ಅದ್ಭುತ ಕ್ಯಾಚ್‌…: ಎರಡನೇ ಸ್ಲಿಪ್‌ನಲ್ಲಿ ರೀ ಬೌಂಡ್‌ ಆದ ಅಸಾಧಾರಣವಾದ ಕ್ಯಾಚ್‌ ಅನ್ನು ಒಂದೇ ಕೈಯಲ್ಲಿ ಹಿಡಿದ ಆಟಗಾರ | ವೀಕ್ಷಿಸಿ

ಈಗ ಬ್ಯಾಟಿಂಗ್ ಹಾಗೂ ಬೌಲಿಂಗ್‌ ನಷ್ಟೇ ಫೀಲ್ಡಿಂಗ್‌ಗೂ ಮಹತ್ವ ನೀಡುತ್ತಾರೆ. ಹೀಗಾಗಿ ಈಗ ಆಟಗಾರರು ಉತ್ತಮ ಫೀಲ್ಡಿಂಗ್‌ಗಾಗಿ ತಮ್ಮ ಫಿಟ್‌ನೆಸ್‌ಗೆ ಹೆಚ್ಚಿನ ಗಮನ ನೀಡುತ್ತಾರೆ. ಅತ್ಯುತ್ತಮ ಕ್ಯಾಚ್‌ ಗಳನ್ನು ತೆಗೆದುಕೊಳ್ಳುತ್ತಾರೆ. ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಈಗ ಅದ್ಭುತ ಕ್ಯಾಚ್ ಹಿಡಿದ ದೃಶ್ಯದ ವೀಡಿಯೊವೊಂದು ವೈರಲ್‌ ಆಗಿದೆ. ವಿಶೇಷವೆಂದರೆ ಈ ಕ್ಯಾಚ್ ಹಿಡಿದವರು ಒಬ್ಬರಲ್ಲ ಇಬ್ಬರು…!
ಕ್ಯಾಚ್‌ನ ವೀಡಿಯೊವನ್ನು ಕೌಂಟಿ ಚಾಂಪಿಯನ್‌ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದೆ. ಸರ್ರೆ ಮತ್ತು ನಾರ್ಥಾಂಪ್ಟನ್‌ಶೈರ್ ನಡೆದ ಪಂದ್ಯದಲ್ಲಿ ಈ ಅದ್ಭುತ ಕ್ಯಾಚ್‌ ಹಿಡಿಯಲಾಗಿದೆ.

ಬೌಲರ್ ಎಸೆದ ಎಸೆತವನ್ನು ಬ್ಯಾಟ್ಸ್‌ ಮನ್‌ ಡಿಫೆನ್ಸ್‌ ಮಾಡಲು ಹೋದಾಗ ಚೆಂಡು ಬ್ಯಾಟ್‌ನ ಹೊರ ಅಂಚಿಗೆ ಮುತ್ತಿಟ್ಟು ಸ್ಲಿಪ್‌ ಫೀಲ್ಡರ್‌ ಕಡೆಗೆ ಹೋಗುತ್ತದೆ. ಮೊದಲ ಸ್ಲಿಪ್ ನಲ್ಲಿ ಇದ್ದ ಕ್ಯಾಚ್‌ ಅನ್ನು ಎರಡನೇ ಸ್ಲಿಪ್ ಫೀಲ್ಡರ್ ಡೈವಿಂಗ್ ಮೂಲಕ ಹಿಡಿಯಲು ಪ್ರಯತ್ನಿಸುತ್ತಾರೆ. ಆದರೆ ಡೈವ್ ಮಾಡಿದಾಗ ಚೆಂಡು ಫೀಲ್ಡರ್ ಕೈಯಿಂದ ಹಾರುತ್ತದೆ. ಅದು ನೆಲಕ್ಕೆ ಅಪ್ಪಳಿಸುತ್ತದೆ ಎಂದು ಭಾವಿಸಿದಾಗ ವಿಕೆಟ್ ಕೀಪರ್ ಅದನ್ನು ಅದ್ಭುತವಾಗಿ ಹಿಡಿಯುತ್ತಾರೆ. ಈ ಕ್ಯಾಚ್ ನೋಡಿದ ನಂತರ ಬ್ಯಾಟ್ಸ್‌ಮನ್ ಕೂಡ ಬೆರಗಾಗುತ್ತಾರೆ.
ಕೌಂಟಿ ಚಾಂಪಿಯನ್‌ಶಿಪ್‌ನ ಅಂತಿಮ ಸುತ್ತಿನಲ್ಲಿ ನಾರ್ಥಾಂಪ್ಟನ್‌ಶೈರ್ -ಸರ್ರೆ ಪಂದ್ಯದಲ್ಲಿ ಸರ್ರೆ ಆತಿಥ್ಯ ವಹಿಸಿದೆ. ನಾರ್ಥಾಂಪ್ಟನ್‌ಶೈರ್ ತಂಡ 151-6ರಲ್ಲಿದ್ದಾಗ ಕರುಣ್ ನಾಯರ್ ಮತ್ತು ಜಸ್ಟಿನ್ ಬ್ರಾಡ್ ಇನ್ನಿಂಗ್ಸ್ ಅನ್ನು ಮರುನಿರ್ಮಾಣ ಮಾಡಿದ್ದರು. ಅವರು 42 ರನ್‌ಗಳನ್ನು ಸೇರಿಸಿದ್ದರು.

ಪ್ರಮುಖ ಸುದ್ದಿ :-   ಬಾಂಗ್ಲಾದೇಶದ ಕಾಳಿ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಕಾಣಿಕೆ ನೀಡಿದ್ದ ಕಿರೀಟ ಕಳವು

ಈ ವೇಳೆ ಬ್ರಾಡ್ ಅವರು ಟಾಮ್ ಲಾವ್ಸ್ ಬೌಲಿಂಗ್‌ ನಲ್ಲಿ ಬ್ಯಾಟ್‌ ಮಾಡುವಾಗ ಚೆಂಡು ಸ್ಲಿಪ್‌ ಕಡೆಗೆ ಎಡ್ಜ್‌ ಆಯಿತು. ಆಗ ಎರಡನೇ ಸ್ಲಿಪ್‌ನಲ್ಲಿದ್ದ ಓವರ್‌ಟನ್ ಚೆಂಡನ್ನು ಹಿಡಿಯಲು ಎಡಗೈಯನ್ನು ಚಾಚಿ ಡೈವ್‌ ಹೊಡೆದರು. ಆದರೆ ಅದು ಅವರ ಕೈಯಿಂದ ಜಾರಿತು. ಆಗ ಅದು ನೆಕ್ಕೆ ಬೀಳುವ ಮೊದಲು ವಿಕೆಟ್‌ ಕೀಪರ್‌ ಪೆರ್ರಿ ಅದನ್ನು ಹಿಡಿಯಲು ಯಶಸ್ವಿಯಾದರು.
ಸರ್ರೆ ಮತ್ತು ನಾರ್ಥಾಂಪ್ಟನ್‌ಶೈರ್ ನಡುವಿನ ಈ ಪಂದ್ಯದಲ್ಲಿ, ಟಾಸ್ ಗೆದ್ದ ಸರ್ರೆ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ನಾರ್ಥಾಂಪ್ಟನ್‌ಶೈರ್ ಪಂದ್ಯದ ಎರಡನೇ ದಿನವೂ ಮೊದಲ ಇನಿಂಗ್ಸ್ ಆಡುತ್ತಿದೆ. ಈ ಪಂದ್ಯದಲ್ಲಿ ಭಾರತೀಯ ಮೂಲದ ಸಾಯಿ ಸುದರ್ಶನ್ ಸರ್ರೆ ಪರ ಆಡುತ್ತಿದ್ದಾರೆ.
ಹಾಗೂ ಭಾರತದ ಬ್ಯಾಟರ್‌ ಕರುಣ ನಾಯರ್ ನಾರ್ಥಾಂಪ್ಟನ್ ಶೈರ್ ಪರ ಆಡುತ್ತಿದ್ದಾರೆ.

ಪ್ರಮುಖ ಸುದ್ದಿ :-   ದಕ್ಷಿಣ ಕೊರಿಯಾದ ಬರಹಗಾರ್ತಿ ಹ್ಯಾನ್‌ ಕಾಂಗ್‌ ಗೆ ಈ ವರ್ಷದ ನೊಬೆಲ್ ​ಸಾಹಿತ್ಯ ಪುರಸ್ಕಾರ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement