ಕುಮಟಾ: ರಾಷ್ಟ್ರಧ್ವಜದಂತೆ ಕಾಣುವ ಧ್ವಜದಲ್ಲಿ ಬೇರೆ ಚಿಹ್ನೆ, ಗುರುತು ಬಳಸಿ ಈದ್ ಮಿಲಾದ್ ಮೆರವಣಿಗೆ, ಪ್ರಕರಣ ದಾಖಲು

 ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ್‌ ಸಮೀಪ ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡಿದ ಶಂಕೆ ವ್ಯಕ್ತವಾಗಿದ್ದು ಈ ಕುರಿತು ಎಫ್‌ಐಆರ್‌ ದಾಖಲಾಗಿದೆ.
ಈದ್‌ ಮಿಲಾದ್‌ ದಿನ ಕುಮಟಾ ತಾಲೂಕಿನ ಮಿರ್ಜಾನ್‌ ಸಮೀಪ ರಾಷ್ಟ್ರ ಧ್ವಜದಂತೆ ಹೋಲುತ್ತಿರುವ ರೀತಿಯ ಧ್ವಜದ ಮೇಲೆ ಅರ್ಧ ಚಂದ್ರ, ಸ್ಟಾರ್, ಇತ್ಯಾದಿ ಗುರುತನ್ನು ಪ್ರದರ್ಶಿಸಲಾಗಿತ್ತು. ಈ ಘಟನೆ ಕುಮಟಾ ತಾಲೂಕಿನ ಮಿರ್ಜಾನನಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಇದರ ವೀಡಿಯೊ ಹರಿದಾಡಿದೆ. ರಾಷ್ಟ್ರಧ್ವಜದಂತೆ ಕಾಣುವ ಧ್ವಜದಲ್ಲಿ ಅಶೋಕ ಚಕ್ರ ತೆಗೆದು ಅರ್ಧಚಂದ್ರದ ಚಿಹ್ನೆ ಬಳಸಿ ಅದರಲ್ಲಿ ಬರಹಗಳನ್ನು ಬರೆದು ಅದನ್ನು ಹಿಡಿದು ಮೆರವಣಿಗೆ ಮಾಡಲಾಗಿದೆ. ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾದ ನಂತರ ಕುಮಟಾ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಆರೋಪಿಗಳ ಹೆಸರು ತಿಳಿದುಬರಬೇಕಿದೆ. ಇದರಲ್ಲಿ ಕೆಲವರು ಭಾಗಿಯಾಗಿರಬಹುದು ಎಂದು ಕುಮಟಾ ಪೊಲೀಸರು ಶಂಕಿಸಿದ್ದು ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪೊಲೀಸ್ ಪೇದೆಯೊಬ್ಬರು ಠಾಣೆಯಲ್ಲಿ ಸಾಮಾಜಿಕ ಜಾಲತಾಣ ಗಮನಿಸುತ್ತಿರುವಾಗ ಇದು ಗಮನಕ್ಕೆ ಬಂದಿದೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ದರ್ಶನ್‌ ಪ್ರಕರಣ : ರೇಣುಕಾಸ್ವಾಮಿ ಅಪಹರಣಕ್ಕೆ ಬಳಕೆಯಾಗಿದ್ದ ಕಾರು ಜಪ್ತಿ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement