4 ವರ್ಷಗಳ ನಂತರ ಪಾಕಿಸ್ತಾನಕ್ಕೆ ಬಂದಿಳಿದ ಮಾಜಿ ಪ್ರಧಾನಿ ನವಾಜ್ ಷರೀಫ್

ಇಸ್ಲಾಮಾಬಾದ್‌ : ಪಾಕಿಸ್ತಾನದಲ್ಲಿ ಮೂರು ಬಾರಿ ಪ್ರಧಾನಿಯಾಗಿದ್ದ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಪಕ್ಷದ ಮುಖ್ಯಸ್ಥ ನವಾಜ್ ಷರೀಫ್, ನಾಲ್ಕು ವರ್ಷಗಳ ನಂತರ ತಾಯ್ನಾಡಿಗೆ ಬಂದಿದ್ದಾರೆ.
ಜನವರಿ 2024 ರಲ್ಲಿ ನಡೆಯಲಿರುವ ಪಾಕ್ ಸಂಸತ್ತಿನ ಚುನಾವಣೆಗೆ ಮುಂಚಿತವಾಗಿ ತನ್ನ ಪಕ್ಷದ ಪ್ರಚಾರವನ್ನು ಪ್ರಾರಂಭಿಸಲು ನವಾಜ್‌ ಷರೀಫ್‌ ಶನಿವಾರ ದೇಶಕ್ಕೆ ಮರಳಿರುವುದು ಪಾಕ್ ರಾಜಕೀಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ದೇಶದಿಂದ ಗಡೀಪಾರಾದ ನಂತರ ನವಾಜ್ ಷರೀಫ್ ಲಂಡನ್‌ನಲ್ಲಿ ನಾಲ್ಕು ವರ್ಷಗಳ ಕಳೆದಿದ್ದಾರೆ. ಅವರು ಶನಿವಾರ ‘ಉಮೀದ್-ಎ-ಪಾಕಿಸ್ತಾನ’ ಚಾರ್ಟರ್ಡ್ ವಿಮಾನದಲ್ಲಿ ಇಸ್ಲಾಮಾಬಾದ್‌ಗೆ ಬಂದಿಳಿದಿದ್ದಾರೆ.
ಮಾಜಿ ಪ್ರಧಾನಿಗೆ ಅದ್ಧೂರಿ ಸ್ವಾಗತಕ್ಕೆ ಪಿಎಂಎಲ್-ಎನ್ ಪಕ್ಷ ಸಿದ್ಧತೆ ನಡೆಸಿದೆ. ಪಕ್ಷದ ಮಹಾಶಕ್ತಿ ಪ್ರದರ್ಶನಕ್ಕಾಗಿ ಹಲವಾರು ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಪಾಕಿಸ್ತಾನದಾದ್ಯಂತ ಲಾಹೋರ್‌ಗೆ ತೆರಳುತ್ತಿದ್ದಾರೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವಾಗ ವೈದ್ಯಕೀಯ ಚಿಕಿತ್ಸೆ ಪಡೆಯಲು ನವಾಜ್‌ ಷರೀಫ್‌ 2019ರಲ್ಲಿ ಪಾಕಿಸ್ತಾನದಿಂದ ಲಂಡನ್‌ಗೆ ತೆರಳಿದ್ದರು. ಪಾಕಿಸ್ತಾನದಲ್ಲಿ ಪ್ರಸ್ತುತ ರಾಜಕೀಯ ಪ್ರಕ್ಷುಬ್ಧತೆ ಮತ್ತು ಚುನಾಔಣೆ ಹೊಸ್ತಿಲಲ್ಲಿ ಅವರ ಮರಳುವಿಕೆ ರಾಜಕೀಯವಾಗಿ ಪ್ರಾಮುಖ್ಯತೆ ಪಡೆದುಕೊಂಡಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement