ಒಬ್ಬಂಟಿಯಾಗಿದ್ದ ಶಾಸ್ತ್ರ ಹೇಳುವವನ ಮನೆಯಲ್ಲಿತ್ತು 30 ಲಕ್ಷ ರೂ: ಸಾವಿನ ನಂತರ ಪತ್ತೆಯಾಯ್ತು ಇಷ್ಟೊಂದು ಸಂಪತ್ತು…!

ಚಿತ್ರದುರ್ಗ: ವಿವಾಹವಾಗದೇ ಒಂಟಿಯಾಗಿ ಜೀವನ ನಡೆಸುತ್ತಿದ್ದ ಅರ್ಚಕರೊಬ್ಬರು ವಾರದ ಹಿಂದಷ್ಟೇ ಮೃತಪಟ್ಟಿದ್ದರು. ಇದೀಗ ಅವರ ಮನೆಯಲ್ಲಿ ಲಕ್ಷಾಂತರ ರೂಪಾಯಿ ಸಿಕ್ಕಿದೆ ಎಂದು ವರದಿಯಾಗಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ನಿವಾಸಿ ಗಂಗಾಧರ ಶಾಸ್ತ್ರೀ (70) ಎಂಬವರು ವಾರದ ಹಿಂದೆ ಮೃತರಾಗಿದ್ದರು. ಸಣ್ಣ ಮನೆಯೊಂದರಲ್ಲಿ ಒಬ್ಬರೇ ಇದ್ದ ಅವರು ಶಾಸ್ತ್ರ ಹೇಳುವುದು ಹಾಗೂ ಶುಭ ಕಾರ್ಯದಲ್ಲಿ ಪೂಜೆ ಇತ್ಯಾದಿ ಮಾಡುತ್ತ ಜೀವನ ಸಾಗಿಸುತ್ತಿದ್ದರು. ಅವರ ಮರಣದ ನಂತರ ಅವರ ಮನೆಯಲ್ಲಿ ವಿವಿಧೆಡೆ ಇರಿಸಿದ್ದ 30 ಲಕ್ಷ ರೂ.ಗಳಿಗೂ ಅಧಿಕ ಹಣ ಸಿಕ್ಕಿದೆ ಎಂದು ವರದಿಯಾಗಿದೆ.
ಶಾಸ್ತ್ರೀ ಅವರ ಹೆಸರಿನಲ್ಲಿ 16 ಎಕರೆ‌ ಜಮೀನಿದ್ದು, ಅದರಲ್ಲಿ 4 ಎಕರೆ ತೆಂಗಿನ ತೋಟ ಮತ್ತು ಗದ್ದೆ ಇದೆ. ಕೃಷಿ ಮತ್ತಿತರೆ ಆದಾಯದಿಂದ ಬಂದ 30 ಲಕ್ಷ ರೂ.ಗಳಿಗೂ ಹೆಚ್ಚು ಹಣ ಪತ್ತೆಯಾಗಿದೆ.
ಗಂಗಾಧರ ಶಾಸ್ತ್ರೀ ಮೃತಪಟ್ಟ ನಂತರ ಎರಡು ದಿನದ ಹಿಂದೆ ಶಾಸ್ತ್ರೀ ಅವರ ಮನೆಯನ್ನು ಪರಿಶೀಲನೆ ಮಾಡಿದಾಗ ಇಷ್ಟೊಂದು ಹಣ ಇರುವುದು ಪತ್ತೆಯಾಗಿದೆ. ಈಗ ಸ್ಥಳೀಯರು ಹಾಗೂ ಪರಿಚಿತರು ಜುಲೈ 7ಕ್ಕೆ ಸಭೆ ಕರೆದು ಸಮಿತಿ ರಚನೆಗೆ ನಿರ್ಧಾರ ಮಾಡಿದ್ದಾರೆ. ಜಮೀನಿನಲ್ಲಿ ಗಂಗಾಧರ ಶಾಸ್ತ್ರಿ ಗದ್ದುಗೆ ನಿರ್ಮಿಸಲು ನಿರ್ಧರಿಸಿದ್ದಾರಂತೆ.

ಇಂದಿನ ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ತಂದಿಟ್ಟ ಪುತ್ರನ ಹೇಳಿಕೆ : ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement