ಏಷ್ಯನ್ ಗೇಮ್ಸ್: 41 ವರ್ಷಗಳ ಬಳಿಕ ಕುದುರೆ ಸವಾರಿಯಲ್ಲಿ ಚಿನ್ನ ಗೆದ್ದ ಭಾರತ

ಹ್ಯಾಂಗ್‌ ಝೂ : ಚೀನಾದ ಹ್ಯಾಂಗ್‌ ಝೂನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ -2023 ಕ್ರೀಡಾಕೂಟದಲ್ಲಿ ಮಂಗಳವಾರ ಭಾರತದ ತಂಡ ಕುದುರೆ ಸವಾರಿ (ಡೆಸ್ಸೇಜ್‌ ಟೀಮ್‌ ಇವೆಂಟ್) ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ. ‌ ಭಾರತ 41 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಚಿನ್ನದ ಪದಕ ಪಡೆದಿದೆ.
ಕುದುರೆ ಸವಾರಿ ಈವೆಂಟ್‌ನಲ್ಲಿ, ತಂಡವು ಅಗ್ರಸ್ಥಾನಕ್ಕೇರುವ ಮೂಲಕ ಚಿನ್ನ ಪದಕವನ್ನು ಗೆದ್ದುಕೊಂಡಿದೆ. ಈ ಕ್ರೀಡೆಯಲ್ಲಿ 1982 ರ ಬಳಿಕ ಭಾರತಕ್ಕೆ ಸಿಕ್ಕ ಮೊದಲ ಚಿನ್ನದ ಪದಕವಾಗಿದೆ. ಸುದೀಪ್ತಿ ಹಜೇಲಾ, ಹೃದಯ್ ವಿಪುಲ್ ಛೇಡಾ, ಅನುಷ್ ಗರ್ವಾಲಾ ಮತ್ತು ದಿವ್ಯಕೃತಿ ಸಿಂಗ್ ಅವರ ಭಾರತ ತಂಡವು ಕುದುರೆ ಸವಾರಿಯಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದೆ.
ಕುದುರೆ ಸವಾರಿಯಲ್ಲಿ ಭಾರತ ತಂಡವು ಒಟ್ಟು 209.205 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಚಿನ್ನ ಪಡದರೆ, ಚೀನಾ 204.882ರೊಂದಿಗೆ ಬೆಳ್ಳಿ ಮತ್ತು ಹಾಂಗ್ ಕಾಂಗ್ (ಚೀನಾ) 204.852 ರೊಂದಿಗೆ 3ನೇ ಸ್ಥಾನ ಪಡೆದು ಕಂಚಿನ ಪದಕ ಪಡೆದುಕೊಂಡಿದೆ. ಭಾರತ ಮೂರು ಚಿನ್ನದ ಪದಕ ಗೆದ್ದಂತಾಯಿತು. ಕ್ರೀಡಾಕೂಟದಲ್ಲಿ ಒಟ್ಟಾರೆ ಇದು 13ನೇ ಪದಕವಾಗಿದೆ.

ಪ್ರಮುಖ ಸುದ್ದಿ :-   ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ರೇವಂತ್‌ ರೆಡ್ಡಿ ಆಯ್ಕೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement