ಶಿರಸಿ : ಬಸ್ ಗಳ ನಡುವೆ ಡಿಕ್ಕಿ ; 13 ಜನರಿಗೆ ಗಾಯ

ಶಿರಸಿ: ಸಾರಿಗೆ ಸಂಸ್ಥೆಯ ಬಸ್ ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಚಾಲಕ-ನಿರ್ವಾಹಕ ಸೇರಿ 13 ಜನರು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಇಸಳೂರು ಸಮೀಪ ಭಾನುವಾರ ಬೆಳಿಗ್ಗೆ ಸಂಭವಿಸಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿರಸಿಯಿಂದ ಅಕ್ಕಿ ಆಲೂರು ಕಡೆಗೆ ಹೊರಟಿದ್ದ ಸಾರಿಗೆ ಸಂಸ್ಥೆ ಬಸ್‌ ಹಾಗೂ ಶಿರಸಿ ಕಡೆಗೆ ಬರುತ್ತಿದ್ದ ಖಾಸಗಿ ಬಸ್‌ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಎರಡೂ ಬಸ್ಸಿನ ಮುಂಭಾಗ ನುಜ್ಜುಗುಜ್ಜಾಗಿದೆ.
ಶಿರಸಿ ಡಿಪೋದ ಚಾಲಕ-ನಿರ್ವಾಹಕ ಮಹಮ್ಮದ್ ಸಲೀಂ ಮೆಹಬೂಬ ಸಾಬ್ ಮುಲ್ಲಾ (40), ಚಾಲಕ ಡೇವಿಡ್ ರಾಜಶೇಖರ ಮಧುರೈ (43),ಪ್ರಯಾಣಿಕರಾದ ಸೊರಬ ತಾಲೂಕಿನ ಹಂಚಿಯ ಕಾಂತಾ ಚಂದ್ರ ನಾಯ್ಕ(37), ಸೊರಬ ತಾಲೂಕಿನ ಸುರಂಗಿಯ ನಾಗಮ್ಮ ಸಂಜೀವಪ್ಪ ವಾಲಿಕರ (60), ಸೊರಬ ತಾಲೂಕಿನ ದೇವಿಕೆರೆಯ ಚೌಡಮ್ಮ ರಮೇಶ ಗುಜಲೂರ(50), ಸೊರಬದ ದೇವಿಕೆರೆಯ ಮಹಾಲಕ್ಷ್ಮೀ ಕೊಬ್ರೇಶ ಗುಜಲೂರ(3), ಹಾವೇರಿಯ ಶಿವಬಸವನಗರದ ನಿವಾಸಿಗಳಾದ ಸುಮಿತ್ರಾ ಗುರುಶಾಂತಪ್ಪ ರಿಕ್ತಿ(41), ಪುಷ್ಪಾ ಜಗದೀಶ ಬೈಲಪ್ಪನವರ(38), ಹಾವೇರಿ ಅಲಲಿಪುರದ ವಿದ್ಯಾರ್ಥಿ ಅಪ್ಪು ಮಂಜಪ್ಪ ದೋಣೆ(21), ಹಾವೇರಿಯ ಶಿವಬಸನಗರದ ವಿದ್ಯಾರ್ಥಿನಿ ಸಂಜನಾ ಜಗದೀಶ ಬೈಲಪ್ಪನವರ(15), ಗುಲ್ಬರ್ಗಾ ಜಿಲ್ಲೆಯ ಆಳಂದ ತಾಲೂಕಿನ ಜಗದೀಶ ಚಂದ್ರಯ್ಯ ಹಿರೇಮಠ(34), ಮೈಸೂರ ಜಿಲ್ಲೆಯ ಕುಕರಳ್ಳಿಯ ಶೀತಲ ಶಿವಕುಮಾರ ನಾಗೆ(37) ಹಾಗೂ ಬೆಂಗಳೂರಿನ ವೈಟ್‌ಪೀಲ್ಡ್‌ನ ಚಂದ್ರಪ್ರಭಾ ವೆಂಕಟ ಯಗಂದರ(48) ಗಾಯಗೊಂಡವರು ಎಂದು ಗುರುತಿಸಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ಸುರಪುರದ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement