ನವದೆಹಲಿ : ಇಸ್ರೇಲ್ ಹಾಗೂ ಪ್ಯಾಲೆಸ್ತೀನ್‌ನ ಹಮಾಸ್ ಉಗ್ರರ ನಡುವಿನ ಸಮರದಿಂದಾಗಿ ಇಸ್ರೇಲಿನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಕರೆತರಲು ಕೇಂದ್ರ ಸರ್ಕಾರವು ‘ಆಪರೇಷನ್ ಅಜಯ’ ಆರಂಭಿಸಿದೆ.
ಈ ಕಾರ್ಯಾಚರಣೆಯ ಮೊದಲ ಭಾಗವಾಗಿ ಇಂದು ಗುರುವಾರ ರಾತ್ರಿಯೇ ಭಾರತೀಯರನ್ನು ಹೊತ್ತ ಮೊದಲ ವಿಮಾನ ಭಾರತಕ್ಕೆ ಬರಲಿದೆ ಎಂದು ವಿದೇಶಾಂಗ ಸಚಿವಾಲಯದ ಅರಿಂದಮ್ ಭಾಗ್ಚಿ ತಿಳಿಸಿದ್ದಾರೆ. 230 ಭಾರತೀಯರು ಇಂದು ರಾತ್ರಿ ಭಾರತಕ್ಕೆ ಬರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ವಿಮಾನವು ಇಸ್ರೇಲ್‌ನಿಂದ ರಾತ್ರಿ 9 ಗಂಟೆಗೆ ಹೊರಡಲಿದ್ದು, ಪ್ರಯಾಣಿಕರಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ. ಸಂತ್ರಸ್ತರ ಎಲ್ಲ ವೆಚ್ಚವನ್ನು ಭಾರತ ಸರ್ಕಾರವೇ ಭರಿಸಲಿದೆ. ಇಸ್ರೇಲ್ ನಲ್ಲಿ ರಾಯಭಾರಿ ಕಚೇರಿ ಮೊದಲ ವಿಮಾನದಲ್ಲಿ ಸ್ವದೇಶಕ್ಕೆ ಮರಳಲು ಬಯಸುವವರ ವಿವರ ಸಂಗ್ರಹಿಸಿದ್ದು, ಅವರಿಗೆ ಈಗಾಗಲೇ ವಿಮಾನದ ವಿವರಗಳನ್ನು ಹಂಚಿಕೊಳ್ಳಲಾಗಿದೆ.
ಭಾರತವು ಅಕ್ಟೋಬರ್ 7ರಿಂದ ಇಸ್ರೇಲ್ ಗೆ ಎಲ್ಲ ವಿಮಾನ ಹಾರಾಟಗಳನ್ನೂ ಸ್ಥಗಿತಗೊಳಿಸಿತ್ತು. 230 ಭಾರತೀಯರು ಇಂದು ರಾತ್ರಿ ಭಾರತಕ್ಕೆ ಬರಲಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ