ಆಕ್ರೋಶಕ್ಕೆ ಮಣಿದ ಸರ್ಕಾರ : ದೇವಸ್ಥಾನಗಳ ಅನುದಾನಕ್ಕೆ ತಡೆ ನೀಡಿದ್ದ ಆದೇಶ ವಾಪಸ್

ಬೆಂಗಳೂರು : ದೇವಸ್ಥಾನಗಳ ಅಭಿವೃದ್ಧಿ, ಜೀರ್ಣೋದ್ಧಾರ ಅನುದಾನ ತಡೆ ಹಿಡಿದ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಮೂರು ವಿಷಯಗಳನ್ನು ಮುಂದಿಟ್ಟು ಮುಜರಾಯಿ ಇಲಾಖೆ ದೇವಸ್ಥಾನಗಳ ಜೀರ್ಣೋದ್ದಾರಕ್ಕೆ ಅನುದಾನ ತಡೆ ಹಿಡಿದಿತ್ತು. ಇದರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾದ ನಂತರ ಸರ್ಕಾರ ದಿಢೀರ್ ಆದೇಶ ಹಿಂಪಡೆದಿದೆ. ಈ ಕುರಿತು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಆದೇಶ … Continued

ಶೇ. 40% ಕಮಿಷನ್ ಆರೋಪ ಪ್ರಕರಣ: ತನಿಖೆಗೆ ಜಸ್ಟಿಸ್ ನಾಗಮೋಹನ ದಾಸ್ ಸಮಿತಿ ರಚನೆ

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಟೆಂಡರ್‌ ನೀಡುವಾಗ 40% ಕಮಿಷನ್‌ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಆರೋಪಿಸಿರುವ ಕುರಿತು ತನಿಖೆ ಮಾಡಲು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ್ ದಾಸ್ ನೇತೃತ್ವದಲ್ಲಿ ರಾಜ್ಯ ಸರ್ಕಾರ ಸಮಿತಿ ರಚಿಸಿದೆ. ತನಿಖಾ ಸಮಿತಿ ರಚನೆ ಮಾಡಿ ಗುರುವಾರ ಆದೇಶ ಹೋರಡಿಸಿರುವ ಸರ್ಕಾರ, “ಕಾಮಗಾರಿಗಳ ಟೆಂಡರ್‌, ಪುನರ್‌ … Continued

26/11 ಮುಂಬೈ ದಾಳಿ ಆರೋಪಿ ತಹವ್ವುರ್ ರಾಣಾ ಹೇಬಿಯಸ್ ಕಾರ್ಪಸ್ ರಿಟ್‌ ಅರ್ಜಿ ತಿರಸ್ಕರಿಸಿದ ಅಮೆರಿಕ ಕೋರ್ಟ್: ಭಾರತಕ್ಕೆ ಹಸ್ತಾಂತರ ಇನಷ್ಟು ಸನಿಹ

ವಾಷಿಂಗ್ಟನ್:  2008 ರ ಮುಂಬೈ ಭಯೋತ್ಪಾದಕ ದಾಳಿ ಆರೋಪಿ, ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವ್ವುರ್ ರಾಣಾ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ರಿಟ್ ಅನ್ನು ಅಮೆರಿಕದ ನ್ಯಾಯಾಲಯ ತಿರಸ್ಕರಿಸಿದ್ದು, ಇದು ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಅವರಿಗೆ ಪ್ರಮಾಣೀಕರಣ ನೀಡಲು ದಾರಿ ಮಾಡಿಕೊಟ್ಟಿದೆ. ತಹವ್ವುರ್ ರಾಣಾ “ಹೇಬಿಯಸ್ ಕಾರ್ಪಸ್ ರಿಟ್‌ … Continued

ಜಾನುವಾರು ರಕ್ಷಿಸಲು ಹೋದಾಗ ಬಾವಿ ಕುಸಿದು 5 ಮಂದಿ ಸಾವು

ರಾಂಚಿ: ಜಾರ್ಖಂಡ್‌ ರಾಜ್ಯದ ರಾಂಚಿಯ ಹಳ್ಳಿಯೊಂದರಲ್ಲಿ ಗುರುವಾರ ಬಾವಿಯ ಒಂದು ಭಾಗ ಕುಸಿದುಬಿದ್ದು ಕನಿಷ್ಠ ಐವರು ಸಾವಿಗೀಡಾಗಿದ್ದಾರೆ ಎಂದು ಮುಖ್ಯಮಂತ್ರಿ ಹೇಮಂತ್ ಸೊರೆನ್ ತಿಳಿಸಿದ್ದಾರೆ. ಆದಾಗ್ಯೂ, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಟೋಲ್ ಗಳ ಸಂಖ್ಯೆ ನಿಖರವಾಗಿ ತಿಳಿದಿಲ್ಲ ಎಂದು ಎನ್‌ಡಿಆರ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಜಾರ್ಖಂಡ್‌ ರಾಜಧಾನಿ ರಾಂಚಿಯಿಂದ 70 ಕಿಮೀ ದೂರದಲ್ಲಿರುವ ಪಿಸ್ಕಾ ಗ್ರಾಮದಲ್ಲಿ ಈ … Continued

ಬಿಲ್ಕಿಸ್ ಬಾನೊ ಪ್ರಕರಣ: ಆಯ್ದ ಅಪರಾಧಿಗಳಿಗೆ ಮಾತ್ರ ಕ್ಷಮಾದಾನ ಏಕೆ ಎಂದು ಗುಜರಾತ್‌ ಸರ್ಕಾರಕ್ಕೆ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ನವದೆಹಲಿ : 2002ರ ಗಲಭೆಯಲ್ಲಿ ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರವೆಸಗಿ ಆಕೆಯ ಕುಟುಂಬವನ್ನು ಹತ್ಯೆಗೈದ ಅಪರಾಧಿಗಳ ಅಕಾಲಿಕ ಬಿಡುಗಡೆ ಕುರಿತ ಅರ್ಜಿಗಳ ಸರಣಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ ಗುರುವಾರ ಗುಜರಾತ್ ಸರ್ಕಾರಕ್ಕೆ ಕೆಲವು ಕಠಿಣ ಪ್ರಶ್ನೆಗಳನ್ನು ಕೇಳಿದೆ. “ಅಪರಾಧಿಗಳ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ 14 ವರ್ಷಗಳ ಸೇವೆ ಸಲ್ಲಿಸಿದ ನಂತರ … Continued

ವೀಡಿಯೊ.. | ಹೆದ್ದಾರಿಯಲ್ಲಿ ವಿಮಾನ ಅಪಘಾತಕ್ಕೀಡಾಗಿ 10 ಜನರು ಸಾವು: ಅಪಘಾತದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಮಲೇಷ್ಯಾದಲ್ಲಿ ಲಘು ವಿಮಾನವೊಂದು ನಾಲ್ಕು ಪಥದ ರಸ್ತೆಯಲ್ಲಿ ಪತನಗೊಂಡ ಭಯಾನಕ ಕ್ಷಣವನ್ನು ಹೆದ್ದಾರಿಯಲ್ಲಿ ಹೋಗುತ್ತಿದ್ದ ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಹಿಡಿಯಲಾಗಿದೆ. ಅಪಘಾತದಲ್ಲಿ ವಿಮಾನದಲ್ಲಿದ್ದ ಎಂಟು ಜನರು ಮತ್ತು ರಸ್ತೆಯಲ್ಲಿದ್ದ ಇಬ್ಬರು ವಾಹನ ಸವಾರರು ಸಾವಿಗೀಡಾಗಿದ್ದಾರೆ. ವಿಮಾನವು ನೆಲದ ಮೇಲೆ ಅಪ್ಪಳಿಸಿತು ಮತ್ತು ಸ್ಫೋಟಗೊಂಡಿತು, ಅದು ದೊಡ್ಡ ಬೆಂಕಿಯ ಚೆಂಡಾಗಿ ಮಾರ್ಪಟ್ಟಿತು ಎಂದು ವೀಡಿಯೊ ಕ್ಲಿಪ್ ತೋರಿಸಿದೆ. ಸ್ವಲ್ಪ … Continued

ಇಂದು ಬೆಂಗಳೂರಿನಲ್ಲಿ ದೇಶದ ಮೊದಲ 3D ಅಂಚೆ ಕಚೇರಿ ಉದ್ಘಾಟನೆ

ಬೆಂಗಳೂರು: ನಗರದಲ್ಲಿ ನಿರ್ಮಾಣಗೊಂಡಿರುವ ದೇಶದ ಮೊದಲ 3ಡಿ-ಮುದ್ರಿತ ಅಂಚೆ ಕಚೇರಿಯನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ ಅವರು ಶುಕ್ರವಾರ (ಆಗಸ್ಟ್‌ 18) ಉದ್ಘಾಟಿಸಲಿದ್ದಾರೆ. ‘ಕೇಂಬ್ರಿಡ್ಜ್ ಲೇಔಟ್ ಪಿಒ’ ಎಂದು ಹೆಸರಿಸಡಿಲಾದ ಈ ಕಚೇರಿಯನ್ನು ಅವರು ಬೆಳಗ್ಗೆ ಉದ್ಘಾಟಿಸಲಿದ್ದಾರೆ. ಕೇವಲ 44 ದಿನಗಳಲ್ಲಿ ಈ 3ಡಿ ತಂತ್ರಜ್ಞಾನದ ಮೊದಲ ಅಂಚೆ ಕಚೇರಿಯನ್ನು ನಿರ್ಮಿಸಲಾಗಿದೆ. L&T ನಿರ್ಮಿಸುತ್ತಿರುವ ಕಟ್ಟಡವು … Continued

ಮಾಜಿ ವೈಜ್ಞಾನಿಕ ಸಲಹೆಗಾರ-ಡಿಆರ್‌ಡಿಒ ಮುಖ್ಯಸ್ಥ ಪದ್ಮವಿಭೂಷಣ ಡಾ.ವಿ.ಎಸ್. ಅರುಣಾಚಲಂ ನಿಧನ ಇನ್ನಿಲ್ಲ

ಬೆಂಗಳೂರು: ಭಾರತೀಯ ವಿಜ್ಞಾನಿ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮಾಜಿ ಮಹಾನಿರ್ದೇಶಕ ಡಾ ವಲ್ಲಂಪಡುಗೈ ಶ್ರೀನಿವಾಸ ರಾಘವನ್ ಅರುಣಾಚಲಂ ಅವರು ಬುಧವಾರ ಕ್ಯಾಲಿಫೋರ್ನಿಯಾದಲ್ಲಿ ನಿಧನರಾದರು. ಮೃತರು ಪತ್ನಿ ಮೀನಾ, ಮಕ್ಕಳಾದ ರಘು, ಮಾಳವಿಕಾ ಮತ್ತು ರಾಮು ಮತ್ತು ಆರು ಮೊಮ್ಮಕ್ಕಳನ್ನು ಅಗಲಿದ್ದಾರೆ. ಅರುಣಾಚಲಂ ಅವರಿಗೆ 87 ವರ್ಷ ವಯಸ್ಸಾಗಿತ್ತು ಮತ್ತು ಅವರು … Continued

ಸಗಟು ಸಿಮ್ ಕಾರ್ಡ್ ಸಂಪರ್ಕಗಳ ಮೇಲೆ ನಿಷೇಧ: ಸೈಬರ್ ವಂಚನೆ ಪರಿಶೀಲಿಸಲು ಸರ್ಕಾರದ ಕ್ರಮ

ನವದೆಹಲಿ: ಡಿಜಿಟಲ್ ವಂಚನೆಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರವು ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವ ಡೀಲರ್‌ಗಳ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ ಮತ್ತು ದೊಡ್ಡ ಪ್ರಮಾಣದ ಅಥವಾ ಸಗಟು ಸಂಪರ್ಕಗಳನ್ನು ನೀಡುವುದನ್ನು ನಿಲ್ಲಿಸಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಹೇಳಿದ್ದಾರೆ. ಇದಕ್ಕೂ ಮೊದಲು, ಹೊಸ ಕ್ರಮಗಳನ್ನು ಘೋಷಿಸುವಾಗ, ಸಿಮ್ ಕಾರ್ಡ್ ಡೀಲರ್‌ಗಳ ಪೊಲೀಸ್ ಪರಿಶೀಲನೆಯನ್ನು ಸರ್ಕಾರವು ಕಡ್ಡಾಯಗೊಳಿಸಿದೆ … Continued

2ನೇ ಎಫ್‌ಐಆರ್‌; ನಟ ಉಪೇಂದ್ರಗೆ ರಿಲೀಫ್‌ ನೀಡಿದ ಹೈಕೋರ್ಟ್‌

ಬೆಂಗಳೂರು : ಚಿತ್ರನಟ ಉಪೇಂದ್ರ ವಿರುದ್ಧದ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಎರಡನೇ ಎಫ್ಐಆರ್ ರದ್ದು ಕೋರಿ ನಟ, ನಿರ್ದೇಶಕ ಉಪೇಂದ್ರ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ 2ನೇ ಎಫ್‌ಐಆರ್‌ಗೂ ಸಹ ಮಧ್ಯಂತರ ತಡೆಯಾಜ್ಞೆ ಕೊಟ್ಟಿದೆ. ವಿಚಾರಣೆಯನ್ನು ಇದೇ 24ಕ್ಕೆ ಮುಂದೂಡಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ … Continued