ಮೇಕೆ ಬಲಿಕೊಟ್ಟ ವ್ಯಕ್ತಿ… ಆದ್ರೆ ಆತನನ್ನು ಕೊಂದ ಅದೇ ಮೇಕೆಯ ಕಣ್ಣು…!

ಸೂರಜಪುರ: ದೇವರಿಗೆ ಆಡು ಬಲಿ ಕೊಟ್ಟ ನಂತರ ಅದೇ ಆಡಿನಿಂದ ಮೃತಪಟ್ಟಿರುವ ಘಟನೆ ಛತ್ತೀಸ್​ಗಢದ ಸೂರಜಪುರ ಜಿಲ್ಲೆಯಲ್ಲಿ ನಡೆದಿದೆ.
ಛತ್ತೀಸ್‌ಗಢದ ಸೂರಜಪುರ ಜಿಲ್ಲೆಯ ಬಗರ್ ಸಾಯಿ ಎಂಬ 50 ವರ್ಷದ ವ್ಯಕ್ತಿ ತನ್ನ ಇಷ್ಟಾರ್ಥ ಈಡೇರಿದ ನಂತರ ದೇವಸ್ಥಾನದಲ್ಲಿ ಮೇಕೆಯನ್ನು ಬಲಿ ನೀಡಲು ಮುಂದಾಗಿದ್ದ. ಅದಕ್ಕಾಗಿ ಬಗರ್ ಸಾಯಿ ಅವರು ಮದನಪುರ ಗ್ರಾಮದ ಇತರ ಗ್ರಾಮಸ್ಥರೊಂದಿಗೆ ಭಾನುವಾರ ಖೋಪಾಧಾಮ್‌ಗೆ ಆಗಮಿಸಿ ಅಲ್ಲಿ ಮೇಕೆಯನ್ನು ಬಲಿ ನೀಡಿದ್ದಾನೆ. ಬಲಿಪೂಜೆ ನೆರವೇರಿಸಿದ ನಂತರ ಗ್ರಾಮಸ್ಥರು ಆಡಿನ ಮಾಂಸವನ್ನು ಬೇಯಿಸಿ ಊಟಕ್ಕೆ ಕುಳಿತರು.
ನಂತರ ಬಗರ್ ಬೇಯಿಸಿದ ಮಾಂಸದಿಂದ ಮೇಕೆಯ ಕಣ್ಣನ್ನು ಎತ್ತಿಕೊಂಡಿದ್ದಾನೆ, ಆದರೆ ತಾನು ಬಲಿಕೊಟ್ಟ ಮೇಕೆಯೇ ತನ್ನ ಬಲಿ ಪಡೆಯುತ್ತದೆ ಎಂದು ಆತನಿಗೆ ತಿಳಿದಿರಲಿಲ್ಲ.ಆತ ಮೇಕೆಯ ಕಣ್ಣನ್ನು ನುಂಗಲು ಪ್ರಯತ್ನಿಸಿದ್ದಾನೆ. ಆದರೆ ಮೇಕೆಯ ಕಣ್ಣು ಬಗರ್‌ನ ಗಂಟಲಿಗೆ ಸಿಲುಕಿತು, ಆತನಿಗೆ ಉಸಿರುಗಟ್ಟಿಸಿತು. ಬಗರ್ ಉಸಿರಾಡಲು ಬಹಳ ಪ್ರಯಾಸಪಡುತ್ತಿದ್ದುದನ್ನು ಕಂಡ ಆತನ ಜೊತೆಗೆ ಇದ್ದವರು ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯದು ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

ಇಂದಿನ ಪ್ರಮುಖ ಸುದ್ದಿ :-   ರೈಲಿನಲ್ಲಿ ಮಹಿಳಾ ಪೋಲೀಸ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ : ಪೊಲೀಸರಿಗೆ ಬೇಕಾಗಿದ್ದ ಆರೋಪಿ ಎನ್‌ಕೌಂಟರ್‌ನಲ್ಲಿ ಸಾವು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4.7 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement