ಭಾರತ-ಕೆನಡಾ ಬಾಂಧವ್ಯ ಹಾಳು ಮಾಡಲು ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಚು ರೂಪಿಸಿತ್ತು ಪಾಕಿಸ್ತಾನದ ಐಎಸ್‌ಐ : ವರದಿ

ನವದೆಹಲಿ : ಭಾರತ-ಕೆನಡಾ ನಡುವಿನ ಸಂಬಂಧವನ್ನು ಹದಗೆಡಿಸಲು ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯನ್ನು ಯೋಜಿಸಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.
ನಿಜ್ಜರನ್ನು ಕೊಲ್ಲಲು ಐಎಸ್‌ಐ ಕ್ರಿಮಿನಲ್‌ಗಳನ್ನು ನೇಮಿಸಿಕೊಂಡಿತ್ತು ಮತ್ತು ಕಳೆದ ಎರಡು ವರ್ಷಗಳಲ್ಲಿ ಕೆನಡಾಕ್ಕೆ ಆಗಮಿಸಿದ ಗ್ಯಾಂಗ್‌ಸ್ಟರ್‌ಗಳನ್ನು ಸಂಪೂರ್ಣವಾಗಿ ಬೆಂಬಲಿಸುವಂತೆ ನಿಜ್ಜರ್‌ ಮೇಲೆ ಒತ್ತಡ ಹೇರಿತ್ತು, ಆದರೆ ಆತ ಮುಖ್ಯವಾಗಿ ಮಾಜಿ ಖಲಿಸ್ತಾನಿ ನಾಯಕರನ್ನು ಬೆಂಬಲಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ ಎಂದು ವರದಿ ಹೇಳಿದೆ. ನಿಜ್ಜರ್ ಹತ್ಯೆಯ ನಂತರ, ಐಎಸ್‌ಐ (ISI) ಈಗ ಆತನ ಬದಲಿಗಾಗಿ ಮತ್ತೊಬ್ಬನನ್ನು ಹುಡುಕುತ್ತಿದೆ ಮತ್ತು ಕೆನಡಾದಲ್ಲಿ ಖಲಿಸ್ತಾನ್ ಪರ ಭಯೋತ್ಪಾದಕರನ್ನು ಒಟ್ಟುಗೂಡಿಸಲು ತಯಾರಿ ನಡೆಸುತ್ತಿದೆ ಎಂದು ಈ ಮೂಲಗಳು ನಂಬುತ್ತವೆ.

ಬ್ರಿಟಿಷ್ ಕೊಲಂಬಿಯಾದಲ್ಲಿ ಜೂನ್ 18 ರಂದು ತನ್ನ ದೇಶದ ನೆಲದಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ “ಸಂಭಾವ್ಯ” ಒಳಗೊಳ್ಳುವಿಕೆಯಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಇತ್ತೀಚೆಗೆ ಆರೋಪಿಸಿದ ನಂತರ ಭಾರತ ಹಾಗೂ ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ತಲೆದೋರಿದೆ. ನಂತರ, ಕೆನಡಾದ ಆರೋಪವನ್ನು “ಅಸಂಬದ್ಧ” ಮತ್ತು “ಪ್ರಚೋದಿತ” ಎಂದು ಭಾರತವು ಸಾರಾಸಗಟಾಗಿ ತಿರಸ್ಕರಿಸಿತು.
ಭಾರತವು ಕೆನಡಾದ ನಾಗರಿಕರಿಗೆ ವೀಸಾಗಳನ್ನು ನೀಡುವುದನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿತು ಮತ್ತು ದೇಶದಲ್ಲಿ ತನ್ನ ರಾಜತಾಂತ್ರಿಕ ಸಿಬ್ಬಂದಿ ಉಪಸ್ಥಿತಿಯನ್ನು ಕಡಿಮೆ ಮಾಡಲು ಕೆನಡಾಕ್ಕೆ ಸೂಚಿಸಿತು.

ಪ್ರಮುಖ ಸುದ್ದಿ :-   ಮಹಾಕುಂಭ 2025 | ಜ.16 ರಂದು 10 ದೇಶಗಳ 21 ಪ್ರತಿನಿಧಿಗಳಿಂದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ

ಮಂಗಳವಾರ, ಭಾರತವು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ ಭಯೋತ್ಪಾದನೆ, ಉಗ್ರವಾದ ಮತ್ತು ಹಿಂಸಾಚಾರಕ್ಕೆ ಪ್ರತಿಕ್ರಿಯೆಗಳನ್ನು ನಿರ್ಧರಿಸಲು “ರಾಜಕೀಯ ಅನುಕೂಲಕ್ಕೆ” ತಕ್ಕಂತೆ ಅವಕಾಶ ನೀಡದಂತೆ ಕೇಳಿಕೊಂಡಿದೆ.
78ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ ಅವರು, ಪ್ರಾದೇಶಿಕ ಸಮಗ್ರತೆಗೆ ಗೌರವ ಮತ್ತು ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವುದು “ಚೆರ್ರಿ ಪಿಕಿಂಗ್‌” ಆಗುವುದಿಲ್ಲ ಎಂದು ಹೇಳಿದರು, ಏಕೆಂದರೆ ಕೆಲವು ರಾಷ್ಟ್ರಗಳು ಕಾರ್ಯಸೂಚಿಯನ್ನು ಹೊಂದಿಸುವ ಮತ್ತು ಇತರರನ್ನು ತಾವು ಹೇಳಿದ ದಾರಿಯಲ್ಲಿ ನಿರೀಕ್ಷಿಸುವ ದಿನಗಳು ಮುಗಿದಿದೆ ಎಂದು ಅವರು ಪ್ರತಿಪಾದಿಸಿದರು.

ಭಯೋತ್ಪಾದನೆ, ಉಗ್ರವಾದ ಮತ್ತು ಹಿಂಸಾಚಾರಕ್ಕೆ ಪ್ರತಿಕ್ರಿಯೆಯನ್ನು ನಿರ್ಧರಿಸಲು “ರಾಜಕೀಯ ಅನುಕೂಲತೆ” ಯನ್ನು ಅನುಮತಿಸಬೇಡಿ ಎಂದು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳನ್ನು ಒತ್ತಾಯಿಸಿದ ಜೈಶಂಕರ, ಟ್ರುಡೊ ಬಗ್ಗೆ ವ್ಯಂಗ್ಯವಾಡಿದರು ಮತ್ತು ವಿಶ್ವ ಕ್ರಮದಲ್ಲಿ ಭಾರತದ ಹೆಚ್ಚುತ್ತಿರುವ ಪ್ರಾಮುಖ್ಯತೆಯ ಬಗ್ಗೆ ಎಲ್ಲರಿಗೂ ನೆನಪಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ...| ಹೆಲ್ಮೆಟ್ ಇಲ್ಲದ್ದಕ್ಕೆ ಪೆಟ್ರೋಲ್ ಕೊಡಲ್ಲ ಎಂದ ಪೆಟ್ರೋಲ್‌ ಪಂಪ್‌ ಸಿಬ್ಬಂದಿ ; ಪಂಪ್‌ ಸಿಬ್ಬಂದಿಗೆ ʼಕತ್ತಲುʼ ಶಿಕ್ಷೆ ನೀಡಿದ ವ್ಯಕ್ತಿ...!

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement