ತಾವೇ ಬೈಕ್‌ನಲ್ಲಿ ಪಿಸ್ತೂಲ್ ಇಟ್ಟು ನಂತರ ಶಸ್ತ್ರಾಸ್ತ್ರ ಕಳ್ಳಸಾಗಣೆಗಾಗಿ ಆರೋಪದ ಮೇಲೆ ಶಿಕ್ಷಕನ ಬಂಧಿಸಿದ ಪೊಲೀಸರು : ಕಳ್ಳಾಟ ಬಹಿರಂಗಪಡಿಸಿದ ಸಿಸಿಟಿವಿ | ವೀಕ್ಷಿಸಿ

ಮೀರತ್: ಮೀರತ್‌ನಲ್ಲಿ, ಆರೋಪಿಯ ಮೋಟರ್‌ಬೈಕ್‌ನಲ್ಲಿ ಇಡಲಾಗಿದ್ದ ಗನ್ ಅನ್ನು ವ್ಯಕ್ತಿಯು ಅಕ್ರಮವಾಗಿ ಇಟ್ಟುಕೊಂಡಿದ್ದ ಆರೋಪದ ಮೇಲೆ ಶಿಕ್ಷಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಸಿಸಿಟಿವಿ ದೃಶ್ಯಾವಳಿಗಳು ಬೆಳಕಿಗೆ ಬಂದ ನಂತರ ಪೊಲೀಸರ ಕಳ್ಳಾಟವೇ ಬಯಲಾಗಿದೆ.
ಅಕ್ರಮವಾಗಿ ಶಸ್ತ್ರಾಸ್ತ್ರ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಮೀರತ್‌ನಲ್ಲಿ ಕೋಚಿಂಗ್ ಸೆಂಟರ್ ಶಿಕ್ಷಕನನ್ನು ಪೊಲೀಸರು ಬಂಧಿಸಿ ಕಸ್ಟಡಿಯಲ್ಲಿ ಇರಿಸಿದ್ದರು. ಆ ವ್ಯಕ್ತಿಯ ಸಹೋದರಿಯು ತಮ್ಮ ಕಡೆಯ ಕಥೆಯನ್ನು ಕೇಳಲು ಮೀರತ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೋಲಿಸ್ ಅವರ ಮನೆಯ ಹೊರಗೆ ಇಡೀ ರಾತ್ರಿ ಕಳೆದರು ಮತ್ತು 15 ಗಂಟೆಗಳ ನಂತರ ಆ ವ್ಯಕ್ತಿಯನ್ನು ಬಿಡಲಾಯಿತು.
ಈ ಪ್ರಕರಣವು ಖರ್ಖೋಡಾದ ಖಾಂಡವಲಿ ಗ್ರಾಮದ ರೈತ ಅಶೋಕ ತ್ಯಾಗಿ ಎಂಬವರ ಜಮೀನು ವಿವಾದದ ಸುತ್ತ ಸುತ್ತುತ್ತದೆ. ಪೊಲೀಸರು ಮತ್ತೊಂದು ಕುಟುಂಬದ ಸಹಯೋಗದಲ್ಲಿ ಅಶೋಕ ತ್ಯಾಗಿ ಮತ್ತು ಅವರ ಕುಟುಂಬಕ್ಕೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಮಂಗಳವಾರ ರಾತ್ರಿ ಪೊಲೀಸರು ಮೊದಲು ಗ್ರಾಮಕ್ಕೆ ಬಂದಾಗ, ಅವರಿಗೆ ಯಾವುದೇ ದೋಷಾರೋಪಣೆ ಮಾಡುವಂತಹ ವಸ್ತುಗಳು ಕಂಡುಬಂದಿಲ್ಲ.
ನಂತರ ಇಬ್ಬರು ಕಾನ್‌ಸ್ಟೆಬಲ್‌ಗಳು ಮತ್ತೊಂದು ಕುಟುಂಬದ ʼವಿನಂತಿʼ ಮೇರೆಗೆ ಶಿಕ್ಷಕನನ್ನು ಬಂಧಿಸಲು ಈ ರೀತಿ ನಾಟಕವಾಡಿ ಶಿಕ್ಷಕನನ್ನು ಬಂಧಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಕಾನ್‌ಸ್ಟೆಬಲ್‌ಗಳನ್ನು ಪೊಲೀಸ್ ಲೈನ್‌ಗೆ ವರ್ಗಾಯಿಸಲಾಗಿದ್ದು, ತನಿಖೆ ನಡೆಯುತ್ತಿದೆ.

ಘಟನೆ ವಿವರ..:
ಮೊದಲು ಪೊಲೀಸರು ಗ್ರಾಮಕ್ಕೆ ಬಂದಾಗ, ಅವರಿಗೆ ಯಾವುದೇ ದೋಷಾರೋಪಣೆ ಮಾಡುವಂತಹ ವಸ್ತುಗಳು ಕಂಡುಬಂದಿಲ್ಲ. ನಂತರ ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಇಬ್ಬರು ಪೊಲೀಸ್ ಪೇದೆಗಳು ಮೀರತ್ ಜಿಲ್ಲೆಯ ಖರ್ಖೋಡಾದಲ್ಲಿರುವ ಕೋಚಿಂಗ್ ಸೆಂಟರ್ ಶಿಕ್ಷಕ ಅಂಕಿತ್ ತ್ಯಾಗಿ ಮನೆಯ ಗೇಟ್ ಅನ್ನು ಪ್ರವೇಶಿಸಿದರು. ಅವರಲ್ಲಿ ಒಬ್ಬ ಮನೆಯೊಳಗೆ ನಿಲ್ಲಿಸಿದ ಬೈಕ್‌ನಲ್ಲಿ ಪಿಸ್ತೂಲ್‌ನಂತೆ ತೋರುತ್ತಿರುವುದನ್ನು ಇಡುತ್ತಿರುವುದನ್ನು ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳು ತೋರಿಸುತ್ತವೆ.
ನಂತರ ಇಬ್ಬರು ಪೊಲೀಸರು ಒಳಗೆ ಓದುತ್ತಿದ್ದ ಅಂಕಿತ್‌ ಅವರನ್ನು ಹಿಡಿದು ಹೊರಗೆ ಕರೆದೊಯ್ದರು. ನಂತರ ಅವರು ಬೈಕ್‌ನಿಂದ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳುವುದು ಕಂಡುಬರುತ್ತದೆ. ನಂತರ ಅಂಕಿತ್‌ ಅವರನ್ನು ಖಾರ್ಖೋಡಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು, ಅಲ್ಲಿ ಪೊಲೀಸರು ಆತನಿಂದ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ ಎಂದು ತೋರಿಸಿದರು. ಶಸ್ತ್ರಾಸ್ತ್ರ ಕಳ್ಳಸಾಗಣೆ ಆರೋಪದ ಮೇಲೆ ಅವರು ಅವರನ್ನು ಬಂಧಿಸಿದರು.

ಪ್ರಮುಖ ಸುದ್ದಿ :-   ಭಾರತದಲ್ಲಿ ಅತಿ ಹೆಚ್ಚು ಕೊಲೆಗಳು ನಡೆಯಲು ಸಾಮಾನ್ಯ ಕಾರಣಗಳು ಯಾವುದು ಗೊತ್ತಾ..? ಅಂಕಿಅಂಶಗಳಿಂದ ಬಹಿರಂಗ

ಈ ಕುರಿತು ಮನೆಯಲ್ಲಿ ಅಳವಡಿಸಿದ್ದ ಸಿಸಿಟವಿ ಕ್ಯಾಮರಾ ನೋಡಿದ ಅಂಕಿತ್ ಅವರ ಸಹೋದರಿ, ರಾಖಿ, ತನ್ನ ಶಿಶುವನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡು, ವೀಡಿಯೊದೊಂದಿಗೆ ಮೀರತ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೋಲೀಸ್ ಕಚೇರಿಗೆ ಧಾವಿಸಿದರು. ಹಾಗೂ ತನಗೆ ವೀಡಿಯೊವನ್ನು ತೋರಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು, ಆದರೆ ಅನುಮತಿ ನಿರಾಕರಿಸಲಾಯಿತು. ಐಜಿಯವರ ಮನೆಯೂ ಅದೇ ಆವರಣದಲ್ಲಿರುವುದರಿಂದ ತನಗೆ ಅವಕಾಶ ಸಿಗಬಹುದು ಎಂಬ ಭರವಸೆಯಿಂದ ರಾಖಿ ರಾತ್ರಿಯಿಡೀ ಅವರ ಮನೆಯ ಕಾಯುತ್ತಿದ್ದರು. ಅಂತಿಮವಾಗಿ ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಐಜಿ ಅವರನ್ನು ಭೇಟಿಯಾಗಲು ಅವಕಾಶ ನೀಡಲಾಯಿತು. ಸಹೋದರಿ ದೂರು ದಾಖಲಿಸಿದರು ಹಾಗೂ ವೀಡಿಯೊವನ್ನು ಪ್ರಸ್ತುತಪಡಿಸಿದರು. ಸ್ವಲ್ಪ ಸಮಯದ ನಂತರ ಅಂಕಿತ್‌ ಅವರನ್ನು ಬಿಡಲಾಯಿತು.
“ಇಬ್ಬರು ಪೊಲೀಸರು ನಮ್ಮ ಮನೆಗೆ ಬಂದಿದ್ದರು. ನನ್ನ ಕಿರಿಯ ಸಹೋದರನನ್ನು ನಕಲಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅವರು ಮೊದಲು ಬೈಕ್ ಮೇಲೆ ಪಿಸ್ತೂಲ್ ಇಟ್ಟು, ನಂತರ ಆತನನ್ನು ಬಂಧಿಸಿದರು” ಎಂದು ರಾಖಿ ಹೇಳಿದ್ದಾರೆ.
‘ಪೊಲೀಸರ ವರ್ತನೆ ಏನೋ ಅನುಮಾನಾಸ್ಪದವಾಗಿರುವಂತಿದೆ, ತನಿಖೆ ನಡೆಸುತ್ತಿದ್ದೇವೆ’ ಎಂದು ಎಸ್ಪಿ (ಗ್ರಾಮೀಣ) ಕಮಲೇಶ್ ಬಹದ್ದೂರ್ ಸಿಂಗ್ ಹೇಳಿದ್ದಾರೆ. ಮೀರತ್‌ ಐಜಿ ಸಂಪೂರ್ಣ ಘಟನೆಯ ವರದಿಯನ್ನು ಕೇಳಿದ್ದಾರೆ.

ಪ್ರಮುಖ ಸುದ್ದಿ :-   ಫೋರ್ಬ್ಸ್‌ನ 2023ರ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ನಾಲ್ವರು ಭಾರತೀಯರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement