ʼಇಂಡಿಯಾʼ ಮೈತ್ರಿಕೂಟದಲ್ಲಿ ಭಿನ್ನಶ್ರುತಿ : ಈ ಬಗ್ಗೆ ನನಗೆ ತಿಳಿದಿಲ್ಲ, ನಾನು ಪತ್ರಕರ್ತರನ್ನು ಬೆಂಬಲಿಸ್ತೇನೆ’: 14 ಸುದ್ದಿ ನಿರೂಪಕರ ಶೋ ಬಹಿಷ್ಕಾರದ ನಂತರ ನಿತೀಶಕುಮಾರ ಪ್ರತಿಕ್ರಿಯೆ…

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರು ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬ್ಲಾಕ್‌ ಬಹಿಷ್ಕರಿಸಿದ ಪತ್ರಕರ್ತರ ಬೆಂಬಲಕ್ಕೆ ನಿಂತಿದ್ದಾರೆ, ಪ್ರತಿಯೊಬ್ಬರಿಗೂ ಅವರ ಹಕ್ಕುಗಳಿವೆ ಎಂದು ಶನಿವಾರ ಅವರು ಹೇಳಿದ್ದಾರೆ. ವಿಪಕ್ಷಗಳ ಮೈತ್ರಿಕೂಟ- ಇಂಡಿಯಾ 14 ದೂರದರ್ಶನ ಸುದ್ದಿ ನಿರೂಪಕರನ್ನು ಬಹಿಷ್ಕರಿಸುವುದಾಗಿ ಘೋಷಿಸಿದ ಎರಡೇ ದಿನಗಳಲ್ಲಿ ಅವರ ಹೇಳಿಕೆ ಬಂದಿದೆ. ನಿತೀಶಕುಮಾರ ಅವರ ಜನತಾ ದಳ (ಯುನೈಟೆಡ್)ವು 26-ಪಕ್ಷಗಳ ಮೈತ್ರಿಕೂಟ ಇಂಡಿಯಾ ಬ್ಲಾಕ್‌ನ ಭಾಗವಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶಕುಮಾರ, ಟಿವಿ ನ್ಯೂಸ್ ಆಂಕರ್‌ಗಳನ್ನು ಇಂಡಿಯಾ ಬ್ಲಾಕ್ ಬಹಿಷ್ಕರಿಸುವ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
“ನನಗೆ ಇದರ ಬಗ್ಗೆ ಯಾವುದೇ ಕಲ್ಪನೆ ಇಲ್ಲ…ನಾನು ಪತ್ರಕರ್ತರ ಬೆಂಬಲಕ್ಕೆ ಇದ್ದೇನೆ. ಎಲ್ಲರಿಗೂ ಪೂರ್ಣ ಸ್ವಾತಂತ್ರ್ಯ ಸಿಕ್ಕಾಗ ಪತ್ರಕರ್ತರು ಅವರಿಗೆ ಇಷ್ಟವಾದದ್ದನ್ನು ಬರೆಯುತ್ತಾರೆ, ಅವರನ್ನು ನಿಯಂತ್ರಿಸುತ್ತಾರೆಯೇ? ನಾನು ಅದನ್ನು ಮಾಡಿದ್ದೇನೆಯೇ? ಅವರಿಗೆ ಹಕ್ಕುಗಳಿವೆ, ನಾನು ಯಾರ ವಿರುದ್ಧವೂ ಅಲ್ಲ ಎಂದು ನಿತೀಶಕುಮಾರ ಹೇಳಿದರು.

ಇದೀಗ ಕೇಂದ್ರದಲ್ಲಿರುವವರು ಕೆಲವು ಜನರನ್ನು ನಿಯಂತ್ರಿಸಿದ್ದಾರೆ … ನಮ್ಮೊಂದಿಗೆ ಇರುವವರಿಗೆ (ಇಂಡಿಯಾ ಮೈತ್ರಿಕೂಟದ ಪಕ್ಷಗಳು) ಏನೋ ನಡೆಯುತ್ತಿದೆ ಎಂದು ಭಾವಿಸಿರಬೇಕು. ಆದರೆ, ನಾನು ಯಾರ ವಿರುದ್ಧವೂ ಅಲ್ಲ ಎಂದು ಬಿಹಾರ ಮುಖ್ಯಮಂತ್ರಿ ಹೇಳಿದರು.
ಗುರುವಾರ, ವಿಪಕ್ಷಗಳ ಮೈತ್ರಿಕೂಟ-ಇಂಡಿಯಾ 14 ದೂರದರ್ಶನ ಸುದ್ದಿ ನಿರೂಪಕರ ಪಟ್ಟಿಯನ್ನು ಬಿಡುಗಡೆ ಮಾಡಿತು, ಅವರ ಟಿವಿ ಶೋಗಳನ್ನು ಮೈತ್ರಿಕೂಟದ ಪ್ರತಿನಿಧಿಗಳು ಬಹಿಷ್ಕರಿಸುತ್ತಾರೆ ಎಂದು ಹೇಳಿದೆ.
ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, “ನೀವು ನಮ್ಮ ನಾಯಕರ ವಿರುದ್ಧ ಸುದ್ದಿ ಮಾಡುತ್ತೀರಿ, ಮೀಮ್ ಮಾಡಿ, ಅವರ ಭಾಷಣಗಳನ್ನು ತಿರುಚಿ, ಸುಳ್ಳು ಸುದ್ದಿಗಳನ್ನು ಹರಡುತ್ತೀರಿ, ಆದರೆ ಅದರ ವಿರುದ್ಧ ಹೋರಾಡಲು ನಾವು ಸಿದ್ಧರಿದ್ದೇವೆ. ಆದರೆ ನೀವು ಸಮಾಜದಲ್ಲಿ ದ್ವೇಷವನ್ನು ಹರಡಿದರೆ, ಅದು ಹಿಂಸೆಯ ಸ್ವರೂಪ ತೆಗೆದುಕೊಳ್ಳುತ್ತದೆ. ನಾವು ಅದರ ಭಾಗವಾಗಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಏಷ್ಯನ್ ಗೇಮ್ಸ್‌ನಿಂದ 3 ಭಾರತೀಯ ಅಥ್ಲೀಟ್‌ಗಳಿಗೆ ಚೀನಾ ನಿಷೇಧದ ನಂತರ ಕ್ರೀಡಾ ಸಚಿವರ ಪ್ರವಾಸ ರದ್ದು

ಡಿಜಿಟಲ್ ಅಸೋಸಿಯೇಷನ್ (NBDA) ಈ ಕ್ರಮದ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಮತ್ತು ಇದು “ಅಪಾಯಕಾರಿ ಪೂರ್ವನಿದರ್ಶನವಾಗಿದೆ ಎಂದು ಹೇಳಿದೆ. ನಿಷೇಧವು “ಪ್ರಜಾಪ್ರಭುತ್ವದ ನೀತಿಗೆ ವಿರುದ್ಧವಾಗಿದೆ” ಮತ್ತು ಇದು “ಅಸಹಿಷ್ಣುತೆ” ಯ ಸಂಕೇತವಾಗಿದೆ ಎಂದು ಅಸೋಸಿಯೇಷನ್ ಹೇಳಿದೆ.
ಏತನ್ಮಧ್ಯೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ನಿರ್ಧಾರವನ್ನು ತುರ್ತು ಪರಿಸ್ಥಿತಿಯೊಂದಿಗೆ ಹೋಲಿಸಿದೆ. ತುರ್ತು ಪರಿಸ್ಥಿತಿಯ ಸಮಯದಲ್ಲಿ ಮಾಧ್ಯಮಗಳ ಮೇಲೆ ದಬ್ಬಾಳಿಕೆ ಮಾಡಲಾಯಿತು ಮತ್ತು ಈ ‘ಘಮಂಡಿಯಾ’ ಮೈತ್ರಿ ಪಕ್ಷಗಳು ಅದೇ ಅರಾಜಕತೆ ಮತ್ತು ತುರ್ತು ಮನಸ್ಥಿತಿಯೊಂದಿಗೆ ಕೆಲಸ ಮಾಡುವುದನ್ನು ಮುಂದುವರೆಸುತ್ತಿವೆ” ಎಂದು ಬಿಜೆಪಿ ಸಂಸದ ಅನಿಲ್ ಬಲುನಿ ಹೇಳಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement