ಹೈದರಾಬಾದ್ : ತೆಲಂಗಾಣ ಬಿಜೆಪಿ ಸಂಸದ ಸೋಯಮ್ ಬಾಪು ರಾವ್ ಅವರದ್ದು ಎನ್ನಲಾದ ವೀಡಿಯೊ ಈಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ವೀಡಿಯೊದಲ್ಲಿ ಸೋಯಮ್ ಬಾಪುರಾವ್ ಅವರು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ (ಎಂಪಿಎಲ್‌ಎಡಿ) ಯೋಜನೆಯ ಹಣದಲ್ಲಿ (ಸರ್ಕಾರದ ಹಣ) ಜನಪರ ಅಭಿವೃದ್ಧಿ ಕಾರ್ಯ ಮಾಡುವ ಬದಲು ತನಗಾಗಿ ಮನೆ ನಿರ್ಮಿಸಿಕೊಂಡಿದ್ದೇನೆ ಹಾಗೂ ಮಗನ ಮದುವೆ ಮಾಡಿದ್ದೇನೆ ಎಂದು ಒಪ್ಪಿಕೊಳ್ಳುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ. .
ಸೋಮವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾಡಿದ ಭಾಷಣದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗಿದೆ. ವೀಡಿಯೊದಲ್ಲಿ, ಆದಿಲಾಬಾದ್‌ನ ಲೋಕಸಭಾ ಸದಸ್ಯರು ತಮ್ಮ ಕ್ಷೇತ್ರದಲ್ಲಿ ಬಿಜೆಪಿ ಪ್ರತಿನಿಧಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುವುದನ್ನು ಕಾಣಬಹುದು. ಈ ಹಣವನ್ನು ವೈಯಕ್ತಿಕ ಅಗತ್ಯಗಳಿಗೆ ಬಳಸುವುದರಲ್ಲಿ ಯಾವುದೇ ತಪ್ಪಿಲ್ಲ. ತಾನು ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ (ಎಂಪಿಎಲ್‌ಎಡಿ) ಹಣವನ್ನು ಬಳಸಿಲ್ಲ ಎಂದು ಒಪ್ಪಿಕೊಂಡಿರುವ ಅವರು, ಆದರೆ ಇತರ ಕೆಲವು ಸಂಸದರಂತೆ ಆ ಹಣವನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಂಡಿಲ್ಲ ಎಂದು ಆದಿಲಾಬಾದ್ ಸಂಸದರು ಹೇಳಿದ್ದಾರೆ.
ಸ್ವಂತ ಮನೆ ಇಲ್ಲದಿದ್ದರೆ ಮರ್ಯಾದೆ ಇಲ್ಲ ಎಂಬ ಕಾರಣಕ್ಕೆ ಸಂಸದರ ನಿಧಿಯಿಂದ ಮನೆ ಕಟ್ಟಿದ್ದೇನೆ, ಸಂಸದರ ನಿಧಿ ಮೂಲಕ ಮಗನ ಮದುವೆ ಮಾಡಿದ್ದೇನೆ. ಅಭಿವೃದ್ಧಿಗೆ ಹಣ ಬಳಕೆಯಾಗಿಲ್ಲ ನಿಜ. ಆದರೆ ಹಿಂದಿನ ಸಂಸದರಂತೆ ನಾನು ಪೂರ್ತಿ ಹಣವನ್ನು ದುರುಪಯೋಗಪಡಿಸಿಕೊಳ್ಳಲಿಲ್ಲ ಎಂದು ಅವರು ಹೇಳಿದರು.
ನಾವು ಎರಡನೇ ಬಾರಿಗೆ ₹ 2.5 ಕೋಟಿ ಪಡೆದಿದ್ದೇವೆ, ಆದ್ದರಿಂದ ನಾವು ಸ್ವಲ್ಪ ಹಣವನ್ನು ಈ ಭಾಗದ ಎಂಪಿಟಿಸಿಗಳು (ಮಂಡಲ ಪರಿಷತ್ತಿನ ಕ್ಷೇತ್ರಗಳು) ಮತ್ತು ಕೌನ್ಸಿಲರ್‌ಗಳಿಗೆ ನೀಡಿದ್ದೇವೆ ಎಂದು ರಾವ್ ಹೇಳುವುದನ್ನು ವೀಡಿಯೊದಲ್ಲಿ ಕೇಳಬಹುದು.
ಕ್ಷೇತ್ರದಲ್ಲಿ ನನಗೆ ಮನೆ ಇಲ್ಲದ ಕಾರಣ ಸ್ವಲ್ಪ ಹಣವನ್ನು ಮನೆ ನಿರ್ಮಾಣಕ್ಕೆ ಬಳಸಿದ್ದೇನೆ. ಬೇರೆ ಯಾವ ನಾಯಕರೂ ಇದನ್ನು ಒಪ್ಪಿಕೊಳ್ಳುವುದಿಲ್ಲ, ಆದರೆ ನಾನು [ಅದನ್ನು] ಒಪ್ಪಿಕೊಳ್ಳುತ್ತಿದ್ದೇನೆ,” ಎಂದು ಅವರು ಹೇಳಿದರು. “ಮಗನ ಮದುವೆ ಮಾಡಬೇಕಿತ್ತು, ಆದ್ದರಿಂದ ನಾನು ನನ್ನ ಮಗನ ಮದುವೆಗೆ ಆ ಹಣವನ್ನು ಬಳಸಿದ್ದೇನೆ” ಎಂದು ಅವರು ಹೇಳಿದ್ದಾರೆ.
ನಾನು ನಿಮಗೆ ಹೇಳಿದ್ದನ್ನು ಯಾವೊಬ್ಬ ನಾಯಕರೂ ಹೇಳುವುದಿಲ್ಲ ಎಂದು ಸಂಸದ ಸೋಯಮ್ ಬಾಪುರಾವ್ ಹೇಳಿದ್ದಾರೆ.
ವೀಡಿಯೋ ವೈರಲ್ ಆಗುತ್ತಿದ್ದಂತೆ ಮತ್ತು ವಿರೋಧ ಪಕ್ಷಗಳು ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಬಾಪುರಾವ್ ಸಂಜೆ ಹೇಳಿಕೆ ನೀಡಿ
ನಂತರ ಬಿಡುಗಡೆ ಮಾಡಿದ ವೀಡಿಯೊ ಹೇಳಿಕೆಯಲ್ಲಿ ಬಾಪು ರಾವ್ ಅವರು ಭ್ರಷ್ಟಾಚಾರದ ಹೇಳಿಕೆಯನ್ನು ನಿರಾಕರಿಸಿದರು. ತಾನು ಎಂಪಿಎಲ್‌ಎಡಿ (MPLAD) ಹಣವನ್ನು ದುರುಪಯೋಗಪಡಿಸಿಕೊಂಡಿರುವುದನ್ನು ನಿರಾಕರಿಸಿದರು. ಆಂತರಿಕ ಸಭೆಯಲ್ಲಿ ಮಾತನಾಡಿದ ವಿಷಯವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬಾರದು ಎಂದು ಹೇಳಿದರು.
ಬಿಆರ್‌ಎಸ್ (BRS) ನಾಯಕರು ನನ್ನ ಬಗ್ಗೆ “ಸುಳ್ಳು” ಹರಡುತ್ತಿದ್ದಾರೆ ಎಂದು ಹೇಳಿದ್ದಾರೆ.. “ನಿಜವಾದ ಸಂಗತಿಗಳನ್ನು ತಿಳಿಯದೆ ನನ್ನಂತಹ ಆದಿವಾಸಿ ಸಂಸದರನ್ನು ವಿವಾದಕ್ಕೆ ಎಳೆಯುವುದು ಸರಿಯಲ್ಲ” ಎಂದು ಅವರು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ