ಭಾರೀ ಮಳೆಯಿಂದ ರಕ್ಷಣೆ ಪಡೆಯಲು ಜನರ ಜೊತೆ ಕಟ್ಟಡದಲ್ಲಿ ಆಶ್ರಯ ಪಡೆದ ಜಿಂಕೆಗಳ ಹಿಂಡು : ಮೋಡಿ ಮಾಡುವ ವೀಡಿಯೊ ಭಾರೀ ವೈರಲ್ | ವೀಕ್ಷಿಸಿ

ಮಾನವರು ಕಾಡುಗಳನ್ನು ಕತ್ತರಿಸಿ ಕಾಂಕ್ರೀಟ್ ಕಟ್ಟಡಗಳನ್ನು ಕಟ್ಟಲು ಪ್ರಾರಂಭಿಸಿದಾಗಿನಿಂದ ಪ್ರಾಣಿಗಳು ಹೆಚ್ಚಾಗಿ ಮಾನವನ ವಸತಿ ಪ್ರದೇಶಗಳಿಗೆಬರುವುದನ್ನು ಕಾಣುತ್ತಿರುತ್ತೇವೆ. ಕಾಡು ಪ್ರಾಣಿಗಳು ಆಹಾರಕ್ಕಾಗಿ ಅಥವಾ ಇತರ ಅವಶ್ಯಕತೆಗಳಿಗಾಗಿ ಮಾನವರ ವಸತಿ ಪ್ರದೇಶಗಳಿಗೆ ಬರುತ್ತಿರುತ್ತವೆ. ಹೀಗಾಗಿ ಮಾನವ-ಪ್ರಾಣಿಗಳ ಸಂಘರ್ಷ ಆಗಾಗ ನಡೆಯುತ್ತದೆ. ಇತ್ತೀಚೆಗಷ್ಟೇ ಜಪಾನ್‌ನಲ್ಲಿ ಜಿಂಕೆಗಳ ಹಿಂಡು ಭಾರೀ ಮಳೆಯ ನಡುವೆ ಕಟ್ಟಡದ ಕೆಳಗೆ ಮನುಷ್ಯರ ಜೊತೆಯಲ್ಲಿ ಆಶ್ರಯ ಪಡೆದಿರುವ ಘಟನೆಯ ವೀಡಿಯೊ ವೈರಲ್‌ ಆಗಿದೆ.
ಜಪಾನಿನ ನಾರಾದ ಈ ವೀಡಿಯೊ ಮೈಕ್ರೋಬ್ಲಾಗಿಂಗ್ ಸೈಟ್ X (ಹಿಂದಿನ ಟ್ವಿಟರ್) ನಲ್ಲಿ ಭಾರೀ ವೈರಲ್‌ ಆಗುತ್ತಿದೆ. ವೀಡಿಯೊವನ್ನು ಜುಲೈ 26 ರಂದು ತನ್ನು ಯೆಗೆನ್ ಎಂಬವರು ಹಂಚಿಕೊಂಡಿದ್ದಾರೆ.

ಧಾರಾಕಾರ ಮಳೆಯ ನಡುವೆ ಜಪಾನ್‌ನ ನಾರಾ ನಗರದಲ್ಲಿ ಬಹುತೇಕ ಎಲ್ಲಾ ಬೀದಿಗಳು ಸ್ತಬ್ದವಾಗಿದ್ದು ಬಸ್​ಸ್ಟ್ಯಾಂಡ್​ನಲ್ಲಿ ಮನುಷ್ಯರೊಂಗಿಗೆ ಜಿಂಕೆಗಳು ನಿರ್ಭಯವಾಗಿ ಆಶ್ರಯ ಪಡೆದಿರುವುದನ್ನು ಕಾಣಬಹುದು. ಕೆಲವು ಜಿಂಕೆಗಳು ನೆಲದ ಮೇಲೆ ಮಲಗಿದ್ದರೆ, ಇನ್ನು ಕೆಲವು ಜಿಂಕೆಗಳು ಆವರಣದಲ್ಲಿ ತಿರುಗಾಡುತ್ತಿರುವುದು ಕಂಡುಬರುತ್ತದೆ. ಕೆಲವರು ಜಿಂಕೆಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದನ್ನು ನೋಡಬಹುದು. ಜನರು ಅವುಗಳ ಹತ್ತಿರವೇ ಇದ್ದರೂ ಅವುಗಳು ವಿಚಲಿರಾದಂತೆ ಕಾಣಲಿಲ್ಲ.
ಈ ವೀಡಿಯೊ ಕ್ಲಿಪ್ 34.3 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಇದು 5 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ.

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement