ತನ್ನದೇ ಕುಟುಂಬದ ಐವರನ್ನು ಕೊಡಲಿಯಿಂದ ಕೊಚ್ಚಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ…!

ಲಕ್ನೋ : ವ್ಯಕ್ತಿಯೊಬ್ಬ ತನ್ನದೇ ಕುಟುಂಬದ ಐವರನ್ನು ಕೊಡಲಿಯಿಂದ ಕೊಚ್ಚಿ ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಭಯಾನಕ ಘಟನೆ ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯಲ್ಲಿ ನಡೆದಿದೆ.
ಮೈನ್ಪುರಿ ಜಿಲ್ಲೆಯ ಗೋಕುಲ್ಪುರ ಅರ್ಸಾರಾ ಗ್ರಾಮದಲ್ಲಿ ಹತ್ಯೆ ನಡೆದಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ.
ತನ್ನದೇ ಮನೆಯವರನ್ನು ಕೊಡಲಿಯಿಂದ ಕೊಚ್ಚಿ ಕೊಂದ ನಂತರ 30 ವರ್ಷದ ಶಿವವೀರ ಯಾದವ್ ನಂತರ ತಾನೂ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆರೋಪಿಯು ನಾಡ ಪಿಸ್ತೂಲು ಬಳಸಿ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಪತ್ನಿ ಡೋಲಿ (24) ಹಾಗೂ ಚಿಕ್ಕಮ್ಮ ಸುಷ್ಮಾ (35) ಅವರ ಮೇಲೆಯೂ ಹಲ್ಲೆ ನಡೆಸಿದ್ದು, ಅವರು ಗಾಯಗೊಂಡಿದ್ದಾರೆ. ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೃತರನ್ನು ಶಿವವೀರ ಯಾದವ್‌ ಸಹೋದರರಾದ ಭುಲ್ಲನ್ ಯಾದವ್ (25) ಮತ್ತು ಸೋನು ಯಾದವ್ (21), ಸೋನು ಯಾದವ ಪತ್ನಿ ಸೋನಿ (20) ಮತ್ತು ಬಾಮೈದ ಸೌರಭ್ (23) ಹಾಗೂ ಸ್ನೇಹಿತ ದೀಪಕ (20) ಎಂದು ಗುರುತಿಸಲಾಗಿದೆ. ಅವರೆಲ್ಲರೂ ಮಲಗಿದ್ದ ಸಂದರ್ಭದಲ್ಲಿ ಶಿವವೀರ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
“ಆರೋಪಿ ಶಿವವೀರ ಸಹೋದರ ಶುಕ್ರವಾರ ಮದುವೆಯಾಗಿದ್ದ. ಇಟಾವಾದಿಂದ ಮದುವೆ ಮೆರವಣಿಗೆ ಗೋಕುಲ್ಪುರ ಗ್ರಾಮಕ್ಕೆ ಮರಳಿತ್ತು. ರಾತ್ರಿ ಊಟವಾದ ಬಳಿಕ ಶಿವವೀರ ಯಾದವ್‌ ಸಹೋದರ ಬುಲ್ಲನ್ ಯಾದವ್‌ನನ್ನು, ವರ ಸೋನು ಯಾದವ್ ಮತ್ತು ಆತನ ಹೆಂಡತಿ ಸೋನಿಯನ್ನು ಹತ್ಯೆ ಮಾಡಿದ್ದಾನೆ. ನಂತರ ಬಾಮೈದ ಸೌರಭ್ ಹಾಗೂ ಸ್ನೇಹಿತ ದೀಪಕ್‌ನನ್ನು ಕೊಲೆ ಮಾಡಿದ್ದಾನೆ” ಎಂದು ಮೈನ್ಪುರಿ ಎಸ್‌ಪಿ ವಿನೋದಕುಮಾರ ತಿಳಿಸಿದ್ದಾರೆ.
“ತನ್ನ ಐವರು ಸಂಬಂಧಿಕರನ್ನು ಕೊಂದ ನಂತರ ಹೆಂಡತಿ ಡಾಲಿ ಹಾಗೂ ಚಿಕ್ಕಮ್ಮ ಸುಷ್ಮಾ ಅವರನ್ನು ಆರೋಪಿ ಗಾಯಗೊಳಿಸಿದ್ದಾನೆ. ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಹೇಯ ಕೃತ್ಯಕ್ಕೆ ಕಾರಣ ಏನು ಎನ್ನುವುದು ಗೊತ್ತಾಗಿಲ್ಲ. ಎಲ್ಲ ಅಧಿಕಾರಿಗಳು ಮತ್ತು ಶ್ವಾನ ದಳ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆಂದು ಕಳುಹಿಸಲಾಗಿದೆ. ತನಿಖೆ ನಡೆಯುತ್ತಿದೆ. ಆರೋಪಿ ಶಿವ್ ವೀರ್ ನೋಯ್ಡಾದ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಶಿವವೀರ ತನ್ನ ಸಹೋದರನ ಮದುವೆಯಲ್ಲಿ ಪಾಲ್ಗೊಳ್ಳಲು ಊರಿಗೆ ಬಂದಾಗ ಈ ಕೃತ್ಯ ಎಸಗಿದ್ದಾನೆ. ಆದರೆ ಈ ಹತ್ಯೆ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಭಯಾನಕ ಹತ್ಯಾಕಾಂಡದ ಬಳಿಕ ಸ್ಥಳದ ಸುತ್ತಮುತ್ತಲ ಪ್ರದೇಶದಲ್ಲಿ ತೀವ್ರ ಆತಂಕ ಮನೆ ಮಾಡಿದೆ.

ಇಂದಿನ ಪ್ರಮುಖ ಸುದ್ದಿ :-   ಉಜ್ಜಯಿನಿಯಲ್ಲಿ ಬಾಲಕಿ ಅತ್ಯಾಚಾರ ಪ್ರಕರಣ: ಆಟೋ ಚಾಲಕನ ಬಂಧನ, 3 ಮಂದಿ ವಶಕ್ಕೆ, ಸಹಾಯಕ್ಕಾಗಿ ಬಾಲಕಿ 8 ಕಿಮೀ ನಡೆದ ಬಾಲಕಿ

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement