ನೇರಪ್ರಸಾರದ ಟಿವಿ ಚರ್ಚೆ ವೇಳೆ ಪರಸ್ಪರ ಹೊಡೆದಾಡಿಕೊಂಡ ಪಾಕಿಸ್ತಾನದ ನಾಯಕರು | ವೀಕ್ಷಿಸಿ

ಇತ್ತೀಚೆಗೆ ಪಾಕಿಸ್ತಾನದ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ, ಎದುರಾಳಿ ಪಕ್ಷಗಳ ಇಬ್ಬರು ಪ್ಯಾನೆಲಿಸ್ಟ್‌ಗಳ ನಡುವಿನ ಚರ್ಚೆಯು ಜಗಳಕ್ಕೆ ತಿರುಗಿ ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷ ಬೆಂಬಲಿಸುವ ವಕೀಲ ಶೇರ್ ಅಫ್ಜಲ್ ಮರ್ವಾತ್ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್ – ನವಾಜ್ (ಪಿಎಂಎಲ್-ಎನ್) ಸೆನೆಟರ್ ಅಫ್ನಾನುಲ್ಲಾ ಖಾನ್ ಅವರು ಕಾರ್ಯಕ್ರಮದ ಚರ್ಚೆಯ ಸಮಯದಲ್ಲಿ ತಮ್ಮ ಪಕ್ಷಗಳ ಭಿನ್ನಾಭಿಪ್ರಾಯಗಳನ್ನು ಅನುಸರಿಸಿ ಟವಿ ಕಾರ್ಯಕ್ರಮದಲ್ಲಿಯೇ ಅಕ್ಷರಶಃ ಹೊಡೆದಾಡಿಕೊಂಡಿದ್ದಾರೆ.

ವೀಡಿಯೊದಲ್ಲಿ, ಶೇರ್ ಅಫ್ಜಲ್ ಮರ್ವಾತ್ – ಮೆರೂನ್ ಶರ್ಟ್‌ ತನ್ನ ಕುರ್ಚಿಯಿಂದ ಎದ್ದು ಅಫ್ನಾನುಲ್ಲಾ ಖಾನ್‌ಗೆ ಕಪಾಳಮೋಕ್ಷ ಮಾಡಿದ ಮೊದಲ ವ್ಯಕ್ತಿ. ಇದಕ್ಕೆ ಪ್ರತಿಕ್ರಿಯೆ ನೀಡಿದ ಖಾನ್ ಕೂಡ ಬಡಿದಿದ್ದಾರೆ. ಕಾರ್ಯಕ್ರಮದ ನಿರೂಪಕರು ಅವರನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದಂತೆ ಅವರ ಎದುರಾಳಿಯನ್ನು ತಳ್ಳಿದ್ದಾರೆ.

ವೀಡಿಯೊದಲ್ಲಿ ಇಬ್ಬರು ದೂಡಾಡಿಕೊಂಡರು ಹಾಗೂ ಸುದ್ದಿ ಟೇಬಲ್‌ ಹಿಂದೆ ನೆಲದ ಮೇಲೆ ಬೀಳುವುದನ್ನು ನೋಡಬಹುದು. ನಿರೂಪಕ ಮತ್ತು ಸಿಬ್ಬಂದಿ ಸದಸ್ಯರು ಇಬ್ಬರನ್ನು ಬೇರ್ಪಡಿಸಲು ಪ್ರಯತ್ನಿಸಿದರು.
X ನಲ್ಲಿನ ಬಳಕೆದಾರರು, ಇಬ್ಬರು ನಾಯಕರುರ ಹೊಡೆದಾಟದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement