ಬೆಂಕಿ ಅನಾಹುತ : ಏಳು ಗೋವುಗಳು ಸಜೀವ ದಹನ

ಮುಂಡಗೋಡ: ದನದ ಕೊಟ್ಟಿಗೆಗೆ ಹೊತ್ತಿಕೊಂಡ ಬೆಂಕಿಯಿಂದ ಏಳು ಆಕಳುಗಳು ಸಜೀವ ದಹನವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದ ಹಳೂರ ಓಣಿಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.
ವಿದ್ಯುತ್‌ ಶಾರ್ಟ್‌ ಸರ್ಕ್ಯೂಟಿನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಹಳೂರ ಓಣಿಯ ಮಂಜುನಾಥ ನಾಗೇಶ ಶೇಟ್ ಎಂಬವರ ಸೇರಿದ ದನಗಳು ಸಜೀವ ದಹನವಾಗಿವೆ. ಮನೆಯ ಪಕ್ಕದಲ್ಲೇ ದನದಕೊಟ್ಟಿಯಲ್ಲಿ ಏಳು ಆಕಳುಗಳನ್ನು ಕಟ್ಟಲಾಗುತ್ತಿತ್ತು. ಮನೆಯಿಂದ ದನದ ಕೊಟ್ಟಿಗೆಗೆ ವಿದ್ಯುತ್ ಸಂಪರ್ಕ ಪಡೆದು ಬಲ್ಬ್‌ ಅಳವಡಿಸಲಾಗಿತ್ತು. ಕೊಟ್ಟಿಗೆ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮ ಬೆಂಕಿಯ ಕಿಡಿಗಳು ಕೊಟ್ಟಿಗೆಯಲ್ಲಿದ್ದ ಒಣಹುಲ್ಲಿಗೆ ತಗುಲಿ ಬೆಂಕಿ ಆವರಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಕಟ್ಟಿಗೆಯಿಂದ ಮಾಡಿದ್ದ ದನದಕೊಟ್ಟಿಗೆ ಬೆಂಕಿ ದೊಡ್ಡದಾಗಿ ಆವರಿಸಿದ್ದರಿಂದ ನಾಲ್ಕು ಆಕಳುಗಳು ಹಾಗೂ ಮೂರು ಕರುಗಳು ಸಜೀವವಾಗಿ ದಹನವಾಗಿವೆ. ಬೆಳಿಗ್ಗೆ ೩ರ ಸುಮಾರಿಗೆ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ. ಬೆಂಕಿ ಜೋರಾಗಿ ಮೇಲ್ಛಾವಣಿಗೆ ಹಾಕಿದ್ದ ಹೆಂಚು ಸಿಡಿಯಲು ಆರಂಭಿಸಿದಾಗ ಅವಘಡದ ಬಗ್ಗೆ ಗೊತ್ತಾಗಿದೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕಂದಾಯ ಇಲಾಖೆ, ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಮುಖ ಸುದ್ದಿ :-   ಅಂಜಲಿ ಹತ್ಯೆ ಪ್ರಕರಣ : ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಸಹೋದರಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement