‘ಅವರು ಬಹಳ ಬುದ್ಧಿವಂತ ವ್ಯಕ್ತಿ’: ಪ್ರಧಾನಿ ಮೋದಿ ನಾಯಕತ್ವ ಹೊಗಳಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ ಹಾಗೂ ಪ್ರಧಾನಿ ಮೋದಿ ಅವರನ್ನು “ಅತ್ಯಂತ ಬುದ್ಧಿವಂತ ವ್ಯಕ್ತಿ” ಎಂದು ಬಣ್ಣಿಸಿದ್ದಾರೆ. ರಷ್ಯಾದ ಸುದ್ದಿ ಪ್ಲಾಟ್‌ಫಾರ್ಮ್, ಆರ್‌ಟಿ ನ್ಯೂಸ್ ಹಂಚಿಕೊಂಡ ವೀಡಿಯೊದಲ್ಲಿ, ಪ್ರಧಾನಿ ಮೋದಿಯವರ “ಮಾರ್ಗದರ್ಶನ” ಅಡಿಯಲ್ಲಿ ಭಾರತವು ಮಾಡಿದ ಮಹತ್ವದ ಪ್ರಗತಿಯ ಬಗ್ಗೆ ಪುತಿನ್ ಮಾತನಾಡಿದ್ದಾರೆ. ಸೋಚಿಯಲ್ಲಿ … Continued

ಜಿ20 ಸಮಯದಲ್ಲಿ ಭಾರತ ನೀಡಿದ ಅಧ್ಯಕ್ಷೀಯ ಸೂಟ್‌ನಲ್ಲಿ ಉಳಿಯಲು ನಿರಾಕರಿಸಿದ್ದ ಕೆನಡಾದ ಪ್ರಧಾನಿ ಟ್ರುಡೊ : ವರದಿ…!

ನವದೆಹಲಿ: ಭಾರತದಲ್ಲಿ G20 ಶೃಂಗಸಭೆಯ ಸಂದರ್ಭದಲ್ಲಿ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ನವದೆಹಲಿಯ ದಿ ಲಲಿತ್ ಹೋಟೆಲ್‌ನಲ್ಲಿ ವಿಶೇಷವಾಗಿ ಸಿದ್ಧಪಡಿಸಲಾದ ಅಧ್ಯಕ್ಷೀಯ ಸೂಟ್‌ (ರೂಂ)ನಲ್ಲಿ ಉಳಿಯಲು ನಿರಾಕರಿಸಿದ್ದರು. ಇದು ಹೀಗಾಗಿ ಭಾರತೀಯ ಗುಪ್ತಚರ ಅಧಿಕಾರಿಗಳಲ್ಲಿ ಕಳವಳಕ್ಕೆ ಕಾರಣವಾಗಿತ್ತು ಎಂದು ವರದಿಯೊಂದು ತಿಳಿಸಿದೆ. ಮೂಲಗಳ ಪ್ರಕಾರ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರಿಗೆ ನವದೆಹಲಿಯ … Continued

ಜಿ 20ಯಲ್ಲಿ ಪ್ರಧಾನಿ ಮೋದಿ ಜೊತೆ ಮಾನವ ಹಕ್ಕುಗಳು, ಮುಕ್ತ ಮಾಧ್ಯಮದ ಬಗ್ಗೆ ಪ್ರಸ್ತಾಪಿಸಿದ್ದಾಗಿ ವಿಯೆಟ್ನಾಂನಲ್ಲಿ ಹೇಳಿದ ಅಮೆರಿಕ ಅಧ್ಯಕ್ಷ ಜೋ ಬೈಡನ್‌

ನವದೆಹಲಿ: ದೆಹಲಿಯಲ್ಲಿ ಜಿ 20 ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಮಾನವ ಹಕ್ಕುಗಳನ್ನು ಗೌರವಿಸುವುದು ಮತ್ತು ಮುಕ್ತ ಮಾಧ್ಯಮ ಸೇರಿದಂತೆ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ದೆಹಲಿಯಲ್ಲಿ ಜಿ20 ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ವಿಯೆಟ್ನಾಂಗೆ ಅಧಿಕೃತ ಭೇಟಿ ವೇಳೆ ಪತ್ರಿಕಾಗೋಷ್ಠಿಯಲ್ಲಿ ಬೈಡನ್‌ … Continued

ಕೆನಡಾದ ಪ್ರಧಾನಿ ತೆರಳುವ ವಿಮಾನದಲ್ಲಿ ತಾಂತ್ರಿಕ ದೋಷ : ಭಾರತದಲ್ಲೇ ಉಳಿದ ಜಸ್ಟಿನ್ ಟ್ರುಡೊ

ನವದೆಹಲಿ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ವಿಮಾನವು ಭಾನುವಾರ ದೆಹಲಿಯಿಂದ ಹೊರಡುವಾಗ ತಾಂತ್ರಿಕ ದೋಷವ ಕಾಣಿಸಿಕೊಂಡಿದೆ. ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಬಂದಿರುವ ಕೆನಡಾದ ನಿಯೋಗವು ವಿಮಾನದ ತಾಂತ್ರಿಕ ದೋಷವನ್ನು ಎಂಜಿನಿಯರಿಂಗ್ ತಂಡವು ಸರಿಪಡಿಸುವವರೆಗೆ ಭಾರತದಲ್ಲಿಯೇ ಇರಲಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ” ಕೆನಡಾದ ಪ್ರಧಾನಿ ಟ್ರುಡೊ ಮತ್ತು ಅವರ ಸಂಪೂರ್ಣ … Continued

ದೆಹಲಿಯ ಅಕ್ಷರಧಾಮ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್, ಪತ್ನಿ ಅಕ್ಷತಾ

ನವದೆಹಲಿ; ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಭಾನುವಾರ ಬೆಳಗ್ಗೆ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಲಿಗೆ ಆಗಮಿಸಿರುವ ರಿಷಿ ಸುನಕ್ ಅವರು ಶುಕ್ರವಾರ ಮಾಧ್ಯಮ ಸಂವಾದದ ಸಂದರ್ಭದಲ್ಲಿ ತಮ್ಮನ್ನು “ಹೆಮ್ಮೆಯ ಹಿಂದೂ” ಎಂದು ಕರೆದುಕೊಂಡಿದ್ದಾರೆ, ದೆಹಲಿಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವ … Continued

G20 ಸೈಡ್‌ಲೈನ್‌ನಲ್ಲಿ 15 ದ್ವಿಪಕ್ಷೀಯ ಸಭೆ ನಡೆಸಲಿರುವ ಪ್ರಧಾನಿ ಮೋದಿ: ಪಟ್ಟಿಯಲ್ಲಿರುವ ಬೈಡೆನ್, ರಿಷಿ ಸುನಕ್, ಮ್ಯಾಕ್ರನ್

ನವದೆಹಲಿ: ಸೆಪ್ಟೆಂಬರ್ 9 ರಿಂದ 10ರಂದು ನವದೆಹಲಿಯಲ್ಲಿ ನಡೆಯಲಿರುವ ಜಿ 20 ಶೃಂಗಸಭೆಯ ಹೊರತಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದಾದ್ಯಂತದ ನಾಯಕರೊಂದಿಗೆ 15 ಕ್ಕೂ ಹೆಚ್ಚು ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ವಿವರಗಳ ಪ್ರಕಾರ, ಸೆಪ್ಟೆಂಬರ್ 8 ರಂದು ಪ್ರಧಾನಿ ಮೋದಿ ಅವರು ಮಾರಿಷಸ್, ಬಾಂಗ್ಲಾದೇಶ ಮತ್ತು ಅಮೆರಿಕ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಸೆಪ್ಟೆಂಬರ್ … Continued

ಜಿ20 ಶೃಂಗಸಭೆಯ ಔತಣಕೂಟಕ್ಕೆ ಮಾಜಿ ಪ್ರಧಾನಿಗಳಿಗೆ ಆಹ್ವಾನ

ನವದೆಹಲಿ: ಸೆಪ್ಟೆಂಬರ್ 9 ಮತ್ತು 10 ರಂದು ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ವಿಶ್ವದ ಪ್ರಮುಖ ಆರ್ಥಿಕತೆ ದೇಶಗಳ ಗಣ್ಯರು ದೆಹಲಿಗೆ ಆಗಮಿಸುತ್ತಿದ್ದಾರೆ. ಜಿ20 ಶೃಂಗಸಭೆ ಭೋಜನಕೂಟದಲ್ಲಿ ವಿದೇಶಿ ಪ್ರತಿನಿಧಿಗಳು, ಸಚಿವರು, ಸಂಸದರಲ್ಲದೆ ರಾಷ್ಟ್ರದ ಕೆಲವು ಮಾಜಿ, ಪ್ರಧಾನಿಗಳು, ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಮತ್ತು ಹೆಚ್.ಡಿ. ದೇವೇಗೌಡರನ್ನೂ ಜಿ20 … Continued

‘ನಾನು ನಿರಾಸೆಗೊಂಡಿದ್ದೇನೆ, ಆದರೆ…”: ದೆಹಲಿಯ ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅನುಪಸ್ಥಿತಿ ಬಗ್ಗೆ ಅಮೆರಿಕ ಅಧ್ಯಕ್ಷ ಬೈಡನ್‌

ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ಈ ವಾರ ಭಾರತ ಭೇಟಿಯನ್ನು ಎದುರು ನೋಡುತ್ತಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪಾಲ್ಗೊಳ್ಳದಿರುವ ಬಗ್ಗೆ ಅವರು ನಿರಾಸೆ ವ್ಯಕ್ತಪಡಿಸಿದ್ದಾರೆ. ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಬೈಡನ್‌ ಸೆಪ್ಟೆಂಬರ್ 7 ರಂದು ಭಾರತಕ್ಕೆ ಪ್ರಯಾಣಿಸಲಿದ್ದಾರೆ ಎಂದು ಶ್ವೇತಭವನವು … Continued

ಜಿ 20 ಸಭೆ ಸೈಡ್‌ಲೈನ್‌ನಲ್ಲಿ ಚೀನಾದ ವಿದೇಶಾಂಗ ಸಚಿವರನ್ನು ಭೇಟಿ ಮಾಡಿದ ಜೈಶಂಕರ: ಗಡಿ ವಿವಾದದ ಬಗ್ಗೆ ಚರ್ಚೆ

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ (ಇಎಎಂ) ಎಸ್. ಜೈಶಂಕರ ಗುರುವಾರ ಜಿ 20 ವಿದೇಶಾಂಗ ಸಚಿವರ ಸಭೆಯ ಪಕ್ಕದಲ್ಲಿ ಚೀನಾದ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ಅವರನ್ನು ಭೇಟಿಯಾದರು. ಉಭಯ ನಾಯಕರ ನಡುವೆ ಇದೇ ಮೊದಲ ದ್ವಿಪಕ್ಷೀಯ ಸಂವಾದವಾಗಿತ್ತು. ಜೈಶಂಕರ ಮತ್ತು ಕಿನ್ ನಡುವಿನ ಚರ್ಚೆಯು ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಬಾಂಧವ್ಯಕ್ಕೆ ಪ್ರಸ್ತುತ … Continued