ಆರು ರಾಜ್ಯಗಳಿಗೆ ರಾಜ್ಯಪಾಲರ ನೇಮಕ ; ಸುಧಾ ಯಾದವ್‌ ಕರ್ನಾಟಕದ ನೂತನ ರಾಜ್ಯಪಾಲರು

ನವದೆಹಲಿ: ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ಸೋಮವಾರ ನೇಮಕ ಮಾಡಲಾಗಿದೆ. ಕರ್ನಾಟಕ, ಕೇರಳಂ, ತಮಿಳುನಾಡು, ಒಡಿಶಾ, ಉತ್ತರಾಖಂಡ ಮತ್ತು ಸಿಕ್ಕಿಂ ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಿ ರಾಷ್ಟ್ರಪತಿ ಭವನ ಆದೇಶ ಹೊರಡಿಸಿದೆ. ರಾಷ್ಟ್ರಪತಿ ಭವನದ ಪತ್ರಿಕಾ ಪ್ರಕಟಣೆಯ ಪ್ರಕಾರ, ರಾಜ್ಯಪಾಲ ಥಾವರಚಂದ ಗೆಹ್ಲೋಟ್‌ ಬದಲಿಗೆ ಸುಧಾ ಯಾದವ್ ಅವರನ್ನು ಕರ್ನಾಟಕದ ನೂತನ … Continued

‘ರಸ್ತೆಗಳಿರೋದು ಓಡಿಸ್ಲಿಕ್ಕಲ್ಲವೇ?’ ‘ಅಪ್ಪ ನೋಡ್ಕೊತ್ತಾರೆ’: ತಾನು ಓಡಿಸ್ತಿದ್ದ ವಾಹನ ಡಿಕ್ಕಿಯಿಂದ ಮೂವರು ಮೃತಪಟ್ಟ ನಂತ್ರ 19ರ ಹುಡುಗನ ಹೇಳಿಕೆ

ಕೊಚ್ಚಿ: ‘‘ರಸ್ತೆಗಳು ಇರುವುದು ಯಾವುದಕ್ಕೆ? ರಸ್ತೆ ಇರುವುದು ವಾಹನ ಓಡಿಸಲಿಕ್ಕಲ್ಲವೇ?’’ — ವೇಗವಾಗಿ ಬಂದ ಮಿನಿ ಕೂಪರ್ ಕಾರನ್ನು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಮೂವರ ಸಾವಿಗೆ ಕಾರಣನಾದ ಆರೋಪ ಎದುರಿಸುತ್ತಿರುವ 19 ವರ್ಷದ ಯುವಕನ ಈ ಹೇಳಿಕೆ ಈಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕೇರಳದ ಕೊಚ್ಚಿಯ ನೆಡುಂಬಸ್ಸೇರಿ ವಿಮಾನ ನಿಲ್ದಾಣದ ಸಮೀಪ ಸಂಭವಿಸಿದ ಭೀಕರ … Continued

ಸಿಎಂಆರ್‌ಎಲ್‌–ಎಕ್ಸಾಲೋಜಿಕ್ ಪ್ರಕರಣ: ಮಾಜಿ ಸಿಎಂ ಪಿಣರಾಯಿ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕೇರಳ ಹೈಕೋರ್ಟ್ ಆದೇಶ

ತಿರುವನಂತಪುರಂ: ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಪುತ್ರಿ ವೀಣಾ ಸೇರಿದಂತೆ ಸಿಎಂಆರ್‌ಎಲ್‌–ಎಕ್ಸಾಲೋಜಿಕ್ ಪ್ರಕರಣದಲ್ಲಿ ಶಂಕಿತ ಆರೋಪಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಿ ಕಾನೂನು ಪ್ರಕಾರ ತನಿಖೆ ಮುಂದುವರಿಸುವಂತೆ ರಾಜ್ಯದ ಜಾಗೃತ ಮತ್ತು ಭ್ರಷ್ಟಾಚಾರ ನಿಗ್ರಹ ದಳದ (ವಿಜಿಲೆನ್ಸ್ ಆ್ಯಂಡ್ ಆ್ಯಂಟಿ ಕರಪ್ಷನ್ ಬ್ಯೂರೊ–ವಿಎಸಿಬಿ) ನಿರ್ದೇಶಕರಿಗೆ ಕೇರಳ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ. … Continued

2006ರ ಪ್ರಕರಣ : ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ವಿರುದ್ಧ ತನಿಖೆಗೆ ಕೇರಳ ಗೃಹ ಸಚಿವರ ಆದೇಶ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶಕುಮಾರ ವಿರುದ್ಧ ತನಿಖೆ ನಡೆಸಲು ಕೇರಳ ಗೃಹ ಸಚಿವ ರಮೇಶ ಚೆನ್ನಿತ್ತಲ ಅವರು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳಕ್ಕೆ (VACB) ಆದೇಶಿಸಿದ್ದಾರೆ. 2006ರಲ್ಲಿ ಕೇರಳದ ಲೋಕೋಪಯೋಗಿ ಇಲಾಖೆ (PWD) ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಈ ತನಿಖೆ ನಡೆಯಲಿದೆ. ಕೇರಳ ರಾಜ್ಯ ಸಾರಿಗೆ ಯೋಜನೆ … Continued

ಮನೆಯ ಆವರಣದಲ್ಲಿ 24 ಗಂಟೆಯೊಳಗೆ ಪತ್ತೆಯಾಯ್ತು ಬರೋಬ್ಬರಿ 18 ಹೆಬ್ಬಾವಿನ ಮರಿಗಳು….!

ಪೂಂಕುನ್ನಂ (ಕೇರಳ): ಮನೆಯೊಂದರ ಆವರಣದಲ್ಲಿ ಒಂದಲ್ಲ, ಎರಡಲ್ಲ, ಬರೋಬ್ಬರಿ 18 ಹೆಬ್ಬಾವುಗಳು ಪತ್ತೆಯಾಗಿರುವ ಆಘಾತಕಾರಿ ಮತ್ತು ಅಪರೂಪದ ಘಟನೆಯೊಂದು ಕೇರಳದ ತ್ರಿಶೂರ್ ಜಿಲ್ಲೆಯ ಪೂಂಕುನ್ನಂನಲ್ಲಿ ವರದಿಯಾಗಿದೆ. ಕೇವಲ 24 ಗಂಟೆಗಳ ಅವಧಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಈ ಎಲ್ಲಾ ಹಾವುಗಳನ್ನು ಸುರಕ್ಷಿತವಾಗಿ ರಕ್ಷಿಸಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮತ್ತು ಕುತೂಹಲ ಮೂಡಿಸಿದೆ. ಪೂಂಕುನ್ನಂನ ಸೀತಾರಾಮ್ ಲೇನ್‌ನ … Continued

ಕೇರಳದ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ಇ.ಡಿ. ದಾಳಿ

ತಿರುವನಂತಪುರಂ/ಹೊಸದೆಹಲಿ: ಕೇರಳ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಬೆಳವಣಿಗೆಯೊಂದರಲ್ಲಿ, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ (PMLA) ಸಂಬಂಧಿಸಿದಂತೆ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಿರುವನಂತಪುರಂ ನಿವಾಸ ಸೇರಿದಂತೆ ಕೇರಳದ ಒಟ್ಟು 12 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ಏಕಕಾಲಕ್ಕೆ ದಾಳಿ ನಡೆಸಿದೆ. ರಾಜಧಾನಿ ತಿರುವನಂತಪುರಂನಲ್ಲಿರುವ ವಿಜಯನ್ ಅವರ ಬಾಡಿಗೆ ಮನೆ ಹಾಗೂ … Continued

ಕೇರಳ ಇನ್ಮುಂದೆ ‘ಕೇರಳಂ’: ಹೆಸರು ಬದಲಾವಣೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ನವದೆಹಲಿ: ಒಂದು ಮಹತ್ವದ ಬೆಳವಣಿಗೆಯಲ್ಲಿ, ಕೇರಳ ರಾಜ್ಯದ ಹೆಸರನ್ನು ಅಧಿಕೃತವಾಗಿ ‘ಕೇರಳಂ’ ಎಂದು ಬದಲಾಯಿಸುವ ಕೇರಳ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟವು ಮಂಗಳವಾರ ಒಪ್ಪಿಗೆ ನೀಡಿದೆ. ನೂತನವಾಗಿ ಉದ್ಘಾಟನೆಗೊಂಡ ಪ್ರಧಾನ ಮಂತ್ರಿ ಕಾರ್ಯಾಲಯದ (PMO) ಕಟ್ಟಡವಾದ ‘ಸೇವಾ ತೀರ್ಥ’ದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಈ ಅನುಮೋದನೆ ಲಭಿಸಿರುವುದು ವಿಶೇಷ. “ಕೇರಳವನ್ನು ‘ಕೇರಳಂ’ … Continued