ಟಿವಿ ಶೋ ನೇರ ಪ್ರಸಾರದ ವೇಳೆ ಬಿಜೆಪಿ ಅಭ್ಯರ್ಥಿ ಕತ್ತು ಹಿಸುಕಿದ ಬಿಆರ್‌ಎಸ್ ಶಾಸಕ | ವೀಕ್ಷಿಸಿ

ಚುನಾವಣಾ ಕಣಕ್ಕಿಳಿದಿರುವ ತೆಲಂಗಾಣದಲ್ಲಿ ರಾಜಕೀಯ ತಾಪಮಾನ ತಾರಕಕ್ಕೇರುತ್ತಿದೆ. ಪ್ರತಿಸ್ಪರ್ಧಿ ರಾಜಕೀಯ ಬಿರುಸಿನ ವಾತಾವರಣದಲ್ಲಿ ಕೆಲ ಕೊಳಕು ಘಟನೆಗಳೂ ರಾಜ್ಯದಲ್ಲಿ ನಡೆಯುತ್ತಿವೆ. ತಾಜಾ ಘಟನೆಯೊಂದರಲ್ಲಿ, ತೆಲುಗು ಸುದ್ದಿ ವಾಹಿನಿಯೊಂದು ಆಯೋಜಿಸಿದ್ದ ಬಹಿರಂಗ ಚರ್ಚೆಯ ಕಾರ್ಯಕ್ರಮದಲ್ಲಿ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಶಾಸಕ ಕೆ.ಪಿ. ವಿವೇಕಾನಂದ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಶ್ರೀಶೈಲಂ ಗೌರ್ ಅವರ ಮೇಲೆ ಏರಿ ಹೋಗಿ ಅವರ ಕುತ್ತಿಗೆ ಅಮುಕಿ ಹಿಡಿದ ಘಟನೆ ನಡೆದಿದೆ.
ಬುಧವಾರ ಲೈವ್ ಡಿಬೇಟ್ ಕಾರ್ಯಕ್ರಮದ ವೇಳೆ ಶಾಸಕರು ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಜೊತೆ ಏಕಾಏಕಿ ಜಗಳವಾಡಿದರು ಮತ್ತು ಲೈವ್ ಟಿವಿಯಲ್ಲಿ ಅವರ ಕುತ್ತಿಗೆ ಅಮುಕಿ ಹಿಡಿದರು. ಕಾರ್ಯಕ್ರಮದ ವೇಳೆ ಉದ್ವಿಗ್ನತೆ ಹೆಚ್ಚಾದಾಗ ಪೊಲೀಸರು ಮತ್ತು ಇತರರು ಮಧ್ಯಪ್ರವೇಶಿಸಿ ಇಬ್ಬರನ್ನು ಬೇರ್ಪಡಿಸಿದರು. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತೆಲಂಗಾಣ ವಿಧಾನಸಭಾ ಚುನಾವಣೆಯ ವಿಷಯಗಳ ಕುರಿತು ಚರ್ಚಿಸಲು ಕಾರ್ಯಕ್ರಮ ಆಯೋಜಿಸಲಾಗಿತ್ತು ಆದರೆ ಈ ಜಗಳವು ಟಿವಿ ಕಾರ್ಯಕ್ರಮವನ್ನು ಹಾಳುಮಾಡಿತು. ತೆಲಂಗಾಣದಲ್ಲಿ ನವೆಂಬರ್ 30 ರಂದು ಮತದಾನ ನಡೆಯಲಿದೆ.

ಪ್ರಮುಖ ಸುದ್ದಿ :-   ಮೈಚಾಂಗ್ ಚಂಡಮಾರುತ ತೀವ್ರ : ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ತೀವ್ರ ಮುನ್ನೆಚ್ಚರಿಕೆ

ಆಡಳಿತಾರೂಢ ಬಿಆರ್‌ಎಸ್ ವಿರುದ್ಧ ಬಿಜೆಪಿ ವಾಗ್ದಾಳಿ  
ಘಟನೆಯ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಆಡಳಿತಾರೂಢ ಬಿಆರ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರತಿಪಕ್ಷದ ಅಭ್ಯರ್ಥಿಯ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿರುವುದು ಆಘಾತಕಾರಿಯಾಗಿದೆ, ಬಿಆರ್‌ಎಸ್ ಮತ್ತೆ ಅಧಿಕಾರಕ್ಕೆ ಬಂದರೆ ಏನಾಗುತ್ತದೆ ಎಂದು ಊಹಿಸಬಹುದು ಎಂದು ಹೇಳಿದ್ದಾರೆ.
ಕುತ್ಬುಲ್ಲಾಪುರದ ಬಿಆರ್‌ಎಸ್ ಶಾಸಕ ಕುನಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಮೇಲೆ ಅವರು ಕೇಳಿದ ಪ್ರಶ್ನೆಗೆ ಉತ್ತರವಿರಲಿಲ್ಲ ಎಂಬ ಕಾರಣಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ರೆಡ್ಡಿ ಆರೋಪಿಸಿದ್ದಾರೆ.
ದಾಳಿಯನ್ನು ಹೇಡಿತನದ ಕೃತ್ಯ ಎಂದು ಬಣ್ಣಿಸಿದ ಅವರು ಪೊಲೀಸರು ಬಿಆರ್‌ಎಸ್ ನಾಯಕನ ವಿರುದ್ಧ ಪ್ರಕರಣ ದಾಖಲಿಸಬೇಕು, ಇಲ್ಲದಿದ್ದರೆ ಬಜೆಪಿ ಪಕ್ಷವು ಕಾನೂನು ಹೋರಾಟ ನಡೆಸಲಿದೆ ಎಂದು ಹೇಳಿದ್ದಾರೆ.

ಶಾಸಕರನ್ನು ಸಮರ್ಥಿಸಿಕೊಂಡ ಬಿಆರ್‌ಎಸ್‌
ಲೈವ್ ಡಿಬೇಟ್ ಕಾರ್ಯಕ್ರಮದ ವೇಳೆ ನಡೆದ ಗಲಾಟೆ ಕುರಿತು ಬಿಆರ್‌ಎಸ್ ಅವರನ್ನು ಸಂಪರ್ಕಿಸಿದಾಗ, ಬಿಜೆಪಿ ಅಭ್ಯರ್ಥಿ ಚರ್ಚೆಯ ವೇಳೆ ಅವರ ತಂದೆಯನ್ನು ಉಲ್ಲೇಖಿಸಿ ಶಾಸಕರನ್ನು ಪ್ರಚೋದಿಸಿದ್ದಾರೆ ಎಂದು ಪಕ್ಷದ ವಕ್ತಾರ ಶ್ರವಣ ದಾಸೋಜು ಆರೋಪಿಸಿದರು. ಆದರೆ, ಪ್ರದರ್ಶನದ ಸಮಯದಲ್ಲಿ ಇಬ್ಬರೂ ಸಭ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡದಲ್ಲಿ ಬಿಜೆಪಿ ಮುನ್ನಡೆ, ತೆಲಂಗಾಣದಲ್ಲಿ ಕಾಂಗ್ರೆಸ್‌ ಮುನ್ನಡೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement