ವೀಡಿಯೊಗಳು… | ತನ್ನ ಮೇಲೆ ಭಯಾನಕ ರಾಕೆಟ್‌ ದಾಳಿ ನಡೆಸಿದ ಹಮಾಸ್ ಮೇಲೆ ಪ್ರತಿದಾಳಿ ನಡೆಸಿದ ವೀಡಿಯೊಗಳನ್ನು ಹಂಚಿಕೊಂಡ ಇಸ್ರೇಲ್

ನಿನ್ನೆ ತನ್ನ ನಗರಗಳ ಮೇಲೆ ಹಮಾಸ್ ನಡೆಸಿದ ಭಯೋತ್ಪಾದಕ ದಾಳಿಯ ನಂತರ ಇಸ್ರೇಲ್ ತೀವ್ರ ತೆರನಾದ ಪ್ರತ್ಯುತ್ತರ ನೀಡಿದೆ. ಇಸ್ರೇಲಿ ಪಡೆಗಳ ಪ್ರತಿದಾಳಿಯು ಗಾಜಾ ಪಟ್ಟಿಯಲ್ಲಿರುವ ಹಮಾಸ್ ನೆಲೆಗಳು ಹಾಗೂ ಅದರ ಕಚೇರಿಗಳನ್ನು ಗುರಿಯಾಗಿಸಿಕೊಂಡಿದೆ. ರಾಕೆಟ್ ದಾಳಿಗಳು ಮತ್ತು ಪ್ರತಿದಾಳಿಯು ಇಲ್ಲಿಯವರೆಗೆ 700 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದು ವರದಿಯಾಗಿದೆ.
ಇಸ್ರೇಲ್ ರಕ್ಷಣಾ ಪಡೆಗಳು (IDF) ಗಾಜಾದಲ್ಲಿ ಹಮಾಸ್ ವಿರುದ್ಧ “ಕ್ರೂರ ಭಯೋತ್ಪಾದಕ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ” ನಡೆಸಿದ ಕಾರ್ಯಾಚರಣೆಗಳ ವೀಡಿಯೊಗಳನ್ನು X ನಲ್ಲಿ ಹಂಚಿಕೊಂಡಿದೆ.
ವೀಡಿಯೊಗಳು ಹಮಾಸ್-ಸಂಯೋಜಿತ ವಾಹನಗಳು ಮತ್ತು ಅದರ ನೆಲೆಗಳನ್ನು ಗುರಿಯಾಗಿಸಿ ನಡೆಸಿದ ವೈಮಾನಿಕ ದಾಳಿಗಳ ತುಣುಕುಗಳನ್ನು ತೋರಿಸುತ್ತವೆ.
“ಶನಿವಾರ 12 ಗಂಟೆಯಿಂದ, ಇಸ್ರೇಲ್ ವಿರುದ್ಧ ಹಮಾಸ್ ನಡೆಸಿದ ಕ್ರೂರ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ, ಇಸ್ರೇಲಿ ರಕ್ಷಣಾ ಪಡೆಗಳು (IDF) ಗಾಜಾದಲ್ಲಿ ಈ ಕೆಳಗಿನ ಕಾರ್ಯಾಚರಣೆಯ ಚಟುವಟಿಕೆಗಳನ್ನು ನಡೆಸಿತು” ಎಂದು ಐಡಿಎಫ್‌ (IDF) ಪೋಸ್ಟ್‌ನಲ್ಲಿ ತಿಳಿಸಿದೆ.

ನಂತರದ ಥ್ರೆಡ್‌ನಲ್ಲಿ, ಇದು ಗಾಜಾ ಸ್ಟ್ರಿಪ್‌ನಲ್ಲಿ ರಾತ್ರಿಯ ದಾಳಿಗಳನ್ನು ಒಳಗೊಂಡ ದೃಶ್ಯಗಳನ್ನು ಹಂಚಿಕೊಂಡಿದೆ.
ಐಡಿಎಫ್ ವಿಮಾನವು ಹಮಾಸ್‌ ಗುಪ್ತ ಉಡಾವಣಾ ತಾಣವನ್ನು ಹೊಡೆದು ಅದರ ಸಮೀಪ ಹಮಾಸ್‌ ಪಡೆಗಳನ್ನು ಗುರಿಯಾಗಿಸಿಕೊಂಡಿದೆ. ಸಮುದ್ರದಿಂದ ಮತ್ತು ಭದ್ರತಾ ಬೇಲಿ ಮೂಲಕ ಇಸ್ರೇಲ್ ಭೂಪ್ರದೇಶಕ್ಕೆ ನುಸುಳಲು ಪ್ರಯತ್ನಿಸುತ್ತಿರುವ ಭಯೋತ್ಪಾದಕರನ್ನು IDF ತನ್ನ ವಿಮಾನದಿಂದ ಹೊಡೆದುರಳಿಸಿದೆ. ನಾವು ಹಮಾಸ್ ರಾಕೆಟ್ ಸಿಸ್ಟಮ್ ಆಪರೇಟಿವ್‌ಗಳ ಕಾರ್ಯಾಚರಣಾ ಕಮಾಂಡ್ ಸೆಂಟರ್ ಅನ್ನು ಸಹ ನಾಶ ಮಾಡಿದ್ದೇವೆ. ಇಸ್ಲಾಮಿಕ್ ಜಿಹಾದ್ ಭಯೋತ್ಪಾದಕ ಸಂಘಟನೆಗೆ ಸೇರಿದ ಕಾರ್ಯಾಚರಣಾ ಕಮಾಂಡ್ ಪೋಸ್ಟ್ ನಾಶ ಮಾಡಿದ್ದೇವೆ” ಎಂದು ಇಸ್ರೇಲಿನ ಐಡಿಎಫ್ ಪೋಸ್ಟ್ ಮಾಡಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಇಂಟರ್ನೆಟ್ ನಲ್ಲಿ ಭಾರೀ ಗಮನ ಸೆಳೆದ ರೋಬೋಟ್ ನಾಯಿ ಡ್ಯಾನ್ಸ್‌ ಮಾಡುವ ವೀಡಿಯೊ

ಹಮಾಸ್ ನಿನ್ನೆ 20 ನಿಮಿಷಗಳಲ್ಲಿ ಸುಮಾರು 5,000 ರಾಕೆಟ್‌ಗಳಿಂದ ಇಸ್ರೇಲ್ ವಸತಿ ಪ್ರದೇಶಗಳ ಮೇಲೆ ದಾಳಿ ನಡೆಸಿದೆ. ಇಸ್ರೇಲ್‌ನ ಅಸಾಧಾರಣ ವೈಮಾನಿಕ ರಕ್ಷಣಾ ವ್ಯವಸ್ಥೆಯಾದ ಐರನ್ ಡೋಮ್ ಅನ್ನು ತಪ್ಪಿಸಿ ಹಮಾಸ್‌ ಆಕ್ರಮಣ ನಡೆಸಿತು. ಹಮಾಸ್ ಹೋರಾಟಗಾರರು ಸಮುದ್ರ ಮತ್ತು ಭೂಮಿ ಮೂಲಕ ಇಸ್ರೇಲ್ ಅನ್ನು ಪ್ರವೇಶಿಸಿದರು, ನಾಗರಿಕರ ಮೇಲೆ ದಾಳಿ ಮಾಡಿದರು ಹಾಗೂ ಅವರನ್ನು ಅಪಹರಿಸಿದರು.
ಘಟನೆ ನಡೆದ ನಂತರ, ಪ್ರಧಾನಿ ಬೆಂಜಮಿನ್ ನೆತನ್ಯಾಹು ದೇಶವು “ಯುದ್ಧದಲ್ಲಿದೆ” ಮತ್ತು “ಶತ್ರುಗಳು ಭಾರೀ ಬೆಲೆ ತೆರಬೇಕಾಗುತ್ತದೆ” ಎಂದು ಹೇಳಿದ್ದರು.

ಮತ್ತೊಂದು ಪೋಸ್ಟ್‌ನಲ್ಲಿ, ಇಸ್ರೇಲಿ ಪಡೆಗಳು ಅದರ ಗುಪ್ತಚರ ಪ್ರಧಾನ ಕಚೇರಿ ಮತ್ತು ಅದರ ವೈಮಾನಿಕ ಪಡೆಗಳು ಬಳಸುವ ಮಿಲಿಟರಿ ಕಾಂಪೊಸಿಟ್‌ ಸೇರಿದಂತೆ 10 ಹಮಾಸ್ ನೆಲೆಗಳನ್ನು ನಾಶಗೊಳಿಸಿದೆ ಎಂದು ಹೇಳಿದೆ.
ಸಮಾನಾಂತರವಾಗಿ, ನಾವು ಇಸ್ಲಾಮಿಕ್ ಜಿಹಾದ್‌ಗೆ ಸೇರಿದ ವೈಮಾನಿಕ ಪಡೆಗಳು ಬಳಸುವ ವೈಮಾನಿಕ ಶಸ್ತ್ರಾಸ್ತ್ರಗಳ ಉತ್ಪಾದನಾ ಸ್ಥಳ ಮತ್ತು ಭಯೋತ್ಪಾದಕ ಸಂಘಟನೆಯು ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ಉಪಕರಣಗಳನ್ನು ಸಂಗ್ರಹಿಸುವ ಘಟಕಗಳನ್ನು ಒಳಗೊಂಡ ಕಟ್ಟಡವನ್ನು ನಾಶ ಮಾಡಿದ್ದೇವೆ” ಎಂದು ಐಡಿಎಫ್ ಹೇಳಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಇಂಟರ್ನೆಟ್ ನಲ್ಲಿ ಭಾರೀ ಗಮನ ಸೆಳೆದ ರೋಬೋಟ್ ನಾಯಿ ಡ್ಯಾನ್ಸ್‌ ಮಾಡುವ ವೀಡಿಯೊ

ಹಮಾಸ್ ದಾಳಿಗಳು, ವಿಶೇಷವಾಗಿ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆದಿದ್ದು, ಜಾಗತಿಕವಾಗಿ ತೀವ್ರ ಖಂಡನೆಗೆ ಗುರಿಯಾಗಿದೆ. ಪಶ್ಚಿಮವು ಟೆಲ್ ಅವಿವ್‌ಗೆ ಬೆಂಬಲವನ್ನು ವ್ಯಕ್ತಪಡಿಸಿದೆ. ಪಶ್ಚಿಮ ಏಷ್ಯಾ ಪ್ರದೇಶದಲ್ಲಿ, ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿರುವ ಹಲವಾರು ದೇಶಗಳು ಎರಡೂ ಕಡೆಯವರಿಗೆ ಸಂಯಮಕ್ಕೆ ಕರೆ ನೀಡಿವೆ. ಕೆಲ ದೇಶಗಳು ಪ್ಯಾಲೆಸ್ತೀನ್‌ಗೆ ಬೆಂಬಲ ನೀಡಿವೆ ಮತ್ತು ನಿನ್ನೆಯ ದಾಳಿಗಳು ಇಸ್ರೇಲ್‌ನ “ಹಿಂಸಾತ್ಮಕ ಮತ್ತು ಉಗ್ರಗಾಮಿ ನೀತಿಗಳ” ಪರಿಣಾಮವಾಗಿದೆ ಎಂದು ಆ ದೇಶಗಳು ಹೇಳಿವೆ.
ಶನಿವಾರದ ದಾಳಿಯ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು “ಇಸ್ರೇಲ್‌ನಲ್ಲಿ ಭಯೋತ್ಪಾದಕ ದಾಳಿಯ ಸುದ್ದಿಯಿಂದ ತೀವ್ರ ಆಘಾತಕ್ಕೊಳಗಾಗಿದ್ದೇವೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಈ ಕಷ್ಟದ ಸಮಯದಲ್ಲಿ ನಾವು ಇಸ್ರೇಲ್‌ನೊಂದಿಗೆ ನಿಲ್ಲುತ್ತೇವೆ” ಎಂದು ಅವರು ಹೇಳಿದ್ದಾರೆ.

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement