ಇದು ‘ಗೂಗ್ಲಿ’ ಅಲ್ಲ, ಇದು ದರೋಡೆ : ತಮ್ಮ ಅಣ್ಣನ ಮಗ ಅಜಿತ್ ಪವಾರ್ ಎನ್‌ಡಿಎ ಸೇರಿದ ಬಗ್ಗೆ ಶರದ ಪವಾರ್ ಪ್ರತಿಕ್ರಿಯೆ

ಮುಂಬೈ: ತಮ್ಮ ಅಣ್ಣನ ಮಗ ಅಜಿತ ಪವಾರ್‌ ​ಬಿಜೆಪಿ-ಶಿವಸೇನೆ (ಏಕನಾಥ್​ ಶಿಂಧೆ) ಬಣದ ಸರ್ಕಾರವನ್ನು ಬೆಂಬಲಿಸಿರುವ ಕುರಿತು ಪ್ರತಿಕ್ರಿಯಿಸಿರವ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಕ್ಷ(NCP)ದ ಮುಖ್ಯಸ್ಥ ಶರದ​ ಪವಾರ್​ ಇದು ಗೂಗ್ಲಿಯಲ್ಲ, ಇದು ದರೋಡೆಯ ಕೃತ್ಯವೇ ಹೊರತು ಸಣ್ಣ ವಿಷಯವಲ್ಲ ಎಂದು ಭಾನುವಾರ ಹೇಳಿದ್ದಾರೆ.
ಅಜಿತ ಪವಾರ್ ಅವರೊಂದಿಗೆ ಇತರ ಎಂಟು ಶಾಸಕರಾದ ದಿಲೀಪ್ ವಾಲ್ಸೆ ಪಾಟೀಲ, ಛಗನ್ ಭುಜಬಲ್, ಹಸನ್ ಮುಶ್ರೀಫ್, ಧನಂಜಯ್ ಮುಂಡೆ, ಧಮರಾಮರಾವ್ ಆತ್ರಮ್, ಅದಿತಿ ತತ್ಕರೆ, ಸಂಜಯ್ ಬನ್ಸೋಡೆ ಮತ್ತು ಅನಿಲ್ ಪಾಟೀಲ ಸಹ ಇದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶರದ ಪವಾರ್, ಅಜಿತ ಪವಾರ್ ಅವರ ನಡೆ ಗೂಗ್ಲಿ ಅಲ್ಲ, ದರೋಡೆ. ಆದರೆ, ಇದು ನನಗೆ ಹೊಸದಲ್ಲ ಎಂದು ಹೇಳಿದ ಅವರು, 1980 ರ ದಶಕದಲ್ಲಿ ಅನೇಕ ಶಾಸಕರು ತಮ್ಮನ್ನು ತೊರೆದ ಘಟನೆಯನ್ನು ನೆನಪಿಸಿಕೊಂಡರು. “ಇದು ಹೊಸ ವಿಷಯವಲ್ಲ, 1980 ರಲ್ಲಿ ನಾನು ನೇತೃತ್ವ ವಹಿಸಿದ್ದ ಪಕ್ಷವು 58 ಶಾಸಕರನ್ನು ಹೊಂದಿತ್ತು, ನಂತರ ಎಲ್ಲರೂ ತೊರೆದರು ಮತ್ತು ಕೇವಲ 6 ಶಾಸಕರು ಉಳಿದಿದ್ದರು, ಆದರೆ ನಾನು ಸಂಖ್ಯಾಬಲವನ್ನು ಹೆಚ್ಚಿಸಿಕೊಂಡೆ, ಆದರೆ ನನ್ನನ್ನು ತೊರೆದವರು ಅವರ ಕ್ಷೇತ್ರಗಳಲ್ಲಿ ಸೋತರು” ಎಂದು ಪವಾರ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ದೇಗುಲದ ಆವರಣದ ಒಳಗೆ ಗೋವಿನ ರುಂಡ ಎಸೆದ ಪ್ರಕರಣ : ನಾಲ್ವರು ಆರೋಪಿಗಳ ಬಂಧನ

ಅಜಿತ ಪವಾರ್ ಬಂಡಾಯದ ನಂತರ ದೇಶಾದ್ಯಂತದ ನಾಯಕರಿಂದ ಹಲವಾರು ಕರೆಗಳು ಬಂದಿವೆ ಎಂದು ಹೇಳಿದ ಅವರು, ಜುಲೈ 6 ರಂದು ಸಾರ್ವಜನಿಕ ಸಭೆ ನಡೆಸಲಿದ್ದು, ಮುಂದಿನ ಗುರಿ ನಿಗದಿಪಡಿಸುವುದಾಗಿ ತಿಳಿಸಿದರು. ಬಂಡಾಯ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲು ಶಾಸಕರು ಮತ್ತು ಎಲ್ಲ ಹಿರಿಯ ನಾಯಕರು ಒಟ್ಟಾಗಿ ಕೂತು ನಿರ್ಧಾರ ಕೈಗೊಳ್ಳಲಿದ್ದಾರೆ. ಎನ್‌ಸಿಪಿ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ ಮತ್ತು ಸುನೀಲ್ ತತ್ಕರೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ ಶರದ ಪವಾರ್, ಕಾನೂನು ಹೋರಾಟದ ಬಗ್ಗೆ ಯೋಚಿಸುತ್ತಿಲ್ಲ ಎಂದು ಹೇಳಿದ್ದಾರೆ.
ನೀರಾವರಿ ಹಗರಣದಲ್ಲಿ ಹೆಸರಿರುವ ಎನ್‌ಸಿಪಿ ಶಾಸಕರಲ್ಲಿ ಕೆಲವರು ಈಗ ಸಂಪುಟಕ್ಕೆ ಸೇರಿದ್ದಾರೆ. ಎನ್‌ಸಿಪಿ ಈ ಹಗರಣದ ಭಾಗವಾಗಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ” ಎಂದು ಪವಾರ್ ಹೇಳಿದರು. ಎನ್‌ಡಿಎ ಸರ್ಕಾರದಲ್ಲಿ ಎನ್‌ಸಿಪಿ ಶಾಸಕರನ್ನು ಸೇರಿಸಿಕೊಳ್ಳುವ ಮೂಲಕ ಹಗರಣ ಪ್ರಕರಣಗಳಿಂದ ಎನ್‌ಸಿಪಿ ಹೆಸರನ್ನು ತೆರವುಗೊಳಿಸಿದ್ದಕ್ಕಾಗಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ಹೇಳಿದರು.
ಹಿಂದಿನ ಕಾಂಗ್ರೆಸ್-ಎನ್‌ಸಿಪಿ ಸರ್ಕಾರದ ಅಡಿಯಲ್ಲಿ ಪ್ರಧಾನಿ ಮೋದಿ ನೀರಾವರಿ ಹಗರಣವನ್ನು ಪ್ರಸ್ತಾಪಿಸಿದ ನಂತರ ಎನ್‌ಸಿಪಿಯಲ್ಲಿ ಕೆಲವರು ‘ನಿವೃತ್ತಿ’ ಹೊಂದಿದ್ದಾರೆ. ಆರೋಪಿಗಳು ಮತ್ತು ಇಡಿ ಕ್ರಮ ಎದುರಿಸುತ್ತಿರುವವರನ್ನು ಸಚಿವರನ್ನಾಗಿ ನೇಮಿಸಲಾಗಿದೆ. ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ ಆರು ಅಥವಾ ಏಳು ಎನ್‌ಸಿಪಿ ನಾಯಕರ ವಿರುದ್ಧ ಪ್ರಕರಣಗಳು ಬಾಕಿ ಇವೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಶಾಲೆಯಲ್ಲಿ ದ್ವೇಷ, ಹಿಂಸಾಚಾರದ ಬಗ್ಗೆ ಕಲಿಸಬಾರದು: ಪಠ್ಯಪುಸ್ತಕಗಳಲ್ಲಿ ಬಾಬ್ರಿ ಕೈಬಿಟ್ಟಿದಕ್ಕೆ ಎನ್‌ಸಿಇಆರ್‌ಟಿ ಮುಖ್ಯಸ್ಥ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement