ಇನ್ನು ಆಡಿಯೋ-ವೀಡಿಯೊ ಕಾಲ್‌ ಮಾಡಲು ಫೋನ್ ನಂಬರ್ ಬೇಕಿಲ್ಲ : ‘ಎಕ್ಸ್‌’ (ಟ್ವಿಟರ್‌)ನಲ್ಲಿ ಬರಲಿದೆ ಹೊಸ ವೈಶಿಷ್ಟ್ಯ

ಫೋನ್ ಕರೆ ಮಾಡಲು ಫೋನ್ ನಂಬರ್ ಇಲ್ಲದೇ ಕರೆ ಮಾಡಬಹುದು..! ಆದರೆ, ಇಲ್ಲೊಂದು ಟ್ವಿಸ್ಟ್ ಇದೆ. ಏನೆಂದರೆ, ನೀವು ಎಕ್ಸ್ (ಟ್ವಿಟರ್‌) ವೇದಿಕೆಯಲ್ಲಿ ಖಾತೆ ಹೊಂದಿರಬೇಕಾಗುತ್ತದೆ. ಎಕ್ಸ್‌ ಮಾಲೀಕ ಎಲಾನ್ ಮಸ್ಕ್ ಅವರು, ತಮ್ಮ ಎಕ್ಸ್ ವೇದಿಕೆಯಲ್ಲಿ ಶೀಘ್ರವೇ ವಿಡಿಯೋ ಮತ್ತು ಆಡಿಯೋ ಕಾಲ್ ಫೀಚರ್ ಒದಗಿಸುವುದಾಗಿ ಪ್ರಕಟಿಸಿದ್ದಾರೆ.
ಎಲಾನ್ ಮಾಸ್ಕ್ ತಮ್ಮ ಮಾಲೀಕತ್ವದ ಟ್ವಿಟ್ಟರ್ ಸಂಸ್ಥೆಯ ಹೆಸರು ಮತ್ತು ಲೋಗೋವನ್ನ ಬದಲಿಸಿ ಸಂಚಲನ ಸೃಷ್ಟಿಸಿದ್ದರು. ಟ್ವಿಟ್ಟರ್ ಹೆಸರನ್ನ X ಎಂದು ಬದಲಿಸಿದ್ದರು. ಇದೀಗ ಎಕ್ಸ್​​ ಮೂಲಕ ವಾಟ್ಸಾಪ್​ಗೆ ಸೆಡ್ಡು ಹೊಡೆಯಲು ಅವರು ಮುಂದಾಗಿದ್ದಾರೆ.

ಶೀಘ್ರದಲ್ಲೇ X ಮೂಲಕ ಬಳಕೆದಾರರು ವೀಡಿಯೊ, ಆಡಿಯೋ ಕರೆ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ. ಆದರೆ ಈ ಹೊಸ ಫೀಚರ್ ಯಾವಾಗ ಲಾಂಚ್ ಆಗಲಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.
X ಹೊಸ ಫೀಚರ್ ಪರಿಚಯಿಸಲು ಸಜ್ಜಾಗಿದೆ. X ಮೂಲಕ ಬಳಕೆದಾರರು ವೀಡಿಯೊ ಹಾಗೂ ಆಡಿಯೋ ಕಾಲ್ ಮಾಡಬಹುದು. ಈ ವಿಶೇಷ ವೈಶಿಷ್ಟ್ಯಕ್ಕೆ ಯಾವುದೇ ಫೋನ್ ನಂಬರ್ ಅಗತ್ಯವಿಲ್ಲ. ಯಾರಿಗೆ ಕರೆ ಮಾಡಬೇಕು, ಅವರ X ಖಾತೆ ಕ್ಲಿಕ್ ಮಾಡಿ ಆಡಿಯೋ ಅಥವಾ ವೀಡಿಯೊ ಕರೆಯನ್ನು ಆಯ್ಕೆ ಮಾಡಿಕೊಂಡರೆ ಸಾಕು ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಕೆನಡಾ ಪ್ರಧಾನಿಯಿಂದ ಮತ್ತೊಂದು ಎಡವಟ್ಟು : ನಾಜಿ ಹೋರಾಟಗಾರನ ಗೌರವಿಸಿದ ನಂತರ ಯಹೂದಿಗಳ ಕ್ಷಮೆಯಾಚಿಸಿದ ಕೆನಡಾ ಸಂಸತ್ತಿನ ಸ್ಪೀಕರ್

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement