ದೆಹಲಿ ಮದ್ಯ ನೀತಿ ಪ್ರಕರಣ : ಮನೆ ಇ.ಡಿ. ದಾಳಿ ನಡೆದ ಕೆಲವೇ ಗಂಟೆಗಳ ನಂತರ ಎಎಪಿ ನಾಯಕ ಸಂಜಯ ಸಿಂಗ್ ಬಂಧನ

ನವದೆಹಲಿ: ದೆಹಲಿ ಮದ್ಯ ನೀತಿಯ ತನಿಖೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷ (AAP)ಕ್ಕೆ ಜಾರಿ ನಿರ್ದೇಶನಾಲಯವು ಶಾಕ್‌ ನೀಡಿದೆ. (ED). ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ ಸಿಂಗ್ ಅವರನ್ನು ಇ.ಡಿ. ಇಂದು ಬುಧವಾರ (ಅಕ್ಟೋಬರ್‌ 4) ಬಂಧಿಸಿದೆ.
ಬುಧವಾರ ಬೆಳಗ್ಗೆಯಿಂದಲೇ ಸಂಸದರ ದೆಹಲಿ ನಿವಾಸದಲ್ಲಿ ಶೋಧ ಕಾರ್ಯ ನಡೆದಿತ್ತು. ಇದು ಆಮ್‌ ಆದ್ಮಿ ಪದ ಮೂರನೇ ಪ್ರಮುಖ ನಾಯಕನ ಬಂಧನವಾಗಿದೆ. ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಕಳೆದ ವರ್ಷ ಮೇ ತಿಂಗಳಲ್ಲಿ ನಾಲ್ಕು ಕಂಪನಿಗಳ ಮೂಲಕ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಈ ವರ್ಷದ ಫೆಬ್ರವರಿಯಲ್ಲಿ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿ ಆಗಿನ ದೆಹಲಿ ಉಪ ಮುಖ್ಯಮಂತ್ರಿ ಮತ್ತು ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಮನೀಶ್ ಸಿಸೋಡಿಯಾ ಅವರನ್ನು ಮದ್ಯ ನೀತಿ ಹಗರಣದಲ್ಲಿ ಸಿಬಿಐ ಬಂಧಿಸಿತು.

ಈ ಪ್ರಕರಣದ ಆರೋಪಿ ಹಾಗೂ ನಂತರ ʼಅನುಮೋದಕ’ರಾದ ಉದ್ಯಮಿ ದಿನೇಶ್ ಅರೋರಾ ರಾಜ್ಯಸಭಾ ಸದಸ್ಯ ಸಂಜಯ ಸಿಂಗ್ ಅವರನ್ನು ಹೆಸರಿಸಿದ ನಂತರ ಸಂಜಯ ಸಿಂಗ್ ವಿರುದ್ಧ ದಾಳಿಗಳು ನಡೆದವು. ಎಎಪಿ ನಾಯಕ ಸಂಜಯ ಸಿಂಗ್ ಅವರು ತಮ್ಮನ್ನು ಅಬಕಾರಿ ಸಚಿವರಾಗಿದ್ದ ಸಿಸೋಡಿಯಾ ಅವರಿಗೆ ಪರಿಚಯಿಸಿದ್ದರು ಎಂದು ಅರೋರಾ ಹೇಳಿದ್ದಾರೆ.
ರಾಜ್ಯಸಭಾ ಸಂಸದರ ದೆಹಲಿ ನಿವಾಸದಲ್ಲಿ ಬುಧವಾರ ಮುಂಜಾನೆ ಆರಂಭವಾದ ಶೋಧ ಕಾರ್ಯಾಚರಣೆ ಕೆಲವು ಗಂಟೆಗಳ ವರೆಗೆ ನಡೆಯಿತು. ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯದ ಕಚೇರಿಗೆ ಕರೆದೊಯ್ಯಲಾಗುತ್ತದೆ, ಅಲ್ಲಿ ಅವರ ಹೇಳಿಕೆಯನ್ನು ದಾಖಲಿಸಲಾಗುತ್ತದೆ. ಗುರುವಾರ ಮಧ್ಯಾಹ್ನ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ ಮತ್ತು ಸಂಸ್ಥೆಯು ಅವರ ಕಸ್ಟಡಿಗೆ ಕೋರುವ ನಿರೀಕ್ಷೆಯಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ದಕ್ಷಿಣ ಭಾರತದವರು ಆಫ್ರಿಕನ್ನರಂತೆ, ಪೂರ್ವ ಭಾರತದವರು ಚೀನಿಗಳಂತೆ ಕಾಣ್ತಾರೆ....: ಭಾರೀ ವಿವಾದ ಸೃಷ್ಟಿಸಿದ ಪಿತ್ರೋಡಾ ಹೇಳಿಕೆ ; ಕಾಂಗ್ರೆಸ್ಸಿಗೆ ಮುಜುಗರ

ಬುಧವಾರ ಬೆಳಗ್ಗೆ 7 ಗಂಟೆಯಿಂದ ಸಂಜಯ್ ಸಿಂಗ್ ಅವರ ನಿವಾಸದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ದೆಹಲಿಯ ಮದ್ಯ ನೀತಿ ಪ್ರಕರಣದಲ್ಲಿ ಇಡಿ ನಡೆಸಿದ ನಾಲ್ಕನೇ ದೊಡ್ಡ ಬಂಧನ ಇದಾಗಿದೆ.ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಪ್ರಕರಣದ ಮತ್ತೊಬ್ಬ ಆರೋಪಿ ಉದ್ಯಮಿ ವಿಜಯ್ ನಾಯರ್ ಈಗಾಗಲೇ ಜೈಲಿನಲ್ಲಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement