17 ವೈದ್ಯರಿಂದ ಕಂಡುಹಿಡಿಯಲಾಗದ 4 ವರ್ಷದ ಮಗುವಿನ ನಿಗೂಢ ಕಾಯಿಲೆಯನ್ನು ಸರಿಯಾಗಿ ಪತ್ತೆಹಚ್ಚಿದ ಚಾಟ್ ಜಿಪಿಟಿ (ChatGPT)…!

17 ವೈದ್ಯರಿಂದ ಕಂಡುಹಿಡಿಯಲು ಸಾಧ್ಯವಾಗದ ಬಾಲಕನ ಕಾಯಿಲೆಯನ್ನು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಚಾಟ್ ಜಿಪಿಟಿ (ChatGPT) ಕಂಡುಹಿಡಿದಿದೆ…! ತನ್ನ ಮಗನ ಕಾಯಿಲೆ ಪತ್ತೆಯಾಗದ ಕಾರಣ ಬಾಲಕನ ತಾಯಿ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಚಾಟ್ ಜಿಪಿಟಿ (ChatGPT) ಮೊರೆ ಹೋಗಿದ್ದು, ಅದರ ಮೂಲಕ ತಿಳಿದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಕೋವಿಡ್‌-19 ಸಾಂಕ್ರಾಮಿಕದ ಉತ್ತುಂಗದಲ್ಲಿ, ಕರ್ಟ್ನಿಯ ಎಂಬ ಮಹಿಳೆಯ ನಾಲ್ಕು ವರ್ಷದ ಮಗ ಅಲೆಕ್ಸ್, ಗೊಂದಲದ ಲಕ್ಷಣಗಳನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದ್ದಾನೆ. ಆತ ತುಂಬಾ ನೋವಿನಿಂದ ಬಳಲುತ್ತಿದ್ದ ಹಾಗೂ ಎಲ್ಲಾ ರೀತಿಯ ವಸ್ತುಗಳನ್ನು ಅಗಿಯುತ್ತಿದ್ದ. ಅಲ್ಲದೆ ಆತನ ಬೆಳವಣಿಗೆ ಸಹ ಆಗುತ್ತಿರಲಿಲ್ಲ ಎಂದು ಮಹಿಳೆ TODAY.com ಗೆ ತಿಳಿಸಿದ್ದಾರೆ. ಕರ್ಟ್ನಿ ತನ್ನ ಕುಟುಂಬದ ಗೌಪ್ಯತೆ ಹಾಗೂ ಖಾಸಗಿತನ ಕಾಪಾಡಲು ತನ್ನ ಕೊನೆಯ ಹೆಸರನ್ನು ಹೇಳಿಲ್ಲ.
2021ರಲ್ಲಿ, ಬಾಲಕ ಅಲೆಕ್ಸ್ ತನ್ನ ಎಡ ಮತ್ತು ಬಲ ಭಾಗದ ನಡುವೆ ಸಮತೋಲನ ಕಳೆದುಕೊಂಡ. ಆದರೆ ಆತನಿಗೆ ಏನಾಗಿದೆ ಎಂಬುದನ್ನು ಯಾರಿಗೂ ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಮೂರು ವರ್ಷಗಳಲ್ಲಿ 17 ವೈದ್ಯರು ಭೇಟಿ ಮಾಡಿದ ನಂತರವೂ ಮಗುವಿಗೆ ಏನಾಗಿದೆ ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗದ ಕಾರಣ ಮಹಿಳೆ ಚಾಟ್‌ ಜಿಪಿಟಿ (ChatGPT)ಗೆ ಮೊರೆ ಹೋಗಿದ್ದಾರೆ. ಚಾಟ್‌ ಜಿಪಿಟಿ (ChatGPT)ಯು ಬಾಲಕ ಅಲೆಕ್ಸ್‌ಗೆ ಬೆನ್ನುಹುರಿಯಲ್ಲಿ ಅಸಹಜತೆ ಇದೆ ಎಂದು ಭಾವಿಸಿದೆ. ಮತ್ತು ಅದು ಸರಿಯಾಗಿದೆ ಎಂಬುದು ಅನಂತರ ಕಂಡುಬಂದಿದೆ ಎಂದು ಅವರು TODAY.com ಗೆ ತಿಳಿಸಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಅಮೆರಿಕಕ್ಕೆ ಭಾರತ ಅಥವಾ ಕೆನಡಾ ಮಧ್ಯೆ ಒಬ್ಬರನ್ನು ಆಯ್ಕೆ ಮಾಡಬೇಕಾಗಿ ಬಂದರೆ ಅದರ ಆಯ್ಕೆ.....: ಮಾಜಿ ಪೆಂಟಗನ್ ಅಧಿಕಾರಿ

ವೈದ್ಯರು ವಿಫಲವಾದಾಗ ChatGPT ಪತ್ತೆಹಚ್ಚಿದೆ….
ಅಲೆಕ್ಸ್ ಗೆ ಕ್ರಿಸ್‌ಕ್ರಾಸ್ ಆಪಲ್‌ಸೌಸ್‌ನಲ್ಲಿ ಕುಳಿತುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಎಂಬುದನ್ನು ಗಮನಿಸಿದ್ದೆ. ಹೀಗಾಗಿ ಇದು ದೆಹದ “ರಚನೆಯಲ್ಲಿ ಏನಾದರೂ ದೋಷವಿರಬಹುದು ಎಂದು ಅಂದುಕೊಂಡೆ. ನಂತರ ನಾನು ಅಲೆಕ್ಸ್‌ನ ಎಂಆರ್‌ ಐ (MRI) ಟಿಪ್ಪಣಿಗಳಲ್ಲಿದ್ದ ಒಂದೊಂದು ಸಾಲನ್ನೂ ಓದಿದೆ. ನಂತರ ಅದನ್ನು ಚಾಟ್‌ ಜಿಪಿಟಿ (ChatGPT)ಗೆ ಪ್ಲಗ್ ಮಾಡಿದೆ. ಚಾಟ್‌ ಜಿಪಿಟಿ ಅಂತಿಮವಾಗಿ ಇದನ್ನು ಬೆನ್ನುಹುರಿಯು ಅದರ ಸುತ್ತಮುತ್ತಲಿನ ಅಂಗಾಂಶಗಳಿಗೆ ಅಂಟಿಕೊಂಡ ಕಾರಣಕ್ಕೆ ಉಂಟಾಗುವ ನರವೈಜ್ಞಾನಿಕ ಸಿಂಡ್ರೋಮ್ “ಟೆಥರ್ಡ್ ಕಾರ್ಡ್ ಸಿಂಡ್ರೋಮ್” ಎಂದು ಹೆಸರಿಸಿತು.
ನಂತರ ಕರ್ಟ್ನಿ ಅವರು ಸಿಂಡ್ರೋಮ್ ಹೊಂದಿರುವ ಮಕ್ಕಳ ಕುಟುಂಬಗಳಿಗಾಗಿ ಇರುವ ಫೇಸ್‌ಬುಕ್ ಗುಂಪನ್ನು ಸೇರಿಕೊಂಡರು ಮತ್ತು ಅಲೆಕ್ಸ್‌ನ ಕಥೆಗಳನ್ನು ಪ್ರತಿಬಿಂಬಿಸುವ ಅನೇಕ ಕಥೆಗಳನ್ನು ಅಲ್ಲಿ ನೋಡಿದರು. ನಂತರ ಅವರು ಹೊಸ ನರಶಸ್ತ್ರಚಿಕಿತ್ಸಕರನ್ನು ಭೇಟಿಯಾದರು. ಹಾಗೂ ಅವರಿಗೆ ಚಾಟ್‌ಜಿಪಿಟಿಯು ತನ್ನ ಮಗನ ಕಾಯಿಲೆ ಬಗ್ಗೆ ನೀಡಿದ ಸಲಹೆ ಹಾಗೂ ಉತ್ತರದ ಬಗ್ಗೆ ತಿಳಿಸಿದರು.

ವೈದ್ಯರು ಕೃತಕ ಬುದ್ಧಿಮತ್ತೆ ಕಂಡುಹಿಡಿದಿರುವುದು ಸರಿಯಾಗಿದೆ ಎಂದು ದೃಢಪಡಿಸಿದರು. ಅಲೆಕ್ಸ್‌ನ ಎಂಆರ್‌ ಐ(MRI)ಯಲ್ಲಿ ಬೆನ್ನುಹುರಿ ಎಲ್ಲಿ ಜೋಡಿಕೆಯಾಗಿದೆ ಎಂಬುದನ್ನು ವೈದ್ಯರು ಗುರುತಿಸಿದರು. ನಂತರ ಬಾಲಕ ಅಲೆಕ್ಸ್ ಇತ್ತೀಚೆಗೆ ಬೆನ್ನುಮೂಳೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಈಗ ಚೇತರಿಸಿಕೊಳ್ಳುತ್ತಿದ್ದಾನೆ ಎಂದು TODAY.com ವರದಿ ಮಾಡಿದೆ.
ಅಲೆಕ್ಸ್‌ನ ರೋಗನಿರ್ಣಯವನ್ನು ಗುರುತಿಸಲು ಚಾಟ್‌ಜಿಪಿಟಿ ಕರ್ಟ್ನಿಗೆ ಸಹಾಯ ಮಾಡಿದರೂ, ChatGPT ಕೆಲವು ವೈದ್ಯಕೀಯ ಸಮಸ್ಯೆಗಳನ್ನು ಪತ್ತೆಹಚ್ಚಬಹುದು – ಆದರೆ ಇದು ತಪ್ಪು ಉತ್ತರಗಳನ್ನೂ ನೀಡಬಹುದು, ಯಾಕೆಂದರೆ ಕೃತಕಬುದ್ಧಿಮತ್ತೆ ಇನ್ನೂ ಸಂಪೂರ್ಣ ದೋಷ ಮುಕ್ತವಾಗಿಲ್ಲ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಏಷ್ಯನ್ ಗೇಮ್ಸ್‌ನಿಂದ 3 ಭಾರತೀಯ ಅಥ್ಲೀಟ್‌ಗಳಿಗೆ ಚೀನಾ ನಿಷೇಧದ ನಂತರ ಕ್ರೀಡಾ ಸಚಿವರ ಪ್ರವಾಸ ರದ್ದು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement