ನೇಪಾಳ ತಂಡದ ಕ್ರಿಕೆಟ್ ಆಟಗಾರರು ಚೀನಾದಲ್ಲಿ T20 ಕ್ರಿಕೆಟ್‌ನಲ್ಲಿ ಐದು ದಾಖಲೆಗಳನ್ನು ಉಡೀಸ್ ಮಾಡಿದ್ದಾರೆ. ನೇಪಾಳ ಬ್ಯಾಟ್ಸ್‌ಮನ್‌ಗಳು ಬುಧವಾರ ನಡೆದ ಏಷ್ಯನ್ ಗೇಮ್ಸ್ 2023 ರಲ್ಲಿ ನಡೆದ ಮಂಗೋಲಿಯಾ ವಿರುದ್ಧದ T20 ಕ್ರಿಕೆಟ್ ಪಂದ್ಯಲ್ಲಿ 300 ಪ್ಲಸ್ ಮೊತ್ತವನ್ನು ಗಳಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, ಅಲ್ಲದೆ, ಮೂರು ವಿಶ್ವ ದಾಖಲೆಗಳನ್ನು ಮುರಿದಿದ್ದಾರೆ. ನೇಪಾಳ ಕ್ರಿಕೆಟ್ ತಂಡವು T20 ಫಾರ್ಮ್ಯಾಟ್‌ನ ಇತಿಹಾಸದಲ್ಲಿ ವೇಗದ ಐವತ್ತು ಮತ್ತು ವೇಗದ ಶತಕವನ್ನು ದಾಖಲಿಸಿದೆ.
ಈ ಪಂದ್ಯದಲ್ಲಿ ನೇಪಾಳ ತನ್ನ 20 ಓವರ್‌ಗಳಲ್ಲಿ 314/3 ಸ್ಕೋರ್ ಮಾಡಿತು. ಇದು 2019 ರಲ್ಲಿ ಐರ್ಲೆಂಡ್ ವಿರುದ್ಧ ಅಫ್ಘಾನಿಸ್ತಾನದ 278/3 ಮಾಡಿದ್ದ T20I ಗಳಲ್ಲಿ ದಾಖಲೆಯನ್ನು ಧೂಳೀಪಟ ಮಾಡಿತು. ನೇಪಾಳದ ಆಟಗಾರರು ತಮ್ಮ ಇನ್ನಿಂಗ್ಸ್‌ನಲ್ಲಿ ಒಟ್ಟು 26 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ, ಇದು ಒಂದು ಇನ್ನಿಂಗ್ಸ್‌ನಲ್ಲಿ ಯಾವುದೇ ತಂಡ ಈವರೆಗೆ ಸಿಡಿಸಿದ ಗರಿಷ್ಠ ಸಿಕ್ಸರ್‌ಗಳಾಗಿದೆ. ನೇಪಾಳ ತಂಡವು 2019 ರಲ್ಲಿ ಅಫ್ಘಾನಿಸ್ತಾನದ 22 ಸಿಕ್ಸರ್‌ಗಳ ದಾಖಲೆಯನ್ನು ಹಿಂದಿಕ್ಕಿದೆ.
19 ವರ್ಷದ ಎಡಗೈ ಬ್ಯಾಟರ್ ಕುಶಾಲ್ ಮಲ್ಲಾ 34 ಎಸೆತಗಳಲ್ಲಿ ಅತಿವೇಗದ ಟಿ20 ಶತಕ ಬಾರಿಸಿ, ಡೇವಿಡ್ ಮಿಲ್ಲರ್ ಮತ್ತು ರೋಹಿತ್ ಶರ್ಮಾ ಅವರ ಜಂಟಿ ಹಿಂದಿನ ದಾಖಲೆಯನ್ನು (35 ಎಸೆತಗಳು) ಮುರಿದಿದ್ದಾರೆ. ಕುಶಾಲ್ ಮಲ್ಲಾ 50 ಎಸೆತಗಳಲ್ಲಿ ಅಜೇಯ 137 ರನ್ ಗಳಿಸಿದ್ದಾರೆ.
ಇದೇ ಪಂದ್ಯದಲ್ಲಿ ನೇಪಾಳದ ದೀಪೇಂದ್ರ ಸಿಂಗ್ ಐರಿ ಅವರು ಯುವರಾಜ್ ಸಿಂಗ್ ಅವರ 12 ಎಸೆತಗಳ ವೇಗದ T20 ಅರ್ಧಶತಕ ದಾಖಲೆಯನ್ನು ಮುರಿದು ಇತಿಹಾಸವನ್ನೇ ನಿರ್ಮಿಸಿದ್ದಾರೆ. ಮಂಗೋಲಿಯಾ ವಿರುದ್ಧ ಆಡಿದ ದೀಪೇಂದ್ರಸಿಂಗ್ ಐರಿ ಅವರು ಕೇವಲ ಒಂಬತ್ತು ಎಸೆತಗಳಲ್ಲಿ ಎಂಟು ಸಿಕ್ಸರ್‌ಗಳನ್ನು ಹೊಡೆದು ಅರ್ಧಶತಕ ತಲುಪುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಇದು ಯುವರಾಜ್ ಸಿಂಗ್ ಅವರ 16 ವರ್ಷಗಳ ಹಳೆಯ ದಾಖಲೆಯನ್ನು ಪುಡಿ ಮಾಡಿತು.
ಮೊದಲ ಎಂಟು ಓವರ್‌ಗಳಲ್ಲಿ ಆರಂಭಿಕರಾದ ಕುಶಾಲ್ ಭುರ್ಟೆಲ್ (19) ಮತ್ತು ಆಸಿಫ್ ಶೇಖ್ (16) ಅವರನ್ನು ಕಳೆದುಕೊಂಡ ನಂತರ, ಕುಶಾಲ್ ಮಲ್ಲಾ ಮತ್ತು ನಾಯಕ ರೋಹಿತ್ ಪೌಡೆಲ್ 65 ಎಸೆತಗಳಲ್ಲಿ 193 ರನ್‌ಗಳನ್ನು ದೋಚುವ ಮೂಲಕ ನೇಪಾಳ ತನ್ನ ಗರಿಷ್ಠ ಪುರುಷರ T20I ತಂಡದ ಮೊತ್ತವನ್ನು ತಲುಪಲು ಸಹಾಯ ಮಾಡಿದರು. ಮಲ್ಲಾ 50 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ 12 ಸಿಕ್ಸರ್‌ಗಳೊಂದಿಗೆ ಮುರಿಯದ 137 ರನ್ ಗಳಿಸಿದರೆ, ಪೌಡೆಲ್ 21 ಎಸೆತಗಳಲ್ಲಿ 61 ರನ್ ಗಳಿಸಿದರು (2×4, 6×6). ದೀಪೇಂದ್ರ ಸಿಂಗ್ ಐರಿ 10 ಎಸೆತಗಳಲ್ಲಿ ಎಂಟು ಸಿಕ್ಸರ್‌ಗಳನ್ನು ಹೊಡೆದು 52 ರನ್ ಗಳಿಸಿದರು.
ಎಕ್ಸ್‌ಟ್ರಾಗಳು 20 ವೈಡ್‌ಗಳು, 7 ನೋ-ಬಾಲ್‌ಗಳು ಮತ್ತು 2 ಬೈಗಳೊಂದಿಗೆ 29 ರನ್ ಗಳಿಸಿದರು.
ಇದಕ್ಕೆ ಉತ್ತರವಾಗಿ ಮಂಗೋಲಿಯಾ 15 ಓವರ್‌ಗಳಲ್ಲಿ 41 ರನ್‌ಗಳಿಗೆ ಆಲೌಟ್ ಆಯಿತು. ಒಬ್ಬ ಮಂಗೋಲಿಯನ್ ಬ್ಯಾಟರ್ ಮಾತ್ರ ಎರಡಂಕಿಯ ಸ್ಕೋರ್ ತಲುಪಿದರು. ಇನ್ನಿಂಗ್ಸ್ ಐದು ಡಕ್‌ಗಳಿಗೆ ಸಾಕ್ಷಿಯಾಯಿತು.
ದೀಪೇಂದ್ರ ಸಿಂಗ್ ಐರಿ ಯಾರು?
ನೇಪಾಳದ ಉದಯೋನ್ಮುಖ ತಾರೆಗಳಲ್ಲಿ ಒಬ್ಬರಾದ ದೀಪೇಂದ್ರ ಅವರು 2016 ರ U-19 ವಿಶ್ವಕಪ್‌ನಲ್ಲಿ ಆಡಿದ ನಂತರ ಬೆಳಕಿಗೆ ಬಂದರು. ಕೆಳ ಕ್ರಮಾಂಕದ ಹಿಟ್ಟರ್ ಆಗಿರುವ ದೀಪೇಂದ್ರ ಐರಿ ಅವರು, ನೇಪಾಳಕ್ಕಾಗಿ 44 T20I ಪಂದ್ಯಗಳನ್ನು ಆಡಿದ್ದು 132.55 ಸ್ಟ್ರೈಕ್-ರೇಟ್ ನಲ್ಲಿ 1103 ರನ್ ಗಳಿಸಿದ್ದಾರೆ. ಅವರು 17.95 ಸರಾಸರಿಯಲ್ಲಿ 21 ವಿಕೆಟ್‌ಗಳನ್ನು ಪಡೆದಿದ್ದಾರೆ.
ಕುಶಾಲ್ ಮಲ್ಲಾ ಯಾರು?
ಕುಶಾಲ್ ಮಲ್ಲಾ ಅವರು 15 ವರ್ಷ ವಯಸ್ಸಿನವರಾಗಿದ್ದಾಗ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದು, ಏಕದಿನ ಅಂತಾರಾಷ್ಟ್ರೀಯ ಅರ್ಧಶತಕವನ್ನು ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಆಗಿದ್ದಾರೆ. ಮಲ್ಲಾ ಅವರು ಕೇವಲ 16 T20I ಗಳಲ್ಲಿ 180.79 ಸ್ಟ್ರೈಕ್ ರೇಟ್‌ನಲ್ಲಿ 320 ರನ್ ಗಳಿಸಿದ್ದಾರೆ ಮತ್ತು ಆರು ವಿಕೆಟ್‌ಗಳನ್ನು ಪಡೆದಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ