ಏಷ್ಯನ್ ಗೇಮ್ಸ್ 2023 ​; 10 ಮೀಟರ್ ಏರ್ ರೈಫಲ್ ನಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದ ಭಾರತದ ಶೂಟರ್​ ತಂಡ

ನವದೆಹಲಿ: ಭಾರತದ ಪುರುಷರ 10 ಮೀಟರ್ ಏರ್ ರೈಫಲ್ ತಂಡವು ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರಲ್ಲಿ ಗೆಲ್ಲುವ ಮೂಲಕ ವಿಶ್ವ ದಾಖಲೆ ಮುರಿಯುವ ಮೂಲಕ ರಾಷ್ಟ್ರಕ್ಕೆ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ.
ರುದ್ರಾಂಕ್ಷಾ ಬಾಳಾಸಾಹೇಬ ಪಾಟೀಲ, ದಿವ್ಯಾಂಶ ಸಿಂಗ್ ಪನ್ವಾರ್ ಮತ್ತು ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಅವರನ್ನು ಒಳಗೊಂಡ ತಂಡವು ಭಾರತದ ಮೊದಲ ಚಿನ್ನದ ಪದಕವನ್ನು ಗೆದ್ದುಕೊಂಡಿತು ಮಾತ್ರವಲ್ಲದೆ ವಿಶ್ವದಾಖಲೆಯನ್ನು ಮುರಿದಿದೆ.
ಈ ಮೂವರು ವೈಯಕ್ತಿಕ ಅರ್ಹತಾ ಸುತ್ತಿನಲ್ಲಿ ಒಟ್ಟು 1893.7 ಅಂಕಗಳನ್ನು ಗಳಿಸಿದರು. ಬಾಕು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೀನಾ ನಿರ್ಮಿಸಿದ ಹಿಂದಿನ ವಿಶ್ವ ದಾಖಲೆಯನ್ನು ಇವರು ಮುರಿದಿದ್ದಾರೆ. ದಕ್ಷಿಣ ಕೊರಿಯಾ 1890.1 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಚೀನಾ ಒಟ್ಟು 1888.2 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆಯಿತು.

ಅರ್ಹತೆಯಲ್ಲಿ ಮೂರನೇ ಸ್ಥಾನ ಪಡೆದಿದ್ದ ರುದ್ರಾಂಕ್ಷಾ ಅವರು ತಂಡಕ್ಕೆ 631.6 ಅಂಕ ಗಳಿಸಿದರು. ಭಾರತದ ಪರ ಐಶ್ವರಿ 631.6 ಅಂಕ ಗಳಿಸಿದರೆ, ದಿವ್ಯಾಂಶ ಅವರು 629.6 ಅಂಕ ಗಳಿಸಿದರು.
ಟೀಮ್ ಈವೆಂಟ್‌ನಲ್ಲಿ ಭಾರತವು ಚಿನ್ನದ ಪದಕವನ್ನು ಗೆದ್ದಿದ್ದು ಮಾತ್ರವಲ್ಲದೆ, ಎಲ್ಲಾ ಮೂವರು ಶೂಟರ್‌ಗಳು 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಟಾಪ್ -8ಕ್ಕೆ ಅರ್ಹತೆ ಪಡೆದರು. ಆದಾಗ್ಯೂ, ಏಷ್ಯನ್ ಗೇಮ್ಸ್ ನಿಯಮಗಳ ಪ್ರಕಾರ, ಪ್ರತಿ ದೇಶದಿಂದ ಇಬ್ಬರು ಮಾತ್ರ ಫೈನಲ್‌ಗೆ ಅರ್ಹತೆ ಪಡೆಯಬಹುದು, ಇದರಿಂದಾಗಿ ರುದ್ರಂಕ್ಷಾ ಮತ್ತು ಐಶ್ವರಿ ಫೈನಲ್‌ಗೆ ಮುನ್ನಡೆದರು, ಆದರೆ ದಿವ್ಯಾಂಶ ಅವಕಾಶ ವಂಚಿತರಾದರು.
2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಈ ಗೆಲುವು ವಿಶೇಷವಾಗಿ ಮಹತ್ವದ್ದಾಗಿದೆ. ಭಾರತವು ಮೊದಲ ದಿನವೇ ಮೂರು ಬೆಳ್ಳಿ ಪದಕಗಳು ಮತ್ತು ಎರಡು ಕಂಚಿನ ಪದಕಗಳೊಂದಿಗೆ ಐದು ಪದಕಗಳನ್ನು ಗೆದ್ದಿತ್ತು.
ಆಶಿ ಚೌಕ್ಸೆ, ಮೆಹುಲಿ ಘೋಷ್ ಮತ್ತು ರಮಿತಾ ಜಿಂದಾಲ್ ಒಳಗೊಂಡ ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡವು 2023 ರ ಹ್ಯಾಂಗ್‌ಝೌನಲ್ಲಿ ನಡೆಯುತಿರುವ ಏಷ್ಯನ್‌ ಗೇಮ್ಸ್‌ ನಲ್ಲಿ ಶೂಟಿಂಗ್‌ನಲ್ಲಿ ಬೆಳ್ಳಿ ಪದಕದ ಮೂಲಕ ಭಾರತಕ್ಕೆ ಮೊದಲ ಪದಕವನ್ನು ತಂದುಕೊಟ್ಟರು.

ಪ್ರಮುಖ ಸುದ್ದಿ :-   ಎನ್‌ಕೌಂಟರ್‌ನಲ್ಲಿ 12 ಮಾವೋವಾದಿಗಳನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement