ಅಪಘಾತದ ನಂತರ ಧಗಧಗನೆ ಹೊತ್ತಿ ಉರಿಯುತ್ತಿದ್ದ ಕಾರಿನಿಂದ ಚಾಲಕನನ್ನು ಸುರಕ್ಷಿತವಾಗಿ ಎಳೆದು ಹೊರತೆಗೆದ ಏಕಾಂಗಿ ಪೊಲೀಸ್‌ | ವೀಕ್ಷಿಸಿ

ಅಮೆರಿಕದಲ್ಲಿ ನಡೆದ ಘಟನೆಯೊಂದರಲ್ಲಿ ಉರಿಯುತ್ತಿದ್ದ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗುವ ಮೊದಲು ಪೊಲೀಸನೊಬ್ಬ ಕಾರಿನ ಚಾಲಕನನ್ನು ರಕ್ಷಿಸಿದ ಸಾಹಸದ ಕ್ಷಣ ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ. ಧಗಧಗನೆ ಹೊತ್ತಿ ಉರಿಯುತ್ತಿರುವುದನ್ನು ನೋಡಬಹುದು.
ಡ್ಯಾಶ್‌ಕ್ಯಾಮ್ ದೃಶ್ಯಗಳನ್ನು ಮಡಿಲ್ ಪೊಲೀಸ್ ಇಲಾಖೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದೆ. ಈ ಘಟನೆಯು “ಸೆಪ್ಟೆಂಬರ್ 9, 2023 ರಂದು ಶನಿವಾರ ಮುಂಜಾನೆ” ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ಜೆಂಟ್ ಜೆಟಿ ಮೂರ್ ಅವರು ಏಕಾಂಗಿಯಾಗಿ ಅಸಾಧಾರಣ ಶೌರ್ಯವನ್ನು ಪ್ರದರ್ಶಿಸಿ ಹೊತ್ತಿ ಉರಿಯುತ್ತಿರುವ ಕಾರಿನಲ್ಲಿ ಸಿಲುಕಿಕೊಂಡಿದ್ದ ಚಾಲಕನ ಪ್ರಾಣವನ್ನು ಉಳಿಸಿದ್ದಾರೆ. ಕಾರು ರಸ್ತೆ ಬಬಿಟ್ಟು ಪೊದೆಗೆ ಹೋಗಿದೆ. ಹಾಗೂ ಪೊಲೀಸ್ ಇಲಾಖೆ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಸಾರ್ಜೆಂಟ್ ಮೂರ್ ಬೆಂಕಿ ನಂದಿಸುವ ಸಾಧನದೊಂದಿಗೆ ಕಾರಿನ ಕಡೆಗೆ ಓಡಿಹೋಗಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವಾಗ ಧಗಧಗಿಸುತ್ತಿರುವ ಕಾರಿನೊಳಗೆ ಚಾಲಕ ಇನ್ನೂ ಇರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಉರಿಯುತ್ತಿರುವ ಬೆಂಕಿಯಲ್ಲೇ ಮುನ್ನುಗ್ಗಿದ ಅವರು ಒಳಗಿದ್ದ ಚಾಲಕನನ್ನು ಎಳೆದು ಹೊರ ತೆಗೆದಿದ್ದಾರೆ.
ಅವರ ಸಾಹಸಕ್ಕೆ “ಸಾರ್ಜೆಂಟ್ ಜೆಟಿ ಮೂರ್ ಬಗ್ಗೆ ನಾವು ಹೆಮ್ಮೆಪಡುತ್ತೇವೆ ಎಂದು ಹೇಳುವುದು ಕಡಿಮೆಯಾಗುತ್ತದೆ” ಎಂದು ಪೊಲೀಸ್ ಇಲಾಖೆ ಫೇಸ್‌ಬುಕ್‌ನಲ್ಲಿ ಹೇಳಿದೆ. ನಾವು ಸಾರ್ಜೆಂಟ್ ಮೂರ್ ಅವರ ಜೀವ ಉಳಿಸುವ ಕ್ರಮಗಳಿಗಾಗಿ ಶ್ಲಾಘಿಸುತ್ತೇವೆ, ಅವರು ತನ್ನನ್ನೇ ತಾನು ರಿಸ್ಕ್‌ಗೆ ಒಳಪಡಿಸಿಕೊಂಡು ಈ ಸಾಹಸ ಮಾಡಿದ್ದಾರೆ ಇಲಾಖೆಯ ಪೋಸ್ಟ್ ಹೇಳಿದೆ.

ಇಂದಿನ ಪ್ರಮುಖ ಸುದ್ದಿ :-   'ನಮಸ್ತೆ' : ಮಾನವರೂಪಿ ರೋಬೋಟ್ ಯೋಗ ಮಾಡುವ ವೀಡಿಯೊ ಹಂಚಿಕೊಂಡ ಟೆಸ್ಲಾ | ವೀಕ್ಷಿಸಿ

ಕೆಲವು ತಿಂಗಳ ಹಿಂದೆ, ಅಮೆರಿಕದ ಜಾರ್ಜಿಯಾದಲ್ಲಿ ಉರಿಯುತ್ತಿದ್ದ ಕಾರಿನಿಂದ ಮಹಿಳೆಯನ್ನು ಇನ್ನೊಬ್ಬ ಪೊಲೀಸ್ ಅಧಿಕಾರಿ ರಕ್ಷಿಸಿದ್ದರು.ಸಾರ್ಜೆಂಟ್ ಆಶ್ಲೀಗ್ ಟೇಲರ್ ಅವರು ಹೆದ್ದಾರಿ 46 ರಲ್ಲಿ ಕಾರ್ ಅಪಘಾತಕ್ಕೆ ತಕ್ಷಣವೇ ಸ್ಪಂದಿಸಿದರು ಎಂದು ಕ್ಯಾಂಡ್ಲರ್ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ. ಅಧಿಕಾರಿ ಟೇಲರ್ ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿ ಹೊತ್ತಿಕೊಂಡ ಕಾರಿನಿಂದ ಮಹಿಳೆಯನ್ನು ಹೊರತೆಗೆದು ಪ್ರಾಣ ಉಳಿಸಿದ್ದರು..

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement