12 ದಿನಗಳಲ್ಲಿ 60 ಲಕ್ಷ ವೀಕ್ಷಣೆಗಳನ್ನು ಕಂಡ ಜಲಾಂತರ್ಗಾಮಿ ನೌಕೆ ಟೈಟಾನ್ ದುರಂತಕ್ಕೆ ಕಾರಣ ವಿವರಿಸುವ ಅನಿಮೇಷನ್ ವೀಡಿಯೊ | ವೀಕ್ಷಿಸಿ

ಶತಮಾನದಷ್ಟು ಹಳೆಯದಾದ ಟೈಟಾನಿಕ್ ಹಡಗಿನ ಅವಶೇಷ ನೋಡಲು ಹೋಗುತ್ತಿದ್ದಾಗ ಜಲಾಂತರ್ಗಾಮಿ ಪ್ರವಾಸಿ ನೌಕೆಯಲ್ಲಿದ್ದ ಎಲ್ಲಾ ಐವರ ಸಾವಿನ ದುರಂತಕ್ಕೆ ಕಾರಣವಾದ ಸಮುದ್ರದ ಒಳಗಿನ ಸ್ಫೋಟವು ಅಂತರ್ಜಾಲ ಬಳಸುವ ಹೆಚ್ಚಿನ ಜಾಗತಿಕ ಜನಸಂಖ್ಯೆಯ ಗಮನ ಸೆಳೆದಿದೆ.
ಈ ಭೀಕರ ದುರಂತದ ಕಾರಣವನ್ನು ಸಾಗರ ವಿಜ್ಞಾನಿಗಳು ಮತ್ತು ಆ ಬಗ್ಗೆ ಮಾಹಿತಿ ಇರುವವರು ವಿವಿಧ ರೀತಿಯಲ್ಲಿ ವಿವರಿಸಿದ್ದಾರೆ.
ಅಂತರ್ಜಾಲದಲ್ಲಿ, ಟೈಟಾನ್ ಹೆಸರಿನ ಸಬ್‌ ಮೇರಿನ್‌ (ಜಲಾಂರ್ಗಾಮಿ) ಹೇಗೆ ಸ್ಫೋಟಗೊಂಡಿದೆ ಎಂಬುದನ್ನು ಪ್ರದರ್ಶಿಸುವ ವೀಡಿಯೊ ಕ್ಲಿಪ್ ಪ್ರಸ್ತುತ ಟ್ರೆಂಡಿಂಗ್ ಆಗಿದೆ. ಯೂಟ್ಯೂಬ್ ಚಾನೆಲ್ ಐಟೆಲ್ಲಿ ಜೂನ್ 30 ರಂದು ಪೋಸ್ಟ್ ಮಾಡಿದ 6 ನಿಮಿಷ 20 ಸೆಕೆಂಡುಗಳ ಅನಿಮೇಷನ್ ವೀಡಿಯೊ ಪೋಸ್ಟ್ ಮಾಡಿದ ಕೇವಲ 12 ದಿನಗಳಲ್ಲಿ 60 ಲಕ್ಷ ವೀಕ್ಷಣೆಗಳನ್ನು ದಾಟಿದೆ.
ಜೂನ್ 18 ರಂದು ಟೈಟಾನಿಕ್ ಅವಶೇಷಗಳ ಕಡೆಗೆ ಕೆಳಗೆ ಇಳಿಯಲು ಪ್ರಾರಂಭಿಸಿದ ಎರಡು ಗಂಟೆಗಳ ನಂತರ ಅದು ಸಬ್‌ ರಾಡಾರ್‌ನಿಂದ ಕಣ್ಮರೆಯಾಯಿತು. ನಾಲ್ಕು ದಿನಗಳ ಕಾಲ ನಡೆದ ಶೋಧ ಕಾರ್ಯಾಚರಣೆಯ ನಂತರ, ಅಮೆರಿಕದ ಕೋಸ್ಟ್ ಗಾರ್ಡ್ ನೌಕೆಯು ಅದು ಸ್ಫೋಟಗೊಂಡಿದೆ ಎಂದು ಹೇಳಿತು, ತಲಾ $2,50,000 ಪಾವತಿಸಿದ ಎಲ್ಲಾ ಐವರು ಪ್ರವಾಸಿ ಪ್ರಯಾಣಿಕರು ಸಾವಿಗೀಡಾದರು.

ಪ್ರಮುಖ ಸುದ್ದಿ :-   ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

ಸ್ಫೋಟ ಎಂದರೇನು ಎಂಬುದರ ಕುರಿತು ವೀಡಿಯೊ ವಿವರಿಸುತ್ತದೆ. ಅನಿಮೇಷನ್‌ನಲ್ಲಿ ತೋರಿಸಿರುವಂತೆ ಮಿಲಿಸೆಕೆಂಡ್‌ನ ಒಂದು ಭಾಗದ ಸಮುದಲ್ಲಿ ಸಂಭವಿಸಿದ ಸುತ್ತಮುತ್ತಲಿನ ನೀರಿನ ಅತಿ ಹೆಚ್ಚಿನ ಹೈಡ್ರೋಸ್ಟಾಟಿಕ್ ಒತ್ತಡದಿಂದ ಸ್ಫೋಟವು ಉಂಟಾಗಿದೆ ಎಂದು ಅನಿಮೇಷನ್ ವಿವರಿಸುತ್ತದೆ.
ಟೈಟಾನಿಕ್ ನೌಕೆ ಅವಶೇಷ ಇರುವ ಆಳದಲ್ಲಿ, ಪ್ರತಿ ಚದರ ಇಂಚಿಗೆ ಸುಮಾರು 5600 ಪೌಂಡ್‌ಗಳಷ್ಟು ಒತ್ತಡ ಇರುತ್ತದೆ. ಅದು ಮೇಲ್ಮೈಯಲ್ಲಿ ನಾವು ಅನುಭವಿಸುವ ಒತ್ತಡದ ಸುಮಾರು 400 ಪಟ್ಟು ಹೆಚ್ಚು.

ಸಮುದ್ರ ಆಳವಾಗಿರುವುದರಿಂದ ಜಲಾಂರ್ಗಾಮಿ ಪ್ರವಾಸಿ ನೌಕೆ ಅದರ ಮೇಲ್ಮೈಯಲ್ಲಿ ಬಲವಾದ ಒತ್ತಡವನ್ನು ಅನುಭವಿಸುತ್ತದೆ. ನೀರಿನ ಒತ್ತಡಕ್ಕೆ ಈ ಬಲವು ಅದು ತಡೆದುಕೊಳ್ಳುವ ಸಾಮರ್ಥ್ಯಕ್ಕಿಂತ ಹೆಚ್ಚಾದಾಗ, ಅದು ಸ್ಫೋಟಗೊಳ್ಳುತ್ತದೆ ಎಂದು ವಿವರಿಸಲಾಗಿದೆ.
ವೀಡಿಯೊ ಬಹಳಷ್ಟು ವೀಕ್ಷಕರ ಆಸಕ್ತಿಯ ವಿಷಯವಾಗಿ ಗಮನ ಸೆಳೆಯಿತು ಮತ್ತು ಕೆಲವರು ಅನೇಕ ಚಿಂತನಶೀಲ ಕಾಮೆಂಟ್‌ಗಳನ್ನು ಸಹ ಮಾಡಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement