ತಿರುವನಂತಪುರಂ: 55 ವರ್ಷದ ವ್ಯಕ್ತಿಯೊಬ್ಬ ತನ್ನ ವಿಚ್ಛೇದನ ಪ್ರಕ್ರಿಯೆ ವಿಳಂಬವಾಗಿದ್ದಕ್ಕೆ ಅಸಮಾಧಾನಗೊಂಡು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರ ಕಾರಿಗೆ ಹಾನಿ ಮಾಡಿದ ಧ್ವಂಸಗೊಳಿಸಿದ ಘಟನೆ ಕೇರಳದ ತಿರುವಲ್ಲಾ ಕೋರ್ಟ್ ಆವರಣದಲ್ಲಿ ನಡೆದಿದೆ.
55 ವರ್ಷದ ಇ.ಪಿ. ಜಯಪ್ರಕಾಶ ಎಂಬ ವ್ಯಕ್ತಿಯನ್ನು ಪೊಲೀಸರು ನಂತರ ವಶಕ್ಕೆ ತೆಗೆದುಕೊಂಡರು. ಬುಧವಾರ ಸಂಜೆ 4:30ರ ಸುಮಾರಿಗೆ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ,ವಿಚಾರಣೆಯ ವೇಳೆ ಕೋಪಗೊಂಡು ನ್ಯಾಯಾಲಯದಿಂದ ಹೊರಬಂದ ನಂತರ ಬುಧವಾರ ಇಲ್ಲಿನ ತಿರುವಲ್ಲಾ ನ್ಯಾಯಾಲಯದ ಸಂಕೀರ್ಣದೊಳಗೆ ನಿಲ್ಲಿಸಿದ್ದ ನ್ಯಾಯಾಧೀಶರ ಕಾರಿನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾನೆ. ನ್ಯಾಯಾಲಯದಿಂದ ಹೊರಬಂದ ನಂತರ, ಜಯಪ್ರಕಾಶ ಹತ್ತಿರದ ಮಾರುಕಟ್ಟೆಯಿಂದ ಗುದ್ದಲಿಯನ್ನು ಖರೀದಿಸಿ ತಂದು ಕಾರಿನ ಗಾಜುಗಳನ್ನು ನಾಲ್ಕು ಕಡೆ ಒಡೆದಿದ್ದಾನೆ. ನಂತರ ಜಯಪ್ರಕಾಶ ಕಾರಿನ ನಂಬರ್ ಪ್ಲೇಟ್ ಮತ್ತು ಮುಂಭಾಗದ ನಡುವೆ ಗುದ್ದಲಿಯನ್ನು ನೂಕಿದ್ದಾನೆ. ನಂತರ ಕಾರಿನ ಸುತ್ತಲೂ ನಡೆಯುತ್ತ ನ್ಯಾಯಾಧೀಶರನ್ನು ನಿಂದಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯಾಯಾಲಯದ ಕೆಲಸಕ್ಕೆ ಅಡ್ಡಿ, ಬೆದರಿಕೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ ಆರೋಪದ ಮೇಲೆ ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪತ್ನಿಯೊಂದಿಗೆ ವಿಚ್ಛೇದನ ವಿಚಾರದಲ್ಲಿ ವಿಳಂಬ ಮಾಡಿದ್ದಕ್ಕೆ ಕೋಪಗೊಂಡು ಹೀಗೆ ಮಾಡಿದ್ದಾಗಿ ಜಯಪ್ರಕಾಶ ಪೊಲೀಸರಿಗೆ ತಿಳಿಸಿದ್ದಾನೆ.
ಪತ್ನಿಯೊಂದಿಗೆ ವಿವಾದದಿಂದಾಗಿ ಆರೋಪಿ, ನ್ಯಾಯಾಲಯದಿಂದ ತನಗೆ ಸ್ವಾಭಾವಿಕ ನ್ಯಾಯ ಸಿಗುತ್ತಿಲ್ಲ ಎಂದು ಹೇಳುತ್ತಿದ್ದ. ತನ್ನ ಹೆಂಡತಿಯ ವಕೀಲರು ಮತ್ತು ನ್ಯಾಯಾಧೀಶರು ತಮ್ಮ ವಿರುದ್ಧ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ತನನ ವಾದವನ್ನು ಕೇಳುತ್ತಿಲ್ಲ ಎಂದು ಆ ವ್ಯಕ್ತಿ ಆರೋಪಿಸಿದ್ದಾನೆ ಎಂದು ಅಧಿಕಾರಿ ಹೇಳಿದರು.
ಆರಂಭದಲ್ಲಿ 2017 ರಲ್ಲಿ ಪಥನಂತಿಟ್ಟದ ನ್ಯಾಯಾಲಯದಲ್ಲಿ ದಂಪತಿ ನಡುವಿನ ಪ್ರಕರಣದ ವಿಚಾರಣೆ ನಡೆಯುತ್ತಿತ್ತು ಎಂದು ಅಧಿಕಾರಿ ಹೇಳಿದರು, ಆದರೆ ಆ ವ್ಯಕ್ತಿ ನಂತರ ಆ ನ್ಯಾಯಾಲಯದಲ್ಲಿ ತನಗೆ ನಂಬಿಕೆಯಿಲ್ಲ ಎಂದು ಆರೋಪಿಸಿ ಅಲ್ಲಿಂದ ಪ್ರಕರಣ ವರ್ಗಾಯಿಸಲು ಕೇರಳ ಹೈಕೋರ್ಟ್‌ಗೆ ತೆರಳಿದ್ದ. ನಂತರ, ದಂಪತಿ ನಡುವಿನ ಪ್ರಕರಣಗಳನ್ನು ಈ ವರ್ಷ ಇಲ್ಲಿನ ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು” ಎಂದು ಅಧಿಕಾರಿ ಹೇಳಿದರು.
HM SADANANDA
ಅತಿಯಾದ ವಿಳಂಬದ ನ್ಯಾಯಕ್ಕೆ ಶಿಕ್ಷೆ!? ಇದನ್ನು ಕಾನೂನು ರೀತಿಯಲ್ಲಿ ಸಮರ್ಥಿಸಲಾಗದು ಮತ್ತು ಖಂಡನೀಯ. ಆದರೆ ಯಾವುದೇ ಕಾರಣಕ್ಕೂ ಯೌವನವನ್ನು ವಿಳಂಬನ್ಯಾಯಕ್ಕೆ ಬಲಿಯಾಗಿಸುವುದು ಸರಿಯೇ!? ಕೇವಲ 2 ವರ್ಷಗಳಲ್ಲೇ ನಿರ್ಣಯಿಸಿದರೆ ಮಾತ್ರ ಸಾಮಾಜಿಕ ಜವಾಬ್ದಾರಿ ಮತ್ತು ನ್ಯಾಯಯುತ ಪರಿಹಾರ. ಸಿಗಲು ಸಾಧ್ಯ. ಈ ಪ್ರಕರಣವನ್ನು ಕೇವಲ IPC/ CRPC/ Section ಗಳಲ್ಲಿ ನಿರ್ಣಯಿಸಬಾರದು. ನ್ಯಾಯ ವಿಳಂಬಕ್ಕೆ ಕಾರಣ ಮತ್ತು ಆ ವ್ಯಕ್ತಿ ದೂರುತ್ತಿರುವಂತೆ ಉದ್ದೇಶಪೂರ್ವಕವಾಗಿ ನ್ಯಾಯ ವಿಳಂಬವಾಗುತ್ತಿದೆಯೇ ಎಂಬುದನ್ನೂ ತನಿಖೆಗೆ ಒಳಪಡಿಸಬೇಕು. ಹೈಕೋರ್ಟ್ ನ ಮುಖ್ಯನ್ಯಾಯಾಧೀಶರು ಇಡೀ ಪ್ರಕರಣದ ಬಗ್ಗೆ ಸಮಗ್ರ ತನಿಖೆ ಮಾಡಲು ಆದೇಶಿಸಬೇಕು!? ಸತ್ಯವನ್ನು ಕಂಡುಕೊಳ್ಳಲು.