ವೀಡಿಯೊ…: ಹೆಲ್ಮೆಟ್‌ನೊಳಗೆ ಅಡಗಿಕೊಂಡಿತ್ತು ವಿಷಪೂರಿತ ನಾಗರಹಾವು…ಅದೃಷ್ಟವಶಾತ್‌ ವ್ಯಕ್ತಿ ಕಡಿತದಿಂದ ಪಾರು | ವೀಕ್ಷಿಸಿ

ಕೇರಳದ ವ್ಯಕ್ತಿಯೊಬ್ಬರು ತಮ್ಮ ದ್ವಿಚಕ್ರ ವಾಹನದಲ್ಲಿಟ್ಟಿದ್ದ ಹೆಲ್ಮೆಟ್‌ನಲ್ಲಿ ನಾಗರಹಾವನ್ನು ಪತ್ತೆಯಾಗಿದೆ. ವಾಹನ ಸವಾರ ಈ ವಿಷಕಾರಿ ಹಾವಿನ ಕಡಿತದಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ. ತ್ರಿಶೂರ್ ಮೂಲದ ಸೋಜನ್, ತನ್ನ ಕೆಲಸದ ಸ್ಥಳದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಪಕ್ಕದ ಪ್ಲಾಟ್‌ಫಾರ್ಮ್‌ನಲ್ಲಿ ಹೆಲ್ಮೆಟ್ ಇರಿಸಿದ್ದರು. ಸಂಜೆ ಅವರು ಹೊರಡುವಾಗ ತಮ್ಮ ಹೆಲ್ಮೆಟ್‌ ತೆಗೆದಾಗ ಅವರಿಗೆ ಹೆಲ್ಮೆಟ್‌ ಒಳಗೆ ಏನೋ ಪ್ರವೇಶಿಸಿದೆ ಎಂಬುದು ಅವರ ಗಮನಕ್ಕೆ ಬಂದಿದೆ. ಆದರೆ ಏನೂ ಎಂಬುದು ಗೊತ್ತಾಗಲಿಲ್ಲ.
ಆದರೆ ತಮಗೆ ಅದು ಹಾವಿನಂತೆ ಭಾಸವಾಯಿತು ಎಂದು ಸೋಜನ್ ಹೇಳಿದರು. ಅವರು ತಕ್ಷಣ ಅರಣ್ಯ ಇಲಾಖೆಗೆ ಹೆಲ್ಮಟ್‌ ನಲ್ಲಿ ಹಾವು ಇರುವ ಬಗ್ಗೆ ಮಾಃಇತಿ ನೀಡಿದರು. ಅರಣ್ಯ ಇಲಾಖೆಯವರು ಲಿಜೋ ಎಂಬ ಹಾವಿನ ಸ್ವಯಂಸೇವಕರು ಸ್ಥಳಕ್ಕೆ ಆಗಮಿಸಿದರು.

ಹಾವು ಹಿಡಿಯುವವರು ಹೆಲ್ಮೆಟ್‌ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಹೆಲ್ಮೆಟ್‌ನೊಳಗೆ ವಿಷಕಾರಿ ಸಣ್ಣ ನಾಗರಹಾವು ಪತ್ತೆಯಾಗಿದೆ. ಹಾವು ಹಿಡಿಯುವವರು ಹೆಲ್ಮೆಟ್ ಅನ್ನು ನೆಲದ ಮೇಲೆ ಇರಿಸಿಕೊಂಡು ಹಾವನ್ನು ಎಚ್ಚರಿಕೆಯಿಂದ ಹುಡುಕಿದರು. ಅದು ಹೊರಗೆ ಕಾಣದಂತೆ ಅಡಗಿಕೊಂಡಿರುವುದು ಎಂದು ವೀಡಿಯೊ ದೃಶ್ಯಾವಳಿಗಳು ತೋರಿಸಿವೆ. ಆದರೆ, ಹೆಲ್ಮೆಟ್‌ನ ಒಳಭಾಗವನ್ನು ಪರೀಕ್ಷಿಸಿದಾಗ ಚಿಕ್ಕ ನಾಗರಹಾವು ಪತ್ತೆಯಾಗಿದೆ.

ಪ್ರಮುಖ ಸುದ್ದಿ :-   ಜಗತ್ತಿನ ಅತ್ಯಂತ ಅಮೂಲ್ಯವಾದ ಕಣ್ಣೀರು ; ಒಂಟೆಯ ಕಣ್ಣೀರಿನ ಹನಿ 26 ಜಾತಿ ವಿಷದ ಹಾವುಗಳ ಕಡಿತಕ್ಕೆ ದಿವ್ಯ ಔಷಧ : ಹೊಸ ಅಧ್ಯಯನ

ಹಾವಿಗೆ ಕೇವಲ 2 ತಿಂಗಳ ವಯಸ್ಸಾಗಿರಬಹುದು ಎಂದು ಅವರು ಅಂದಾಜಿಸಿದ್ದಾರೆ. ಹಾವಿನ ಸ್ವಯಂಸೇವಕ ಲಿಜೋ, ನಾಗರಹಾವಿನ ಕಡಿತದಿಂದ ಉಂಟಾಗುವ ಹೆಚ್ಚಿನ ಅಪಾಯವನ್ನು ಒತ್ತಿ ಹೇಳಿದರು. “ಅದರಲ್ಲಿಯೂ ಚಿಕ್ಕ ನಾಗರಹಾವು ಕಚ್ಚುವುದು ದೊಡ್ಡದಕ್ಕಿಂತ ಅಪಾಯಕಾರಿ” ಎಂದು ಲಿಜೋ ಹೇಳಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement