ಭಾರತೀಯ ಕ್ರಿಕೆಟ್ ದಿಗ್ಗಜ ಬಿಶನ್ ಸಿಂಗ್ ಬೇಡಿ ನಿಧನ

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಂತ್ರಿಕ ಎಡಗೈ ಸ್ಪಿನ್ನರ್‌ ಬಿಶೆನ್ ಸಿಂಗ್ ಬೇಡಿ (77) ಅವರು ಇಂದು, ಸೋಮವಾರ ನಿಧನರಾಗಿದ್ದಾರೆ.
ಬಿಶನ್ ಸಿಂಗ್ ಬೇಡಿ 22 ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವವನ್ನೂ ವಹಿಸಿದ್ದರು. ಬೇಡಿ ಅವರು 1967 ರಿಂದ 1979 ರವರೆಗೆ ಭಾರತದ ಪರವಾಗಿ ಆಡಿದ್ದರು. ಅವರು 67 ಟೆಸ್ಟ್‌ಗಳಲ್ಲಿ 266 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೂ 10 ಏಕ ದಿನದ ಪಂದ್ಯಗಳಲ್ಲಿ ಒಟ್ಟು 7 ವಿಕೆಟ್‌ ಗಳನ್ನು ಪಡೆದಿದ್ದಾರೆ. ಅವರನ್ನು ಭಾರತದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಬಿಶನ್‌ ಸಿಂಗ್‌ ಬೇಡಿ ಅವರು ಭಾರತದ ಸ್ಪಿನ್ ಬೌಲಿಂಗ್ ಕ್ರಾಂತಿಯ ವಾಸ್ತುಶಿಲ್ಪಿಗಳಲ್ಲಿ ಒಬ್ಬರು. ಅವರು ಎರಪಳ್ಳಿ ಪ್ರಸನ್ನ, ಬಿ.ಎಸ್. ಚಂದ್ರಶೇಖರ ಮತ್ತು ಎಸ್. ವೆಂಕಟರಾಘವನ್ ಅವರೊಂದಿಗೆ ಭಾರತದ ಸ್ಪಿನ್‌ ವಿಖ್ಯಾತಗೊಳಿಸಿದವರಲ್ಲಿ ಪ್ರಮುಖರಾಗಿದ್ದರು.

ಅವರು ಭಾರತದ ಮೊದಲ ಏಕದಿನದ ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬೇಡಿಯವರ 12-8-6-1 ಬೌಲಿಂಗ್‌ ಅಂಕಿಅಂಶಗಳು 1975 ರ ವಿಶ್ವಕಪ್‌ನಲ್ಲಿ ಪೂರ್ವ ಆಫ್ರಿಕಾವನ್ನು 120 ರನ್‌ಗಳಿಗೆ ಆಲೌಟ್‌ ಮಾಡಿತ್ತು.
ದೇಶೀಯ ಕ್ರಿಕೆಟ್‌ನಲ್ಲಿ, ಬೇಡಿ ಪ್ರಾಥಮಿಕವಾಗಿ ದೆಹಲಿ ತಂಡದಲ್ಲಿ ಅವರು ಆಡಿದ್ದರು. ನಿವೃತ್ತಿಯ ನಂತರ, ಅವರು ಹಲವಾರು ಉದಯೋನ್ಮುಖ ಭಾರತೀಯ ಕ್ರಿಕೆಟಿಗರಿಗೆ ಕೋಚ್ ಮತ್ತು ಮಾರ್ಗದರ್ಶಕರಾಗಿ ಕೆಲಸ ಮಾಡಿದರು. ಅವರು ಕಾಮೆಂಟೇಟರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾದ ತಮಿಳುನಾಡಿನ ಶಾಸಕಿ...!

1990ರಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳ ಸಮಯದಲ್ಲಿ ಬೇಡಿ ಸಂಕ್ಷಿಪ್ತವಾಗಿ ಭಾರತೀಯ ಕ್ರಿಕೆಟ್ ತಂಡದ ವ್ಯವಸ್ಥಾಪಕರಾಗಿದ್ದರು. ಅವರು ಮಣಿಂದರ್ ಸಿಂಗ್ ಮತ್ತು ಮುರಳಿ ಕಾರ್ತಿಕ್ ಅವರಂತಹ ಅನೇಕ ಪ್ರತಿಭಾವಂತ ಸ್ಪಿನ್ನರ್‌ಗಳಿಗೆ ರಾಷ್ಟ್ರೀಯ ಆಯ್ಕೆಗಾರ ಮತ್ತು ಮಾರ್ಗದರ್ಶಕರಾಗಿದ್ದರು. ಬೇಡಿ ಅವರು ತಮ್ಮ ಪುತ್ರ ಮತ್ತು ಬಾಲಿವುಡ್ ನಟ ಅಂಗದ್ ಬೇಡಿ ಅವರನ್ನು ಅಗಲಿದ್ದಾರೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement