ಆರು ರಾಜ್ಯಗಳಿಗೆ ರಾಜ್ಯಪಾಲರ ನೇಮಕ ; ಸುಧಾ ಯಾದವ್‌ ಕರ್ನಾಟಕದ ನೂತನ ರಾಜ್ಯಪಾಲರು

ನವದೆಹಲಿ: ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ಸೋಮವಾರ ನೇಮಕ ಮಾಡಲಾಗಿದೆ. ಕರ್ನಾಟಕ, ಕೇರಳಂ, ತಮಿಳುನಾಡು, ಒಡಿಶಾ, ಉತ್ತರಾಖಂಡ ಮತ್ತು ಸಿಕ್ಕಿಂ ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಿ ರಾಷ್ಟ್ರಪತಿ ಭವನ ಆದೇಶ ಹೊರಡಿಸಿದೆ.
ರಾಷ್ಟ್ರಪತಿ ಭವನದ ಪತ್ರಿಕಾ ಪ್ರಕಟಣೆಯ ಪ್ರಕಾರ, ರಾಜ್ಯಪಾಲ ಥಾವರಚಂದ ಗೆಹ್ಲೋಟ್‌ ಬದಲಿಗೆ ಸುಧಾ ಯಾದವ್ ಅವರನ್ನು ಕರ್ನಾಟಕದ ನೂತನ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಸುಧಾ ಯಾದವ್ ಅವರು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರಾಗಿದ್ದಾರೆ. ಕರ್ನಾಟಕದ ರಾಜ್ಯಪಾಲರಾಗಿದ್ದ ಥಾವರಚಂದ ಗೆಹ್ಲೋಟ್ ಅವರ ಉತ್ತರಾಧಿಕಾರಿಯಾಗಿ ಸುಧಾ ಯಾದವ್ ಅವರನ್ನು ನೇಮಕ ಮಾಡಲಾಗಿದೆ. ಸುಧಾ ಯಾದವ್ ಕರ್ನಾಟಕದ ಎರಡನೇ ಮಹಿಳಾ ರಾಜ್ಯಪಾಲರಾಗಲಿದ್ದಾರೆ. ಈ ಹಿಂದೆ 1999ರಿಂದ 2002ರವರೆಗೆ ವಿ.ಎಸ್ ರಮಾದೇವಿ ಅವರು ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರಾಗಿದ್ದರು.
ಥಾವರಚಂದ ಗೆಹ್ಲೋಟ್ ಅವರು 2021ರಲ್ಲಿ ಕರ್ನಾಟಕದ ರಾಜ್ಯಪಾಲರಾಗಿ ನೇಮಕವಾಗಿದ್ದರು. 5 ವರ್ಷಗಳ ಬಳಿಕ ಕರ್ನಾಟಕ ರಾಜ್ಯಪಾಲರನ್ನು ಬದಲಾವಣೆ ಮಾಡಲಾಗಿದೆ. ಸುಧಾ ಯಾದವ್‌ ಅವರು ಹರಿಯಾಣದ ರೇವಾರಿ ಜಿಲ್ಲೆಯ ಮೊಟ್ಲಾ ಕಲನ್ ಗ್ರಾಮದವರು. ಐಐಟಿ ರೂರ್ಕಿಯಲ್ಲಿ ಎಂಎಸ್ಸಿ ಪದವಿ ಮುಗಿಸಿದ್ದು, ಕೆಮಿಸ್ಟ್ರಿಯಲ್ಲಿ ಪಿಹೆಚ್​ಡಿ ಪಡೆದುಕೊಂಡಿದ್ದಾರೆ. ಕಾರ್ಗಿಲ್​ ಯುದ್ಧದ ಹುತಾತ್ಮ ಡೆಪ್ಯುಟಿ ಕಮಾಂಡೆಂಟ್ ಸುಖಬೀರ್ ಸಿಂಗ್ ಪತ್ನಿ.

ಸಿಕ್ಕಿಂ ರಾಜ್ಯದ ರಾಜ್ಯಪಾಲರಾಗಿದ್ದ ಓಂ ಪ್ರಕಾಶ ಮಾಥುರ್ ಅವರನ್ನು ಕೇರಳಂ ರಾಜ್ಯದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಕೇರಳಂ ರಾಜ್ಯಪಾಲರಾಗಿದ್ದ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರಿಗೆ ತಮಿಳುನಾಡಿನ ಹೊಣೆಗಾರಿಕೆ ನೀಡಲಾಗಿದೆ. ಬ್ರಜ್ ಮೋಹನರಾಮ ಅವರನ್ನು ಒಡಿಶಾ ರಾಜ್ಯದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಧಾಲ್ ಸಿಂಗ್ ಬಿಸೇನ್ ಅವರಿಗೆ ಉತ್ತರಾಖಂಡದ ರಾಜ್ಯಪಾಲರ ಜವಾಬ್ದಾರಿ ವಹಿಸಲಾಗಿದೆ. ದುಷ್ಯಂತ ಗೌತಮ ಅವರನ್ನು ಸಿಕ್ಕಿಂ ರಾಜ್ಯದ ನೂತನ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.
ನೂತನ ರಾಜ್ಯಪಾಲರು ತಮ್ಮ ತಮ್ಮ ಹುದ್ದೆಗಳ ಜವಾಬ್ದಾರಿಯನ್ನು ವಹಿಸಿಕೊಳ್ಳುವ ದಿನಾಂಕದಿಂದ ಈ ನೇಮಕಾತಿಗಳು ಜಾರಿಗೆ ಬರಲಿವೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.
ರಾಜೇಂದ್ರ ವಿಶ್ವನಾಋ ಅರ್ಲೇಕರ್‌ ಅವರಿಗೆ ತಮಿಳುನಾಡಿನ ಹೊಣೆ
ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರು ಬಿಜೆಪಿಯ ಮಾಜಿ ಶಾಸಕರಾಗಿದ್ದು, ಗೋವಾ ವಿಧಾನಸಭೆಯ ಸ್ಪೀಕರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಗೋವಾ ಸರ್ಕಾರದಲ್ಲಿ ಅರಣ್ಯ ಮತ್ತು ಪರಿಸರ ಹಾಗೂ ಪಂಚಾಯತ್ ರಾಜ್ ಖಾತೆಗಳ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
2021ರ ಜುಲೈನಲ್ಲಿ ಅವರನ್ನು ಹಿಮಾಚಲ ಪ್ರದೇಶದ 21ನೇ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿತ್ತು. 2023ರವರೆಗೆ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ಅವರು, ಅದೇ ವರ್ಷದ ಫೆಬ್ರವರಿಯಲ್ಲಿ ಬಿಹಾರದ 30ನೇ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅಲ್ಲಿ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು, ಬಳಿಕ ತಮಿಳುನಾಡಿನ 27ನೇ ರಾಜ್ಯಪಾಲರಾಗಿ ನೇಮಕಗೊಂಡರು. 2026ರ ಮಾರ್ಚ್ 12ರಂದು ತಮಿಳುನಾಡಿನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ಅವರನ್ನು ಕೇರಳಂನಿಂದ ತಮಿಳುನಾಡಿಗೆ ವರ್ಗಾಯಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬ್ರಜ್ ಮೋಹನ್ ರಾಮ್ ಅವರು ಜಾರ್ಖಂಡ್‌ನ ಪಲಾಮು ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾಗಿದ್ದಾರೆ. ಒಡಿಶಾದ ರಾಜ್ಯಪಾಲರಾಗಿದ್ದ ಹರಿಬಾಬು ಕಂಭಂಪಾಟಿ ಅವರ ಬದಲಿಗೆ ಬ್ರಜ್ ಮೋಹನರಾಮ ಅವರನ್ನು ನೇಮಕ ಮಾಡಲಾಗಿದೆ.

ಪ್ರಮುಖ ಸುದ್ದಿ :-   ಇನ್ಮುಂದೆ ದೆಹಲಿ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುವಂತಿಲ್ಲ ; ಮೂರು ಹೊಸ ಸ್ಥಳಗಳು ನಿಗದಿ

ಸಿಕ್ಕಿಂಗೆ ದುಷ್ಯಂತ ಗೌತಮ, ಉತ್ತರಾಖಂಡಕ್ಕೆ ಧಾಲ್ ಸಿಂಗ್ ಬಿಸೇನ್
ದುಷ್ಯಂತ ಗೌತಮ ಅವರು ರಾಜ್ಯಸಭೆಯ ಮಾಜಿ ಸದಸ್ಯರಾಗಿದ್ದಾರೆ. ಸಿಕ್ಕಿಂ ರಾಜ್ಯಪಾಲರಾಗಿದ್ದ ಓಂ ಪ್ರಕಾಶ ಮಾಥುರ್ ಅವರ ಬದಲಿಗೆ ದುಷ್ಯಂತ ಗೌತಮ ಅವರನ್ನು ನೇಮಕ ಮಾಡಲಾಗಿದೆ. ಮಾಥುರ್ ಅವರನ್ನು ಕೇರಳಂ ರಾಜ್ಯಕ್ಕೆ ವರ್ಗಾಯಿಸಲಾಗಿದೆ.
ಧಾಲ್ ಸಿಂಗ್ ಬಿಸೇನ್ ಅವರು ಮಧ್ಯಪ್ರದೇಶ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅವರನ್ನು ಉತ್ತರಾಖಂಡದ ನೂತನ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.
ಆರು ರಾಜ್ಯಗಳ ರಾಜ್ಯಪಾಲರ ನೇಮಕಾತಿ ಹಾಗೂ ವರ್ಗಾವಣೆಗಳು ಸಂಬಂಧಪಟ್ಟವರು ತಮ್ಮ ತಮ್ಮ ಹುದ್ದೆಗಳನ್ನು ವಹಿಸಿಕೊಂಡ ದಿನದಿಂದ ಜಾರಿಗೆ ಬರಲಿವೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ಸ್ಪಷ್ಟಪಡಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement