ಬೆಂಗಳೂರು : ಬೆಂಗಳೂರು ನಗರದ ಹೊರವಲಯದ ಸರ್ಜಾಪುರದ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು, ರಸ್ತೆ ಬದಿ ನಿಂತಿದ್ದ ಬಿಎಂಡಬ್ಲ್ಯೂ ಕಾರಿನ ಗಾಜು ಒಡೆದು ಸುಮಾರು ₹13.75 ಲಕ್ಷ ರೂ.ಗಳನ್ನು ಕದ್ದು ಪರಾರಿಯಾಗಿದ್ದಾರೆ.
ಸರ್ಜಾಪುರದ ಬಳಿಯ ಸೋಂಪುರದ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಆರೋಪಿಗಳು ನಡೆಸಿದ ಕೃತ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಒಬ್ಬ ಆರೋಪಿ ಬೈಕ್‌ನಲ್ಲಿ ಕಾಯುತ್ತಿದ್ದಾನೆ. ಆತನ ಸಹಚರ ಆಚೆಈಚೆ ನೋಡುತ್ತ ಬಿಎಂಡಬ್ಲ್ಯೂ ಕಾರಿನ ಚಾಲಕನ ಪಕ್ಕದ ಕಿಟಕಿಯನ್ನು ಒಡೆದು ಹಣವನ್ನು ತೆಗೆದುಕೊಂಡಿದ್ದಾನೆ. ಬಳಿಕ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ಐಷಾರಾಮಿ ಕಾರು ಆನೇಕಲ್ ಕಸಬಾ ಮೂಲದ ಮೋಹನ ಬಾಬು(36) ಎಂಬುವರಿಗೆ ಸೇರಿದ್ದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳು ಒಂದು ಕೋಟಿಗೂ ಹೆಚ್ಚು ಬೆಲೆಯ BMW X5 ಸೆಡಾನ್ ಕಾರಿನ ಬಳಿ ಇಬ್ಬರು ಮುಸುಕುಧಾರಿಗಳನ್ನು ತೋರಿಸುತ್ತವೆ. ಜನರು ತಮ್ಮನ್ನು ಗುರುತಿಸುವುದರಿಂದ ತಪ್ಪಿಸಿಕೊಳ್ಳಲು ಇಬ್ಬರೂ ಮುಖವಾಡಗಳನ್ನು ಧರಿಸಿರುವುದು ಕಂಡುಬರುತ್ತದೆ. ಒಬ್ಬಾತ ಬೈಕಿನಲ್ಲಿದ್ದರೆ ಮತ್ತೊಬ್ಬ ಸುತ್ತಲೂ ನೋಡುತ್ತಿದ್ದಾನೆ.
ನಂತರ ಆತ ಕಾರಿನ ಗಾಜನ್ನು ಒಡೆದು ಹಾಕಲು ಉಪಕರಣವನ್ನು ಬಳಸುತ್ತಾನೆ. ನಂತರ ಆ ಮನುಷ್ಯನು ಕಿಟಕಿಯ ಮೂಲಕ ತನ್ನ ಕಾಲುಗಳು ಮಾತ್ರ ಗೋಚರಿಸುವ ಹಂತಕ್ಕೆ ಒಡೆದ ಗಾಜಿನ ಕಿಟಕಿ ಮೂಲಕ ಒಳಗೆ ಹೋಗುತ್ತಾನೆ. ಆತ ಶೀಘ್ರದಲ್ಲೇ ಕಾರಿನಿಂದ ಹೊರಬರುತ್ತಾನೆ, ಅವನ ಕೈಯಲ್ಲಿ ಬ್ಯಾಗಲನ್ನು ನೋಡಬಹುದಾಗಿದೆ. ಬೈಕ್ ಹತ್ತಿ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ಕಳ್ಳತನ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಮೋಹನ ಬಾಬು ಮತ್ತು ಅವರ ಸಂಬಂಧಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿ ಗಿರಿಯಾಸ್ ಔಟ್‌ಲೆಟ್ ಬಳಿ ಮಧ್ಯಾಹ್ನ 1:30 ರ ಸುಮಾರಿಗೆ ಕಾರನ್ನು ನಿಲ್ಲಿಸಿದ್ದಾರೆ. ಮಧ್ಯಾಹ್ನ 2:30ಕ್ಕೆ ವಾಪಸ್ ಬಂದು ನೋಡಿದಾಗ ಕಾರಿನ ಗಾಜು ಒಡೆದಿತ್ತು ಹಾಗೂ ಬ್ಯಾಗ್‌ನಲ್ಲಿ ಇಟ್ಟಿದ್ದ ಹಣ ನಾಪತ್ತೆಯಾಗಿತ್ತು. ನಂತರ ಸರ್ಜಾಪುರ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು. ದೂರಿನ ಮೇರೆಗೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ