆ. ಅವುಗಳನ್ನು ಪರಿಶೀಲನೆ ಮಾಡಿ ಅರ್ಜಿಯನ್ನು ಸಬ್‌ಮಿಟ್‌ ಮಾಡಬೇಕು.
ವಿದ್ಯುತ್‌ ಗೃಹ ಬಹಳಕೆದಾರರೆಲ್ಲ ಅರ್ಹರು. ವಾಣಿಜ್ಯ ಕಟ್ಟಡಗಳಿಗೆ ಸೌಲಭ್ಯ ಇಲ್ಲ. ಗೊಂದಲ ಉಂಟಾದರೆ ಸಹಾಯವಾಣಿ 1912 ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಬಾಡಿಗೆದಾರರಾಗಿದ್ದಲ್ಲಿ, ತಾವು ವಾಸಿಸುವ ಮನೆ ವಿಳಾಸ ದೃಢಪಡಿಸುವ ಆಧಾರ್‌ ಸಂಖ್ಯೆಯನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ಜೋಡಣೆ ಮಾಡಿ ನೋಂದಾಯಿಸುವ ಮೂಲಕ ಸೌಲಭ್ಯ ಪಡೆಯಬಹುದಾಗಿದೆ.
ನೋಂದಣಿ ಮಾಡಿದ ಬಳಿಕ ವಿದ್ಯುತ್‌ ಸರಬರಾಜು ಕಂಪನಿ ಸಿಬ್ಬಂದಿ ಬಂದು ಅರ್ಜಿಯನ್ನು ಪರಿಶೀಲನೆ ಮಾಡುತ್ತಾರೆ. ಕಳೆದ ಒಂದು ವರ್ಷ ಬಳಕೆ ಮಾಡಿರುವ ವಿದ್ಯುತ್‌ ಪ್ರಮಾಣ ಸರಾಸರಿ ತೆಗೆದುಕೊಂಡು ಮಾಸಿಕ ಉಚಿತ ಬಳಕೆಯ ಯೂನಿಟ್‌ ನಿಗದಿ ಪಡಿಸುತ್ತಾರೆ. ಆ ಬಳಿಕ ಯೋಜನೆಯು ಅಧಿಕೃತವಾಗಿ ಸಿಗಲಿದೆ.

ಪ್ರಮುಖ ಸುದ್ದಿ :-   ಜೋಗಿ, ಕಬ್ಬಿನಾಲೆ, ಶಿವಾನಂದ ಹೆಗಡೆಗೆ ಕೆರೆಮನೆ ʼಮಹಾಬಲ ಪ್ರಶಸ್ತಿʼ ಪ್ರಕಟ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement