‘ಅವರು ಬಹಳ ಬುದ್ಧಿವಂತ ವ್ಯಕ್ತಿ’: ಪ್ರಧಾನಿ ಮೋದಿ ನಾಯಕತ್ವ ಹೊಗಳಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ ಹಾಗೂ ಪ್ರಧಾನಿ ಮೋದಿ ಅವರನ್ನು “ಅತ್ಯಂತ ಬುದ್ಧಿವಂತ ವ್ಯಕ್ತಿ” ಎಂದು ಬಣ್ಣಿಸಿದ್ದಾರೆ.
ರಷ್ಯಾದ ಸುದ್ದಿ ಪ್ಲಾಟ್‌ಫಾರ್ಮ್, ಆರ್‌ಟಿ ನ್ಯೂಸ್ ಹಂಚಿಕೊಂಡ ವೀಡಿಯೊದಲ್ಲಿ, ಪ್ರಧಾನಿ ಮೋದಿಯವರ “ಮಾರ್ಗದರ್ಶನ” ಅಡಿಯಲ್ಲಿ ಭಾರತವು ಮಾಡಿದ ಮಹತ್ವದ ಪ್ರಗತಿಯ ಬಗ್ಗೆ ಪುತಿನ್ ಮಾತನಾಡಿದ್ದಾರೆ.
ಸೋಚಿಯಲ್ಲಿ ನಡೆದ ಪ್ರಮುಖ ಭಾಷಣದಲ್ಲಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಭಾರತ ಮತ್ತು ರಷ್ಯಾ ನಡುವೆ ಬಿರುಕು ಮೂಡಿಸಲು ಪಾಶ್ಚಿಮಾತ್ಯ ದೇಶಗಳು ನಡೆಸಿದ ಪ್ರಯತ್ನಗಳ ಬಗ್ಗೆ ಟೀಕಿಸಿದರು, ಈ ವಿಷಯದಲ್ಲಿ ಅವರು ಫಲಪ್ರದವಾಗುವುದಿಲ್ಲ ಎಂದು ಹೇಳಿದ ಅವರು, ಈ ಪಾಶ್ಚಿಮಾತ್ಯ ಗಣ್ಯರನ್ನು ಕುರುಡಾಗಿ ಅನುಸರಿಸಲು ಯಾವ ದೇಶ ಸಿದ್ಧವಿಲ್ಲವೋ ಆ ದೇಶವನ್ನು ಶತ್ರು ಎಂದು ಬಿಂಬಿಸಲು ಈ ಪಶ್ಚಿಮ ದೇಶಗಳು ಪ್ರಯತ್ನಿಸುತ್ತಿವೆ ಎಂದು ಅವರು ಆರೋಪಿಸಿದರು.
“ಒಂದು ನಿರ್ದಿಷ್ಟ ಸಮಯದಲ್ಲಿ, ಅವರು ಭಾರತದೊಂದಿಗೆ ಅದೇ ರೀತಿ ಮಾಡಲು ಪ್ರಯತ್ನಿಸಿದರು. ಈಗ ಅವರು ಫ್ಲರ್ಟಿಂಗ್ ಮಾಡುತ್ತಿದ್ದಾರೆ, ನಾವೆಲ್ಲರೂ ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೇವೆ. ನಾವು ಏಷ್ಯಾದ ಪರಿಸ್ಥಿತಿಯನ್ನು ಅನುಭವಿಸುತ್ತೇವೆ ಮತ್ತು ನೋಡುತ್ತೇವೆ. ಎಲ್ಲವೂ ಸ್ಪಷ್ಟವಾಗಿದೆ. ಭಾರತೀಯ ನಾಯಕತ್ವವು ಸ್ವತಂತ್ರವಾಗಿದೆ ಹಾಗೂ ಇದು ರಾಷ್ಟ್ರೀಯ ಹಿತಾಸಕ್ತಿಗಳಿಂದ ಮುನ್ನಡೆಸಲ್ಪಟ್ಟಿದೆ, ಹೀಗಾಗಿ ಪಶ್ಚಿಮದ ಈ ದೇಶಗಳ ಪ್ರಯತ್ನಗಳಿಗೆ ಯಾವುದೇ ಅರ್ಥವಿಲ್ಲ ಎಂದು ನಾನು ಭಾವಿಸುತ್ತೇನೆ, ಆದರೂ, ಅವರು ಮುಂದುವರಿಯುತ್ತಾರೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು. ಅಲ್ಲದೆ, ಭಾರತ ಮತ್ತು ರಷ್ಯಾ ನಡುವೆ ಬಿರುಕುಗಳನ್ನು ಸೃಷ್ಟಿಸುವ ಇಂತಹ ಅವರ ಪ್ರಯತ್ನಗಳು “ಅರ್ಥಹೀನ” ಎಂದು ಹೇಳಿದರು.

ದೇಶದ ಹಿತಾಸಕ್ತಿಗಳಿಗಾಗಿ ಭಾರತ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರತಿಪಾದಿಸಿದ ಪುತಿನ್, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತ ಬಲಶಾಲಿಯಾಗುತ್ತಿದೆ ಎಂದು ಹೇಳಿದರು. “.. ಭಾರತ, 150 ಶತಕೋಟಿ ಜನಸಂಖ್ಯೆ, ಶೇಕಡಾ 7 ಕ್ಕಿಂತ ಹೆಚ್ಚು ಆರ್ಥಿಕ ಬೆಳವಣಿಗೆ … ಅದು ಶಕ್ತಿಯುತ ದೇಶ, ಪ್ರಬಲ ದೇಶ. ಮತ್ತು ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಅದು ಬಲವಾಗಿ ಬೆಳೆಯುತ್ತಿದೆ…ಅಭಿವೃದ್ಧಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸುತ್ತಿದೆ ” ಎಂದು ಪುತಿನ್‌ ಹೇಳಿದರು.
ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಗೆ ಕರೆ ನೀಡಿದರು ಮತ್ತು ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳು ಜಾಗತಿಕ ಗುಂಪಿನಲ್ಲಿ ಹೆಚ್ಚಿನ ಪ್ರಾತಿನಿಧ್ಯಕ್ಕೆ ಅರ್ಹವಾಗಿವೆ ಎಂದು ಪ್ರತಿಪಾದಿಸಿದರು.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

‘ಬಹಳ ಬುದ್ಧಿವಂತ ವ್ಯಕ್ತಿ’: ಪ್ರಧಾನಿ ಮೋದಿ ಬಗ್ಗೆ ಪುತಿನ್
ಪ್ರಧಾನಿ ಮೋದಿಯನ್ನು ಹೊಗಳಿದ ರಷ್ಯಾ ಅಧ್ಯಕ್ಷ, ಭಾರತವು ತನ್ನ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯನ್ನು ರಾಜಕೀಯಗೊಳಿಸುವುದನ್ನು ತಪ್ಪಿಸಿದೆ ಮತ್ತು ಇದು ಭಾರತೀಯ ಅಧಿಕಾರಿಗಳು ಮತ್ತು ಪ್ರಧಾನಿ ಮೋದಿಯ ಯಶಸ್ಸು ಎಂದು ಬಣ್ಣಿಸಿದ್ದಾರೆ.
ನಾವು (ರಷ್ಯಾ) ಪ್ರಧಾನಿ ಮೋದಿಯವರೊಂದಿಗೆ ಉತ್ತಮ ರಾಜಕೀಯ ಸಂಬಂಧಗಳನ್ನು ಹೊಂದಿದ್ದೇವೆ, ಅವರು ಬಹಳ ಬುದ್ಧಿವಂತ ವ್ಯಕ್ತಿ. ಮತ್ತು ಅವರ ನಾಯಕತ್ವದಲ್ಲಿ ಭಾರತವು ಅಭಿವೃದ್ಧಿಯಲ್ಲಿ ಬಹಳ ಮಹತ್ತರವಾದ ಪ್ರಗತಿಯನ್ನು ಸಾಧಿಸುತ್ತಿದೆ. ಇದು ಭಾರತ ಮತ್ತು ರಷ್ಯಾ ಎರಡರ ಕಾರ್ಯಸೂಚಿ ಹಾಗೂ ಆಸಕ್ತಿಯನ್ನು ಸಂಪೂರ್ಣವಾಗಿ ಪೂರೈಸುತ್ತದೆ ಎಂದು ಪುತಿನ್ ಹೇಳಿದರು. ಆರ್ಥಿಕ ಭದ್ರತೆ ಮತ್ತು ಸೈಬರ್ ಅಪರಾಧದ ವಿರುದ್ಧದ ಹೋರಾಟದಲ್ಲಿ ರಷ್ಯಾ ಮತ್ತು ಭಾರತದ ನಡುವೆ ಮತ್ತಷ್ಟು ಸಹಕಾರದ ಭರವಸೆಯನ್ನು ಅವರು ವ್ಯಕ್ತಪಡಿಸಿದರು.
ಪ್ರಧಾನಿ (ಮೋದಿ) ಶೃಂಗಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳಿಂದಾಗಿ ಅವರು ಜಿ 20 ಶೃಂಗಸಭೆಯನ್ನು ರಾಜಕೀಯರಹಿತಗೊಳಿಸುವಲ್ಲಿ ಯಶಸ್ವಿಯಾದರು ಮತ್ತು ಜಿ 20 ಶೃಂಗಸಭೆ ಮುಂದೆ ಸಾಗಲು ಇದು ಏಕೈಕ ಮಾರ್ಗವಾಗಿದೆ, ಏಕೆಂದರೆ ಜಿ 20 ಎಂಬುದು ರಾಜಕೀಯ ವಿಷಯಗಳಿಗಲ್ಲ, ಅದನ್ನು ಆರ್ಥಿಕ ವಿಷಯಗಳ ಬಗ್ಗೆ ಚರ್ಚಿಸಲು ವೇದಿಕೆಯಾಗಿ ಸ್ಥಾಪಿಸಲಾಯಿತು. ಮತ್ತು ಜಿ 20ರ ರಾಜಕೀಕರಣಗೊಳಿಸಿದರೆ ಅದು ಅದನ್ನು ನಾಶಪಡಿಸುವ ಮಾರ್ಗವಾಗುತ್ತದೆ, ಆದರೆ ಭಾರತೀಯ ಅಧಿಕಾರಿಗಳು ಅದನ್ನು ತಪ್ಪಿಸುವಲ್ಲಿ ಯಶಸ್ವಿಯಾದರು ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಕಳೆದ ತಿಂಗಳು ನವದೆಹಲಿಯಲ್ಲಿ ನಡೆದ G20 ಶೃಂಗಸಭೆಯಲ್ಲಿ, ಜಂಟಿ ನಾಯಕರ ಘೋಷಣೆಯ ಮೇಲೆ ವಿಶ್ವ ನಾಯಕರಲ್ಲಿ 100% ಒಮ್ಮತವನ್ನು ಸಾಧಿಸುವ ಮೂಲಕ ಭಾರತವು ಪ್ರಮುಖ ರಾಜತಾಂತ್ರಿಕ ಗೆಲುವು ಸಾಧಿಸಿತು. ಶೃಂಗಸಭೆಯ ಮೊದಲ ದಿನದಂದು 83 ಪ್ಯಾರಾಗಳ ನವದೆಹಲಿ ಘೋಷಣೆಯನ್ನು ಅಂಗೀಕರಿಸಲಾಯಿತು.
ಗಮನಾರ್ಹವಾಗಿ, ಘೋಷಣೆಯು ನಡೆಯುತ್ತಿರುವ ಉಕ್ರೇನ್-ರಷ್ಯಾ ಸಂಘರ್ಷದಲ್ಲಿ ಶಾಂತಿಗೆ ಕರೆ ನೀಡಿತು, ಆದರೆ ಕಳೆದ ವರ್ಷ ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣದ ಬಗ್ಗೆ ಉಲ್ಲೇಖಿಸುವುದನ್ನು ತಪ್ಪಿಸಿತು, ಇದು ಹಿಂದಿನ ವರ್ಷದ ಬಾಲಿ ಘೋಷಣೆಗೆ ಹೋಲಿಸಿದರೆ ವ್ಯತಿರಿಕ್ತವಾಗಿತ್ತು. ಯಾಕೆಂದರೆ ರಷ್ಯಾ-ಉಕ್ರೇನ್ ಯುದ್ಧದ ಕುರಿತು ವಿಶ್ವ ನಾಯಕರು ಧ್ರುವೀಕರಣಗೊಂಡರು, ಪಾಶ್ಚಿಮಾತ್ಯ ದೇಶಗಳು ಮಾಸ್ಕೋವನ್ನು ಆಕ್ರಮಣಕಾರಿ ಎಂದು ಲೇಬಲ್ ಮಾಡಲು ಪ್ರಯತ್ನಿಸುತ್ತಿತ್ತು ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ; ಮತ್ತೊಂದು ಕ್ಷೇತ್ರದಿಂದಲೂ ರಾಹುಲ್‌ ಗಾಂಧಿ ಸ್ಪರ್ಧೆ

ರಷ್ಯಾ ಈ ಘೋಷಣೆಗೆ ತೃಪ್ತಿ ವ್ಯಕ್ತಪಡಿಸಿದೆ ಮತ್ತು ಇದನ್ನು ‘ಮೈಲಿಗಲ್ಲು’ ಎಂದು ಕರೆದಿದೆ. ಗ್ಲೋಬಲ್ ಸೌತ್‌ನಿಂದ ದೇಶಗಳನ್ನು ಕ್ರೋಢೀಕರಿಸಲು ಭಾರತದ G20 ನಾಯಕತ್ವವನ್ನು ಇದು ಶ್ಲಾಘಿಸಿದೆ.
ಸೆಪ್ಟೆಂಬರ್‌ನಲ್ಲಿ ನಡೆದ ಜಿ 20 ಶೃಂಗಸಭೆಯ ನಂತರ, ಪುತಿನ್ ಅವರು ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಉಪಕ್ರಮವನ್ನು ಶ್ಲಾಘಿಸಿದರು ಮತ್ತು ರಷ್ಯಾ ತನ್ನ ದೇಶೀಯ ಕೈಗಾರಿಕೆಗಳ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಭಾರತದಂತಹ ಪಾಲುದಾರರ ಯಶಸ್ಸಿನ ಕಥೆಗಳನ್ನು ಅನುಕರಿಸಬಹುದು ಎಂದು ಹೇಳಿದರು.
“ಅವರು ಭಾರತೀಯ ನಿರ್ಮಿತ ವಾಹನಗಳ ತಯಾರಿಕೆ ಮತ್ತು ಬಳಕೆಯ ಮೇಲೆ ಕೇಂದ್ರೀಕರಿಸಿದ್ದಾರೆ. ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಉತ್ತೇಜಿಸುವಲ್ಲಿ ಪ್ರಧಾನಿ ಮೋದಿ ಅವರು ಸರಿಯಾದ ಕೆಲಸವನ್ನು ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ರಷ್ಯಾದ ನಾಯಕ ಹೇಳಿದರು. ರಷ್ಯಾದ ನಿರ್ಮಿತ ಆಟೋಮೊಬೈಲ್‌ಗಳನ್ನು ಬಳಸುವುದು ಸಂಪೂರ್ಣವಾಗಿ ಉತ್ತಮ ಎಂದು ಅವರು ಹೇಳಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement