ರಾಜಕುಮಾರ ಹಾಗೂ ಸುಧಾರಣೆ : ಸೌದಿ ಅರೇಬಿಯಾದಲ್ಲಿ ಸುಧಾರಣೆಗಳನ್ನು ತರುತ್ತಿರುವ 38 ವರ್ಷದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್

38 ವರ್ಷದ ಸೌದಿ ಅರೇಬಿಯಾದ ಆಡಳಿತಗಾರ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಅವರು ತೈಲ ಸಮೃದ್ಧ ದೇಶದ ಸುಧಾರಣೆಗಳ ಬಗ್ಗೆ ಕಟಿಬದ್ಧರಾಗಿದ್ದಾರೆ. ಗಡ್ಡಧಾರಿ ಮತ್ತು ಸಾಂಪ್ರದಾಯಿಕ ಅರಬ್ ನಿಲುವಂಗಿಯನ್ನು ಮತ್ತು ಸ್ಯಾಂಡಲ್‌ಗಳನ್ನು ಧರಿಸುವ ಅವರು ಸೌದಿ ಅರೇಬಿಯಾದ ಆಧುನಿಕ ಇತಿಹಾಸದಲ್ಲಿ ದೇಶದ ಅತಿದೊಡ್ಡ ರೂಪಾಂತರವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಅದೇರೀತಿ ಅವರು ವಿವಾದಗಳಿಂದಲೂ ಹೊರತಾಗಿಲ್ಲ.
ಸೋಮವಾರ, ಸೌದಿ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಕಾರ್ಯತಂತ್ರದ ಪಾಲುದಾರಿಕೆ ಮಂಡಳಿಯ ನಾಯಕರ ಮೊದಲ ಸಭೆ ನಡೆಸಿದರು ಮತ್ತು ದ್ವಿಪಕ್ಷೀಯ ಸಹಕಾರದ ಪ್ರಮುಖ ವಿಷಯಗಳ ಕುರಿತು ಚರ್ಚಿಸಿದರು. G20 ಶೃಂಗಸಭೆಗಾಗಿ ಭಾರತಕ್ಕೆ ಬಂದಿದ್ದ, ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಪ್ರಧಾನಿ ಮೋದಿಯವರೊಂದಿಗಿನ ದ್ವಿಪಕ್ಷೀಯ ಸಭೆಗಾಗಿ ಸರ್ಕಾರಿ ಭೇಟಿಯ ಸ್ಥಾನಮಾನ ನೀಡಲಾಯಿತು.
ಎರಡೂ ದೇಶಗಳಿಗೆ ಉತ್ತಮ ಭವಿಷ್ಯವನ್ನು ಸೃಷ್ಟಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ” ಎಂದಿರುವ ಕ್ರೌನ್ ಪ್ರಿನ್ಸ್, G20 ಶೃಂಗಸಭೆಯನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಭಾರತವನ್ನು ಅಭಿನಂದಿಸಿದರು.

ಮೊಹಮ್ಮದ್ ಬಿನ್ ಸಲ್ಮಾನ್ 2015 ರಲ್ಲಿ ಅವರ ತಂದೆ ಕಿಂಗ್‌ ಸಲ್ಮಾನ್ ಅವರಿಂದ ಉಪ ಕ್ರೌನ್ ಪ್ರಿನ್ಸ್ ಆಗಿ ನೇಮಕಗೊಂಡರು. ಅವರು ಕಿಂಗ್ ಸೌದ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ. ಕಳೆದ ಏಳು ವರ್ಷಗಳಲ್ಲಿ, ಮೊಹಮ್ಮದ್ ಬಿನ್ ಸಲ್ಮಾನ್ ಅವರು ತಮ್ಮ ಐತಿಹಾಸಿಕವಾಗಿ ಸಂಪ್ರದಾಯವಾದಿ ದೇಶದಲ್ಲಿ ಗಣನೀಯ ಬದಲಾವಣೆಗಳನ್ನು ಜಾರಿಗೆ ತಂದಿದ್ದಾರೆ ಮತ್ತು ವಾಸ್ತವಿಕ ಆಡಳಿತಗಾರರಾಗಿ ತಮ್ಮ ಪ್ರಭಾವವನ್ನು ಗಟ್ಟಿಗೊಳಿಸಿದ್ದಾರೆ. ಪ್ರಿನ್ಸ್ ಮೊಹಮ್ಮದ್ ಹೆಚ್ಚು ಮಧ್ಯಮವಾದಿ ಸೌದಿ ಅರೇಬಿಯಾವನ್ನಾಗಿ ಪರಿವರ್ತಿಸಲು ಕಟಿಬದ್ಧರಾಗಿದ್ದಾರೆ ಮತ್ತು ತೈಲದ ಮೇಲೆ ದೇಶದ ಭಾರೀ ಅವಲಂಬನೆ ಕಡಿಮೆ ಮಾಡುವ ಗುರಿ ಹೊಂದಿರುವ ಅವರ ವಿಸ್ತಾರವಾದ ವಿಷನ್ 2030 ಯೋಜನೆಯನ್ನು ಬೆಂಬಲಿಸಲು ವಿದೇಶಿ ಹೂಡಿಕೆದಾರರನ್ನು ಸಕ್ರಿಯವಾಗಿ ಆಕರ್ಷಿಸುತ್ತಿದ್ದಾರೆ.
ಅವರ ನೇತೃತ್ವದಲ್ಲಿ ಸೌದಿ ಅರೇಬಿಯಾವು ಚಲನಚಿತ್ರೋತ್ಸವ, ಒಪೆರಾಗಳು, ಫಾರ್ಮುಲಾ ಒನ್ ಗ್ರ್ಯಾಂಡ್ ಪ್ರಿಕ್ಸ್ ಮತ್ತು ವೃತ್ತಿಪರ ಕುಸ್ತಿ ಕಾರ್ಯಕ್ರಮವನ್ನು ಆಯೋಜಿಸಿದೆ. ಇಸ್ಲಾಮಿಕ್ ಧಾರ್ಮಿಕ ಪೋಲೀಸರನ್ನು ಸಹ ಅಪಮಾನಗೊಳಿಸಲಾಗಿದೆ. ಚಿತ್ರಮಂದಿರಗಳು ಪುನರಾರಂಭಗೊಂಡಿದ್ದು, ವಿದೇಶಿ ಪ್ರವಾಸಿಗರನ್ನು ಸ್ವಾಗತಿಸಲಾಗುತ್ತಿದೆ.
ಪ್ರಿನ್ಸ್ ಮೊಹಮ್ಮದ್ ಅವರು ಮಹಿಳೆಯರ ಹಕ್ಕುಗಳ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದ್ದಾರೆ, ಸೌದಿ ಅರೇಬಿಯಾದ ಮಹಿಳೆಯರಿಗೆ ವಾಹನ ಚಲಾಯಿಸಲು, ಪುರುಷರೊಂದಿಗೆ ಕ್ರೀಡಾಕೂಟಗಳು ಮತ್ತು ಸಂಗೀತ ಕಚೇರಿಗಳಿಗೆ ಹೋಗಲು ಮತ್ತು ಪುರುಷ ಪೋಷಕರ ಒಪ್ಪಿಗೆಯಿಲ್ಲದೆ ಪಾಸ್‌ಪೋರ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ 'ಡೆಂಗೆ' ಹೆಚ್ಚಳ ; ಎಲ್ಲ ಶಾಲೆಗಳಿಗೆ ಮಾರ್ಗಸೂಚಿ ಪ್ರಕಟ

ಕೆಂಪು ಸಮುದ್ರದ ಕರಾವಳಿಯಲ್ಲಿ $500-ಶತಕೋಟಿ NEOM ಯೋಜನೆಯು ಸೌರಶಕ್ತಿಯ ಮೇಲೆ ಅವಲಂಬಿತವಾಗಿದೆ ಮತ್ತು ಇಲ್ಲಿ ರೋಬೋಟ್‌ಗಳನ್ನು ಸಿಬ್ಬಂದಿಯಾಗಿ ನಿಯೋಜಿಸಲು ಉದ್ದೇಶಿಸಲಾಗಿದೆ. ಇದು ಬಹುಶಃ ಅವರ ಅತ್ಯಂತ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿದೆ.
ಆದರೆ ಪ್ರಿನ್ಸ್ ಮೊಹಮ್ಮದ್ ಟೀಕಾಕಾರರನ್ನು ಜೈಲಿಗೆ ಹಾಕುವುದು ಮತ್ತು ಪತ್ರಕರ್ತ ಜಮಾಲ್ ಖಶೋಗಿ ಅವರ ಹತ್ಯೆ ಪ್ರಕರಣದಿಂದಾಗಿ ಸಾಕಷ್ಟು ಟೀಕೆಗಳಿಗೆ ಒಳಗಾಗಿದ್ದಾರೆ. 2017 ರಲ್ಲಿ, ಅವರ ಭ್ರಷ್ಟಾಚಾರ-ವಿರೋಧಿ ಅಭಿಯಾನದ ಅಡಿಯಲ್ಲಿ, ಸೌದಿ ಗಣ್ಯರು ತಮ್ಮ ಶತಕೋಟಿ ಡಾಲರ್‌ಗಳ ಒಟ್ಟು ಆಸ್ತಿಯನ್ನು ಹಸ್ತಾಂತರಿಸುವ ವರೆಗೆ ದೇಶದ ಗಣ್ಯರ 200 ಕ್ಕೂ ಹೆಚ್ಚು ಸದಸ್ಯರನ್ನು ರಿಟ್ಜ್ ಕಾರ್ಲ್ಟನ್‌ನಲ್ಲಿ ಬಂಧಿಸಲಾಗಿತ್ತು.
2018 ರಲ್ಲಿ, ವಾಷಿಂಗ್ಟನ್ ಪೋಸ್ಟ್ ಅಂಕಣಕಾರ ಖಶೋಗ್ಗಿಯನ್ನು ಇಸ್ತಾನ್‌ಬುಲ್‌ನಲ್ಲಿರುವ ಸೌದಿ ಕಾನ್ಸುಲೇಟ್‌ನಲ್ಲಿ ರಾಜಕುಮಾರನ ಆದೇಶದ ಮೇರೆಗೆ ಕೊಲ್ಲಲಾಯಿತು ಎಂಬ ಆರೋಪಗಳಿವೆ. ಆದಾಗ್ಯೂ, ಮುಸ್ಲಿಂ-ಬಹುಸಂಖ್ಯಾತ ದೇಶಗಳಿಂದ ಹೆಚ್ಚು ಒಲವು ಪಡೆಯುವಲ್ಲಿ ಪ್ರಿನ್ಸ್ ಮೊಹಮ್ಮದ್ ಅಡಿಯಲ್ಲಿ ಸೌದಿ ಅರೇಬಿಯಾದ ನಾಯಕತ್ವವು ಅದರ ಸಾಂಪ್ರದಾಯಿಕ ಎದುರಾಳಿ ಇರಾನ್‌ಗಿಂತ ಮುಂದಿದೆ. 2022ರಲ್ಲಿ ಗ್ಯಾಲಪ್ ಸಮೀಕ್ಷೆಯ ಪ್ರಕಾರ, 13 ಇಸ್ಲಾಮಿಕ್ ದೇಶಗಳಲ್ಲಿ, ಮೊರಾಕೊದಿಂದ ಪಾಕಿಸ್ತಾನದವರೆಗೆ, ಸೌದಿ ಅರೇಬಿಯಾದ ನಾಯಕತ್ವದ ಸರಾಸರಿ ಅನುಮೋದನೆ (39%) ಆಗಿದ್ದರೆ ಇರಾನ್‌ನ ಸರಾಸರಿ ಅನುಮೋದನೆ (14%) ಹೆಚ್ಚಾಗಿದೆ.

ವಾಷಿಂಗ್ಟನ್ ಡಿಸಿ-ಆಧಾರಿತ ಮಿಡಲ್ ಈಸ್ಟ್ ಇನ್‌ಸ್ಟಿಟ್ಯೂಟ್ ಪ್ರಕಾರ, ಸೌದಿ ನೀತಿ ರೂಪಿಸುವಲ್ಲಿ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಪ್ರಮುಖ ಪಾತ್ರದ ಹೊರತಾಗಿಯೂ, ದೇಶದ ಆರ್ಥಿಕ ಕಾರ್ಯತಂತ್ರವು ಫ್ಲ್ಯಾಶಿ ಫ್ಯೂಚರಿಸಂಗಿಂತ ಗಣನೀಯವಾಗಿ ಹೆಚ್ಚು ಸಾಂಪ್ರದಾಯಿಕ ಮತ್ತು ಪ್ರಾಯೋಗಿಕ ನಿಯಮಗಳ ಮೇಲೆ ನಿರ್ಮಿತವಾಗಿದೆ.
ಅವರು ಹೂಡಿಕೆಯಿಂದ ಹಿಡಿದು ಶಸ್ತ್ರಾಸ್ತ್ರಗಳ ಒಪ್ಪಂದಗಳು ಮತ್ತು ಕರೆನ್ಸಿ ವಿನಿಮಯದಿಂದ ಹಿಡಿದು ತೈಲ ಉತ್ಪಾದನೆ ಹೆಚ್ಚಿಸುವವರೆಗೆ ಎಲ್ಲದಕ್ಕೂ ಪ್ರಿನ್ಸ್ ಮೊಹಮ್ಮದ್ ಅವರ ಮನೆ ಬಾಗಿಲಲ್ಲಿ ವಿಶ್ವದ ನಾಯಕರು ಸಾಲುಗಟ್ಟಿ ನಿಲ್ಲುತ್ತಾರೆ.
ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನ ಇತ್ತೀಚಿನದು. ಪಾಕಿಸ್ತಾನದಲ್ಲಿ 25 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಪ್ರಿನ್ಸ್ ಮೊಹಮ್ಮದ್ ಭರವಸೆ ನೀಡಿದ್ದಾರೆ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಸೆಪ್ಟೆಂಬರ್ 2 ರಂದು ದೇಶದ ಉದ್ಯಮಿಗಳಿಗೆ ತಿಳಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ : ಜೈಪುರ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ಸ್ಪೈಸ್‌ಜೆಟ್ ಮಹಿಳಾ ಉದ್ಯೋಗಿ ; ಬಂಧನ

ಸೌದಿ ರಾಜಕುಮಾರ ಶ್ರೀಮಂತ ಜೀವನಶೈಲಿಯ ಅಭಿರುಚಿಯನ್ನು ಹೊಂದಿರುವ ವಿನೋದಮಯ ವ್ಯಕ್ತಿ ಎಂದೂ ತಿಳಿದುಬಂದಿದೆ. ಪ್ರಿನ್ಸ್ ಮೊಹಮ್ಮದ್ $ 500 ಮಿಲಿಯನ್ ವಿಹಾರ ನೌಕೆ, ಫ್ರೆಂಚ್ ಚಟೌ ಮತ್ತು $ 450 ಮಿಲಿಯನ್ ಲಿಯೊನಾರ್ಡೊ ಡಾ ವಿನ್ಸಿ ಪೇಂಟಿಂಗ್ ಹೊಂದಿದ್ದಾರೆಂದು ವರದಿಯಾಗಿದೆ.
ಈ ಶ್ರೀಮಂತ ಮತ್ತು ಸುಧಾರಣಾವಾದಿ ಪ್ರಿನ್ಸ್ ಮೊಹಮ್ಮದ್ ಅಡಿಯಲ್ಲಿ, ಸೌದಿ ಅರೇಬಿಯಾ ಬಹುಶಃ ದೊಡ್ಡ ರೂಪಾಂತರವನ್ನು ನೋಡುತ್ತದೆ. ಅವರ ತಂದೆ, ಕಿಂಗ್‌ ಸಲ್ಮಾನ್ ವಯಸ್ಸು 87. ಪ್ರಿನ್ಸ್ ಮೊಹಮ್ಮದ್ ಅವರು ಸೌದಿ ಅರೇಬಿಯಾದ ಸಿಂಹಾಸನದ ಕೂಡ್ರುವ ಅತ್ಯಂತ ಕಿರಿಯ ವಯಸ್ಸಿನವರಾಗಿದ್ದಾರೆ. ಮತ್ತು ಈಗಾಗಲೇ ಅವರು ಸೌದಿಯ ದೈನಂದಿನ ವ್ಯವಹಾರಗಳ ಮೇಲೆ ಬಲವಾದ ಹಿಡಿತವನ್ನು ಹೊಂದಿದ್ದಾರೆ. ಅವರು ತನ್ನ ದೇಶದ ಮೇಲೆ ತಮ್ಮ ಛಾಪಿನ ಬಲವಾದ ಮುದ್ರೆ ಒತ್ತಲು ಬದ್ಧರಾಗಿದ್ದಾರೆ.

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement