ಎಲ್ಲವೂ ಪ್ರೀತಿಗಾಗಿ….: ತನ್ನ ಪ್ರಿಯಕರನ ಭೇಟಿಯಾಗಲು ಇಡೀ ಹಳ್ಳಿಯ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದ್ದ ಯುವತಿ : ಆದ್ರೆ ಮುಂದಾಗಿದ್ದು..?

ಬೆಟ್ಟಿಯಾ: ಇತ್ತೀಚಿನ ದಿನಗಳಲ್ಲಿ ಅಸಾಮಾನ್ಯ ಪ್ರೀತಿಯ ಅದ್ಭುತ ಕಥೆಗಳು ಮುನ್ನೆಲೆಗೆ ಬರುತ್ತಿವೆ. ಇಂತಹದ್ದೇ ಘಟನೆ ಬಿಹಾರದಲ್ಲಿ ನಡೆದ ವರದಿಯಾಗಿದೆ. ಬಿಹಾರದ ಬೆಟ್ಟಿಯಾದಲ್ಲಿ ಪ್ರೇಯಸಿಯೊಬ್ಬಳು ತನ್ನ ಪ್ರಿಯಕರನನ್ನು ಭೇಟಿಯಾಗಲು ಆತ ಬರುವ ಸಮಯದಲ್ಲಿ ಇಡೀ ಹಳ್ಳಿಯ ವಿದ್ಯುತ್ ಪೂರೈಕೆಯನ್ನೇ ಕಡಿತ ಮಾಡುತ್ತಿದ್ದ ವಿದ್ಯಮಾನ ವರದಿಯಾಗಿದೆ…!
ಆದರೆ ಒಂದು ದಿನ ಪ್ರೇಮಿ ತನ್ನ ಪ್ರೇಮಿಕಾಳ ಭೇಟಿಯಾಗಲು ಬಂದಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ನಂತರ ವಿದ್ಯುತ್‌ ಕಡಿತದ ಹಿಂದಿನ ರಹಸ್ಯ ಬೆಳಕಿಗೆ ಬಂದಿದೆ.
ಜುಲೈ 14ರಂದು ಸಹ ಪ್ರೇಮಿ ತನ್ನ ಭೇಟಿಗೆ ಬರುವ ವೇಳೆ ಪ್ರಿಯತಮೆ ಇಡೀ ಹಳ್ಳಿಗೆ ವಿದ್ಯುತ್‌ ಪೂರೈಕೆ ಕಡಿತ ಮಾಡಿದ್ದಳು. ಆದರೆ ದುರದೃಷ್ಟಕ್ಕೆ ಪ್ರಿಯಕರ ಗ್ರಾಮಕ್ಕೆ ಬಂದ ನಂತರ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ. ಗ್ರಾಮಸ್ಥರು ಯುವತಿ ಹಾಗೂ ಆಕೆಯ ಪ್ರಿಯಕರ ಇಬ್ಬರನ್ನೂ ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದಾರೆ. ಆಗ ಪದೇ ಪದೇ ಆಗುತ್ತಿದ್ದ ವಿದ್ಯುತ್‌ ಕಡಿತದ ಹಿಂದಿನ ರಹಸ್ಯ ಬಯಲಾಗಿದೆ. ವಿಷಯಗೊತ್ತಾದ ನಂತರ ಸಿಟ್ಟಿಗೆದ್ದ ಗ್ರಾಮಸ್ಥರು ಪ್ರಿಯಕರನಿಗೆ ಬೆಲ್ಟ್‌ನಿಂದ ಥಳಿಸಿದ್ದಾರೆ.

ಯಾಕೆಂದರೆ ಗ್ರಾಮದಲ್ಲಿ ವಿದ್ಯುತ್‌ ಹೋದ ಸಮಯದಲ್ಲಿ ಆಗಾಗ ಕಳ್ಳತನವಾಗುತ್ತಿತ್ತಂತೆ. ಹೀಗಾಗಿ ವಿದ್ಯುತ್‌ ಕಡಿತದ ರಹಸ್ಯ ಬಯಲಾಗುತ್ತಿದ್ದಂತೆ ಆಕ್ರೋಶಗೊಂಡ ಗ್ರಾಮಸ್ಥರು ಯುವತಿಯ ಮುಂದೆ ಪ್ರೇಮಿಗೆ ಥಳಿಸಿದ್ದಾರೆ. ಆಗ ಯುವತಿ ತನ್ನ ಪ್ರೇಮಿಯ ರಕ್ಷಣೆಗೆ ಮುಂದಾಗಿದ್ದಾಳೆ ಹಾಗೂ ಗ್ರಾಮಸ್ಥರೊಂದಿಗೆ ಸಂಘರ್ಷಕ್ಕೆ ಇಳಿದಿದ್ದಾಳೆ. ನೌತಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ನಂತರ ಥಳಿಸಿದ ಘಟನೆಯ ವೀಡಿಯೋ ಸಹ ವೈರಲ್‌ ಆಗಿ ಸುತ್ತಮುತ್ತಲ ಗ್ರಾಮಗಳಲ್ಲಿ ಅದು ಚರ್ಚೆಯ ವಿಷಯವಾಗಿದೆ.
ಆದರೆ ತಾನು ಪೆಟ್ಟುತಿಂದ ವೀಡಿಯೊ ವೈರಲ್ ಆದ ನಂತರ ಪ್ರಿಯಕರ ಕೋಪಗೊಂಡು ತನ್ನ ಸಹಚರರೊಂದಿಗೆ ಸೇರಿಕೊಂಡು ತನ್ನ ಮೇಲೆ ಹಲ್ಲೆ ಮಾಡಿದ ಗ್ರಾಮದ ಯುವಕರ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾದ.

ಪ್ರಮುಖ ಸುದ್ದಿ :-   ಕಾಂಗ್ರೆಸ್‌ ನಾಯಕ ಅಧೀರ್‌ ಹೇಳಿಕೆ ತಿರಸ್ಕರಿಸಿದ ನಂತರ ಪಶ್ಚಿಮ ಬಂಗಾಳ ಕಾಂಗ್ರೆಸ್ ಕಚೇರಿ ಮುಂದಿನ ಮಲ್ಲಿಕಾರ್ಜುನ ಖರ್ಗೆ ಪೋಸ್ಟರ್‌ಗಳಿಗೆ ಮಸಿ

ವಿಷಯ ಗೊತ್ತಾಗಿ ಗ್ರಾಮಸ್ಥರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಆಗ ಪೊಲೀಸರು ಪ್ರಿಯಕರ ಹಾಗೂ ಆತನ ಜೊತೆಗೆ ಗ್ರಾಮಕ್ಕೆ ಬಂದಿದ್ದ ಮೂವರು ಯುವಕರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಇದಾದ ನಂತರ ಎರಡು ಕಡೆಯವರು ತಮ್ಮವರ ಬೆಂಬಲಕ್ಕಾಗಿ ಪೊಲೀಸ್ ಠಾಣೆಗೆ ಬಂದರು.
ನಂತರ ನೌತನ್ ಪೊಲೀಸ್ ಠಾಣೆಯ ಮುಖ್ಯಸ್ಥ ಖಾಲಿದ್ ಅಖ್ತರ್ ಅವರು, ಇದು ಪ್ರೀತಿ-ಪ್ರೇಮದ ವಿಷಯ ಎಂದು ಯುವತಿ ಮತ್ತು ಆಕೆಯ ಪ್ರಿಯಕರ ಎರಡೂ ಕುಟುಂಬದ ಸದಸ್ಯರಿಗೂ ಸಲಹೆ ನೀಡಿದ ನಂತರ ಅವರ ಮದುವೆಗೆ ಕುಟುಂಬದ ಸದಸ್ಯರು ಒಪ್ಪಿಗೆ ನೀಡಿದರು. ಎರಡೂ ಮನೆಯವರು ಪೊಲೀಸ್ ಠಾಣೆಗೆ ತಲುಪಿ ಮದುವೆಯ ಬಗ್ಗೆ ಮಾತನಾಡಿದರು. ಶೀಘ್ರವೇ ಇಬ್ಬರಿಗೂ ಮದುವೆ ಮಾಡುವುದಾಗಿ ತಿಳಿಸಿದ್ದಾರೆ.

.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement