ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಸನಾತನ ಧರ್ಮವನ್ನು ನಾಶ ಮಾಡಲು ಪ್ರಯತ್ನಿಸುತ್ತಿದೆ : ಪ್ರಧಾನಿ ಮೋದಿ ವಾಗ್ದಾಳಿ

ಸಾಗರ : ಪ್ರತಿಪಕ್ಷಗಳ ಮೈತ್ರಿಕೂಟದ ವಿರುದ್ಧ ಗುರುವಾರ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಇಂಡಿಯಾ ಮೈತ್ರಿಕೂಟವು ‘ಸನಾತನ ಧರ್ಮ’ಕ್ಕೆ ಹಾಗೂ ದೇಶದ ಸಂಸ್ಕೃತಿ ಮತ್ತು ನಾಗರಿಕರಿಗೆ ಅಪಾಯವನ್ನುಂಟುಮಾಡುತ್ತಿದೆ ಎಂದು ಆರೋಪಿಸಿದರು.
ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು “ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ” ಹೇಳಿಕೆಯ ನಂತರ ವಿವಾದ ಭುಗಿಲೆದ್ದಿದೆ.
ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಪಕ್ಷಗಳ ‘ಘಮಾಂಡಿಯಾ’ ಮೈತ್ರಿಯು ‘ಸನಾತನ ಧರ್ಮ’ವನ್ನು ನಾಶಮಾಡಲು ಬಯಸುತ್ತದೆ ಎಂದು ಹೇಳಿದ್ದಾರೆ.
“ಕೆಲವು ಗುಂಪುಗಳು ದೇಶ ಮತ್ತು ಸಮಾಜವನ್ನು ವಿಭಜಿಸುವ ಕೆಲಸ ಮಾಡುತ್ತಿವೆ… ಅವರು ಒಟ್ಟಾಗಿ ಇಂಡಿ (INDI) ಮೈತ್ರಿಯನ್ನು ರಚಿಸಿದ್ದಾರೆ. ಅವರು ಭಾರತದ ಸಂಸ್ಕೃತಿಯ ಮೇಲೆ ದಾಳಿ ಮಾಡಲು ಗುಪ್ತ ಕಾರ್ಯಸೂಚಿಯನ್ನು ಸಹ ನಿರ್ಧರಿಸಿದ್ದಾರೆ. INDI ಮೈತ್ರಿಯು ‘ಸನಾತನ ಧರ್ಮ ಹಾಗೂ ಸಂಸ್ಕೃತಿ ಕೊನೆಗೊಳಿಸುವ ನಿರ್ಣಯದೊಂದಿಗೆ ಅಸ್ತಿತ್ವಕ್ಕೆ ಬಂದಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಇಂಡಿಯಾ ಮೈತ್ರಿಕೂಟವು ಸನಾತನ ಸಂಸ್ಕೃತಿ-ಸಂಪ್ರದಾಯವನ್ನು ನಾಶಮಾಡುವ ಉದ್ದೇಶ ಹೊಂದಿದೆ. ಸನಾತನ ಧರ್ಮದ ನಿರ್ಮೂಲನೆ ಎಂಬ ಕೂಗು ಎಲ್ಲೆ ಮೀರಿದ್ದು, ಅದನ್ನು ವಿರೋಧಿಸದೆ ಹೋಗಬಾರದು ಎಂದರು.
ಇಂದು ಅವರು ಬಹಿರಂಗವಾಗಿ ʼಸನಾತನʼವನ್ನು ಗುರಿಯಾಗಿಸಲು ಪ್ರಾರಂಭಿಸಿದ್ದಾರೆ, ನಾಳೆ ಅವರು ನಮ್ಮ ಮೇಲೆ ದಾಳಿಯನ್ನು ಹೆಚ್ಚಿಸುತ್ತಾರೆ. ದೇಶಾದ್ಯಂತ ಇರುವ ಎಲ್ಲಾ ‘ಸನಾತನಿಗಳು’ ಮತ್ತು ನಮ್ಮ ದೇಶವನ್ನು ಪ್ರೀತಿಸುವ ಜನರು ಈ ಬಗ್ಗೆ ಎಚ್ಚರವಾಗಿರಬೇಕು. ಅಂತಹ ಜನರನ್ನು ನಾವು ತಡೆಯಬೇಕು, ”ಎಂದು ಅವರು ಹೇಳಿದರು.
ಈ ತಿಂಗಳ ಆರಂಭದಲ್ಲಿ, ಡಿಎಂಕೆ ನಾಯಕ ಮತ್ತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಮಲೇರಿಯಾ ಮತ್ತು ಡೆಂಗ್ಯೂಗೆ ಹೋಲಿಸಿದ್ದರು. ಈ ರೋಗಗಳ ವಿರುದ್ಧ ಹೋರಾಡಿದರೆ ಯಾವುದೇ ಪ್ರಯೋಜನವಿಲ್ಲವೋ, ಅದನ್ನು ಬುಡದಿಂದಲೇ ನಿರ್ಮೂಲನೆ ಮಾಡುವ ಅಗತ್ಯವಿದೆಯೋ ಹಾಗೆಯೇ ಸನಾತನ ಧರ್ಮವನ್ನು ಕೂಡ ನಿರ್ಮೂಲನೆ ಮಾಬೇಕು ಎಂಬ ಹೇಳಿಕೆ ನೀಡಿದ್ದರು. ಅಲ್ಲದೆ, ಡಿಎಂಕೆಯ ಲೋಕಸಭಾ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಎ ರಾಜಾ ಇದನ್ನು ಕುಷ್ಠರೋಗ ಮತ್ತು ಎಚ್‌ಐವಿಯಂತಹ ಕಾಯಿಲೆಗಳಿಗೆ ಹೋಲಿಸಿದ್ದಾರೆ.

ಪ್ರಮುಖ ಸುದ್ದಿ :-   ಕೊಲೆ ಯತ್ನ: ಆಂಧ್ರ ಮಾಜಿ ಸಿಎಂ ಜಗನ್ಮೋಹನ ರೆಡ್ಡಿ, ಇಬ್ಬರು ಐಪಿಎಸ್‌ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement