ಸರ್ವರಿಗೂ ಕ್ರೋಧಿ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು

ಮೊರಾಕೊ ಭೂಕಂಪ : ಕೂದಲೆಳೆಯ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾದ ವ್ಯಕ್ತಿ | ವೀಡಿಯೊ

ಮೊರಾಕೊ : ವಿನಾಶಕಾರಿ ಮೊರಾಕೊ ಭೂಕಂಪ ಅನೇಕ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಸಾಮಾಜಿಕ ಮಾಧ್ಯಮವು ಮೊರಾಕೊದಲ್ಲಿನ ಕಂಪನದ ಕ್ಷಣದ ವೀಡಿಯೊಗಳು ವೈರಲ್‌ ಆಗುತ್ತಿವೆ.
ಇಲ್ಲಿ ಜನರು ತಮ್ಮ ಮನೆ ಕಳೆದುಕೊಂಡು ಬೀದಿ ಪಾಲಾದರೆ, ಜನರ ಮೇಲೆ ಕಟ್ಟಡಗಳು ಉರುಳುವ ವಿಡಿಯೋಗಳನ್ನು ನೋಡಬಹುದು.

ಈಗ ವೈರಲ್‌ ಆಗಿರುವ ವಿಡಿಯೋದಲ್ಲಿ, ಕಟ್ಟಡದ ಗೋಡೆ ಕುಸಿದಿದ್ದು, ವ್ಯಕ್ತಿಯೊಬ್ಬರು ಕೂದಲೆಳೆಯ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ.ವೀಡಿಯೊವು ಕಟ್ಟಡಗಳ ಮಧ್ಯೆ ಕಿರಿದಾದ ದಾರಿಯನ್ನು ತೋರಿಸುತ್ತದೆ.

ಭೂಕಂಪದಿಂದ ಕಟ್ಟಡವು ಅದುರಿದೆ. ಅದೇ ವೇಳೆ, ಭೂಕಂಪದಿಂದ ಕಟ್ಟಡ ಅದುರುವುದನ್ನು ನೋಡಿದ ವ್ಯಕ್ತಿಯೊಬ್ಬ ಅದೇ ದಾರಿಯಲ್ಲಿ ಓಡಿಬಂದ ವ್ಯಕ್ತಿ ಮುಂದೆ ಸಾಗುತ್ತಿದ್ದಾನೆ. ಆವೇಳೆಗೆ ಕಟ್ಟಡದ ಗೋಡೆ ಕುಸಿದಿದೆ. ಆತ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement