ರಿಯೊ ಡಿ ಜನೈರೊ (ಬ್ರೆಜಿಲ್) : ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬ್ರೆಜಿಲ್ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಮಂಗಳವಾರ ಬ್ರೆಜಿಲ್‌ನಲ್ಲಿ G20 ಶೃಂಗಸಭೆಯಲ್ಲಿ(G20 Summit) ಭಾಗಿಯಾದ ನಂತರ ಅಲ್ಲಿ ವಿಶೇಷವಾಗಿ ಆಯೋಜನೆಗೊಂಡಿದ್ದ ಬ್ರೇಜಿಲಿಯನ್ನರೇ ಪಾತ್ರ ನಿರ್ವಹಿಸಿದ್ದ ರಾಮಾಯಣದ ನೃತ್ಯ ರೂಪಕವನ್ನು ಪ್ರಧಾನಿ ಮೋದಿ ವೀಕ್ಷಿಸಿದರು.
ಈಗ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬ್ರೆಜಿಲ್‌ನ ವಿಶ್ವವಿದ್ಯಾ ಸಂಸ್ಥೆಯ ಸದಸ್ಯರು ಈ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಂಸ್ಕೃತ ಭಾಷೆಯಲ್ಲಿ ರಾಮಾಯಣದ ನೃತ್ಯ ರೂಪಕ ಪ್ರದರ್ಶನ ನೀಡಿದರು.
ಈ ಬಗ್ಗೆ ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ರಣಬೀರ್ ಜೈಸ್ವಾಲ್ ಟ್ವೀಟ್ ಮಾಡಿದ್ದು, ಬ್ರೆಜಿಲ್ ನ ವಿಶ್ವವಿದ್ಯಾ ಸಂಸ್ಥೆಯ ಸದಸ್ಯರು ಸಂಸ್ಕೃತ ಭಾಷೆಯ ರಾಮಾಯಣದ ನೃತ್ಯ ರೂಪಕ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ. ಪ್ರಧಾನಿ ಮೋದಿಯನ್ನ ಭಾರತೀಯ ಪಾರಂಪರಿಕ ಶೈಲಿಯಲ್ಲಿ ಸ್ವಾಗತಿಸಿದರು ಎಂದು ಬಣ್ಣಿಸಿದ್ದಾರೆ.
ಪ್ರಧಾನಿ ಮೋದಿ ಈ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಮತ್ತು “ಜೋನಾಸ್ ಮಾಸೆಟ್ಟಿ ಅವರ ತಂಡವು ಸಂಸ್ಕೃತದಲ್ಲಿ ರಾಮಾಯಣದ ಗ್ಲಿಂಪ್ಸ್ ಅನ್ನು ಪ್ರಸ್ತುತಪಡಿಸಿತು. ಭಾರತೀಯ ಸಂಸ್ಕೃತಿ ಪ್ರಪಂಚದಾದ್ಯಂತ ಹೇಗೆ ಪ್ರಭಾವ ಬೀರುತ್ತಿದೆ ಎಂಬುದು ಶ್ಲಾಘನೀಯ ಎಂದು ಅವರು ಹೇಳಿದ್ದಾರೆ.
ವೇದಾಂತ ಮತ್ತು ಸಂಸ್ಕೃತವನ್ನು ಪ್ರಚಾರ ಮಾಡಲು ಮೀಸಲಾಗಿರುವ ಬ್ರೆಜಿಲಿಯನ್ ಸಂಸ್ಥೆಯಾದ ವಿಶ್ವ ವಿದ್ಯಾ ಗುರುಕುಲಂನ ವಿದ್ಯಾರ್ಥಿಗಳು ರಾಮಾಯಣವನ್ನು ಪ್ರದರ್ಶಿಸಿದರು.
ವಿಶ್ವ ವಿದ್ಯಾ ಗುರುಕುಲಂನ ಸಂಸ್ಥಾಪಕ, ಆಚಾರ್ಯ ವಿಶ್ವನಾಥ ಎಂದೂ ಕರೆಯಲ್ಪಡುವ ಜೋನಸ್ ಮಾಸೆಟ್ಟಿ ಅವರು ‘ಸಂಸ್ಕೃತ ವೇದ ಮಂತ್ರ’ ಪಠಿಸುವ ಮೂಲಕ ಪ್ರಧಾನಿ ಮೋದಿ ಅವರನ್ನು ಸೋಮವಾರ ಸ್ವಾಗತಿಸಿದ್ದರು.
ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಬ್ರೆಜಿಲ್‌ನಲ್ಲಿ ಜಿ 20 ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಂಡರು ಮತ್ತು ವಿವಿಧ ಸಂವಾದಗಳನ್ನು ನಡೆಸಿದರು. ಮೋದಿಗೆ ಬ್ರೆಜಿಲ್‌ನಲ್ಲಿರುವ ಭಾರತೀಯ ಸಮುದಾಯವು ಆತ್ಮೀಯ ಸ್ವಾಗತವನ್ನು ನೀಡಿತ್ತು. ಅವರು ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿನ ಹೋಟೆಲ್‌ಗೆ ಆಗಮಿಸುತ್ತಿದ್ದಂತೆ ಜಿಲ್ ನ ವೇದ ವಿದ್ವಾಂಸರು ಪ್ರಧಾನಮಂತ್ರಿ ಮೋದಿಯವರ ಸ್ವಾಗತಕ್ಕೆ ಮುಂದೆ ವೇದ ಮಂತ್ರಗಳನ್ನು ಪಠಿಸಿದ್ದು ವಿಶೇಷವಾಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ