ವೀಡಿಯೊ…| ಮಾರಣಾಂತಿಕ ಗಾಜಾ ಬಾಂಬ್ ದಾಳಿ ನಂತರ ಇಸ್ರೇಲಿನ ವೈಮಾನಿಕ ದಾಳಿಯಲ್ಲಿ ಹಮಾಸ್ ಕಚೇರಿಯಿದ್ದ ಪ್ಯಾಲೆಸ್ತೀನ್ ಟವರ್ ನೆಲಸಮ

ಇಸ್ರೇಲಿ ವೈಮಾನಿಕ ದಾಳಿಯು ಶನಿವಾರ ಹಮಾಸ್ ಕಚೇರಿಗಳನ್ನು ಹೊಂದಿರುವ ಬಹುಮಹಡಿ ಕಟ್ಟಡವನ್ನು ನೆಲಸಮಗೊಳಿಸಿತು. ಹಮಾಸ್ ಭಯೋತ್ಪಾದಕರು ಮುಂಜಾನೆ ಹಠಾತ್ ದಾಳಿಯಲ್ಲಿ ಸಾವಿರಾರು ರಾಕೆಟ್‌ಗಳನ್ನು ಉಡಾಯಿಸಿದರು. ಹಾಗೂ ಗಾಜಾ ಪಟ್ಟಿಯ ಸಮೀಪವಿರುವ ಇಸ್ರೇಲಿ ಪಟ್ಟಣಗಳಿಗೆ ಡಜನ್ಗಟ್ಟಲೆ ಹೋರಾಟಗಾರರನ್ನು ನುಗ್ಗಿಸಿ ಹಲವಾರು ಜನರನ್ನು ಕೊಂದ ನಂತರ ಇಸ್ರೇಲ್‌ ಪ್ತೀಕಾರವಾಗಿ ವೈಮಾನಿಕ ದಾಳಿ ನಡೆಸಿತು.
ಇಸ್ರೇಲಿ ವಾಯುಪಡೆಯು ಬಹುಮಡಿಗಳ ಎತ್ತರದ ಕಟ್ಟಡಗಳ ಒಳಗೆ ಭಯೋತ್ಪಾದಕ ಸಂಘಟನೆ ಹಮಾಸ್‌ನ ಹಿರಿಯ ಸದಸ್ಯರ ಎರಡು ಮಿಲಿಟರಿ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿದೆ.
ವರದಿಗಳ ಪ್ರಕಾರ, ಭಯೋತ್ಪಾದಕ ಸಂಘಟನೆ ಹಮಾಸ್‌ನ ಹಿರಿಯ ಸದಸ್ಯರು ಭಯೋತ್ಪಾದಕ ಕಾರ್ಯಾಚರಣೆಗಳನ್ನು ಯೋಜಿಸಲು ಮತ್ತು ನಿರ್ವಹಿಸಲು ಈ ಕಟ್ಟಡದಲ್ಲಿ ನೆಲೆಸಿದ್ದರು.
ಶನಿವಾರ ಮುಂಜಾನೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ಯಾಲೆಸ್ತೀನ್ ಭಯೋತ್ಪಾದಕ ಗುಂಪು ಹಮಾಸ್‌ನೊಂದಿಗೆ ಇಸ್ರೇಲ್‌ ಯುದ್ಧದಲ್ಲಿದೆ ಎಂದು ಹೇಳಿದರು.”ನಾವು ಯುದ್ಧದಲ್ಲಿದ್ದೇವೆ” ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶನಿವಾರ ದೂರದರ್ಶನದ ಭಾಷಣದಲ್ಲಿ ಹೇಳಿದರು

. “ಇದು ಕಾರ್ಯಾಚರಣೆಯಲ್ಲ,’ ಒಂದು ಸುತ್ತಿನದಲ್ಲ,’ ಇದು ಯದ್ಧ ” ಎಂದು ಅವರು ಹೇಳಿದ್ದಾರೆ. “ಇಸ್ರೇಲ್‌ ಜನರ ಮೇಲೆ ದಾಳಿ ನಡೆಸಿದ ಶತ್ರುಗಳು ಇದಕ್ಕಾಗಿ ಭಾರೀ ಬೆಲೆ ತೆರಲಿದ್ದಾರೆ ಎಂದು ಹೇಳಿದ್ದಾರೆ.
ಇಸ್ರೇಲ್‌ನ ಪ್ರತೀಕಾರದಲ್ಲಿ ಗಾಜಾ ಪಟ್ಟಿಯಲ್ಲಿ ಕನಿಷ್ಠ 198 ಜನರು ಸಾವಿಗೀಡಾಗಿದ್ದಾರೆ ಮತ್ತು ಕನಿಷ್ಠ 1,610 ಜನರು ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದಕ್ಕೂ ಮೊದಲು ಹಮಾಸ್ ದಾಳಿಯನ್ನು ಪ್ರಾರಂಭಿಸಿ ಸಾವಿರಾರು ರಾಕೆಟ್‌ಗಳನ್ನು ಇಸ್ರೇಲ್ ಕಡೆಗೆ ಹಾರಿಸಿದ ನಂತರ ಸುಮಾರು ಇಸ್ರೇಲಿನ 70 ಜನರು ಸಾವಿಗೀಡಾಗಿದ್ದಾರೆ. ರಾಕೆಟ್‌ಗಳ ಸುರಿಮಳೆ ನಡೆಸಿದ ಹಮಾಸ್‌ ಉಗ್ರರ ಗುಂಪಿನ ಡಜನ್‌ಗಟ್ಟಲೆ ಹಮಾಸ್ ಉಗ್ರಗಾಮಿಗಳು ಗಾಜಾ ಪಟ್ಟಿಯಿಂದ ಹತ್ತಿರದ ಇಸ್ರೇಲಿ ಪಟ್ಟಣಗಳಿಗೆ ನುಗ್ಗಿದರು, ಪ್ರಮುಖ ಯಹೂದಿಗಳ ರಜಾದಿನವಾದ ಶನಿವಾರ ರಜಾಮೂಡ್‌ನಲ್ಲಿದ್ದವರಿಗೆ ಶನಿವಾರ ಈ ದಾಳಿ ಅನಿರೀಕ್ಷಿತವಾಗಿತ್ತು. ಮುಂಜಾನೆ ದಾಳಿಯಲ್ಲಿ ಡಜನ್‌ಗಟ್ಟಲೆ ಜನರನ್ನು ಕೊಂದ ಹಮಾಸ್‌ ಉಗ್ರರು ಕೆಲವರನ್ನು ಅಪಹರಿಸಿದರು.

ಗಾಜಾದ ಗಡಿಯಿಂದ 15 ಮೈಲುಗಳಷ್ಟು (24 ಕಿಲೋಮೀಟರ್) ದೂರದಲ್ಲಿರುವ ಪಟ್ಟಣಗಳು ಮತ್ತು ಸಮುದಾಯದ ಸ್ಥಳಗಳಿಗೆ ಹಾಗೂ ಗಾಜಾ ಪಟ್ಟಿಯ ಹೊರಗಿನ 22 ಸ್ಥಳಗಳಿಗೆ ಹಮಾಸ್ ಬಂದೂಕುಧಾರಿಗಳು ನುಗ್ಗಿದರು. ಕೆಲವು ಸ್ಥಳಗಳಲ್ಲಿ, ಅವರು ಗಂಟೆಗಳ ಕಾಲ ತಿರುಗಾಡಿದರು, ನಾಗರಿಕರನ್ನು ಗುಂಡಿಕ್ಕಿ ಕೊಂದರು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್‌ ಈಗ ಗಾಜಾಪಟ್ಟಿಯಲ್ಲಿ ಹಮಾಸ್‌ ಮೇಲೆ ದಾಳಿ ನಡೆಸುತ್ತಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement