ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕೆಂಪು ಅಂಗಿ ತೊಟ್ಟು ʼಹಮಾಲಿʼಯಾದ ರಾಹುಲ್ ಗಾಂಧಿ | ವೀಕ್ಷಿಸಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ದೆಹಲಿಯ ಆನಂದ್ ವಿಹಾರ ರೈಲು ನಿಲ್ದಾಣದಲ್ಲಿ ಹಮಾಲರನ್ನು ಭೇಟಿ ಮಾಡಿದರು ಮತ್ತು ಕೆಂಪು “ಕೂಲಿ” ಶರ್ಟ್ ಮತ್ತು ಕೈಗೆ ಬ್ಯಾಡ್ಜ್ ಕಟ್ಟಿಕೊಂಡು ತಲೆಯ ಮೇಲೆ ಲಗೇಜ್ ಹೊತ್ತುಕೊಂಡು ಸಾಗಿದರು.
ವೈರಲ್ ಕ್ಲಿಪ್‌ನಲ್ಲಿ, ವಯನಾಡ್ ಸಂಸದ ತಲೆಯ ಮೇಲೆ ಟ್ರಾಲಿ ಬ್ಯಾಗ್ ಇರಿಸುತ್ತಿರುವುದು ಹಾಗೂ ಪೋರ್ಟರ್‌ಗಳು ಅವರನ್ನು ಸುತ್ತುವರೆದಿರುವುದನ್ನು ಕಾಣಬಹುದು. “ರಾಹುಲ್ ಗಾಂಧಿ ಜಿಂದಾಬಾದ್” ಎಂಬ ಘೋಷಣೆಗಳನ್ನು ಕೂಗುತ್ತಿರುವಾಗ ರಾಹುಲ್‌ ಗಾಂಧಿ ಟ್ರಾಲಿ ಚೀಲವನ್ನು ತಲೆಮೇಲೆ ಹೊತ್ತುಕೊಂಡು ಪೋರ್ಟರ್‌ಗಳ ಮಧ್ಯೆ ಸ್ವಲ್ಪದೂರ ಸಾಗುವುದನ್ನು ನೋಡಬಹುದು. ಮತ್ತೊಂದು ಕ್ಲಿಪ್‌ನಲ್ಲಿ ಕಾಂಗ್ರೆಸ್ ನಾಯಕ ಕೆಂಪು ಅಂಗಿಯನ್ನು ಧರಿಸಿ ತನ್ನ ತೋಳಿಗೆ ಬ್ಯಾಡ್ಜ್ ಕಟ್ಟಿಕೊಂಡಿರುವುದನ್ನು ತೋರಿಸುತ್ತದೆ.
ರಾಹುಲ್‌ ಗಾಂಧಿ ರೈಲು ನಿಲ್ದಾಣಕ್ಕೆ ಬಂದಿದ್ದು, ಅಲ್ಲಿನ ಹಮಾಲರು ಮತ್ತು ಕಾರ್ಮಿಕರಿಗೆ ಆಗುತ್ತಿರುವ ತೊಂದರೆ ಬಗ್ಗೆ ಆಲಿಸಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

ಗುರುವಾರ ದೆಹಲಿಯ ಆನಂದ್ ವಿಹಾರ್ ರೈಲು ನಿಲ್ದಾಣದಲ್ಲಿ ಜನನಾಯಕ ರಾಹುಲ್ ಗಾಂಧಿ ಹಮಾಲರನ್ನು ಭೇಟಿಯಾದರು. ಅವರ ಮಾತುಗಳನ್ನು ಆಲಿಸಿದರು. ಭಾರತ್ ಜೋಡೋ ಪ್ರಯಾಣ ಮುಂದುವರಿಯುತ್ತದೆ” ಎಂದು ಪಕ್ಷವು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿವಿ ಅವರು 1983 ರ ಚಲನಚಿತ್ರ ಮಜ್ದೂರ್‌ನ “ಹಮ್ ಮೆಹನತ್ಕಾಶ್ ಈಸ್ ದುನಿಯಾ ಸೇ” ಹಾಡಿನೊಂದಿಗೆ ರೈಲ್ವೆ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಬ್ಯಾಗ್‌ ಹೊತ್ತುಕೊಂಡಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಯುವ ನಾಯಕ ಪೋಸ್ಟ್‌ಗೆ ಾವರು “ಜನರ ಹೀರೋ” ಎಂದು ಶೀರ್ಷಿಕೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಒಲ್ಲೆ ಎಂದಿದ್ದಕ್ಕೆ ಸೇಡು : ತನ್ನ ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಟಿವಿ ನಿರೂಪಕನನ್ನು ಅಪಹರಿಸಿದ ಮಹಿಳಾ ಉದ್ಯಮಿ...!

ಈ ಭೇಟಿಯು ಕಾಂಗ್ರೆಸ್ ಕುಡಿಗಳ ಸಾರ್ವಜನಿಕ ಸಂಪರ್ಕದ ಪ್ರಯತ್ನಗಳಲ್ಲಿ ಇತ್ತೀಚಿನದು. ಈ ಹಿಂದೆ, ರಾಹುಲ್‌ ಗಾಂಧಿ ಬೆಂಗಳೂರಿನಲ್ಲಿ ಡೆಲಿವರಿ ಸಿಬ್ಬಂದಿಯನ್ನು ಭೇಟಿಯಾಗಿದ್ದರು ಮತ್ತು ನಂತರ ಅವರ ಸ್ಕೂಟರ್‌ನಲ್ಲಿ ಸವಾರಿ ಮಾಡಿದ್ದರು. ಮತ್ತೊಂದು ಭೇಟಿಯಲ್ಲಿ ಅವರು ದೆಹಲಿಯ ಆಜಾದ್‌ಪುರ ಮಂಡಿಗೆ ಭೇಟಿ ನೀಡಿ ಮಾರಾಟಗಾರರು ಮತ್ತು ಕಾರ್ಮಿಕರೊಂದಿಗೆ ಮಾತನಾಡಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement