ವಿಶ್ವಕಪ್‌ ಕ್ರಿಕೆಟ್‌ : ನೆದರ್ಲೆಂಡ್ಸ್‌ ವಿರುದ್ಧ 309 ರನ್‌ ಗಳಿಂದ ಜಯಗಳಿಸಿದ ಆಸ್ಟ್ರೇಲಿಯಾ ; ಮ್ಯಾಕ್ಸ್‌ವೆಲ್‌ ಅತ್ಯಂತ ವೇಗದ ಶತಕ

ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನೆದರ್ಲೆಂಡ್ಸ್‌ ವಿರುದ್ಧ ಆಸ್ಟ್ರೇಲಿಯಾ ತಂಡವು ದಾಖಲೆ ಅಂತರದಿಂದ ಜಯಗಳಿಸಿದೆ.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡವುಯ ನಿಗದಿತ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 399 ರನ್‌ ಪೇರಿಸಿತು. ಈ ಪಂದ್ಯ ಗೆಲ್ಲಲು ನೆದರ್ಲೆಂಡ್ಸ್ ತಂಡಕ್ಕೆ 400 ರನ್‌ ಗುರಿ ನೀಡಿತು. ಆದರೆ ನೆದರ್ಲೆಂಡ್ಸ್ ತಂಡವು ಕೇವಲ 90 ರನ್‌ಗಳಿಗೆ ಆಲೌಟ್‌ ಆಗಿ 309 ರನ್‌ ಗಳ ಭಾರೀ ಅಂತರದಿಂದ ಜಯ ದಾಖಲಿಸಿತು.
ಆಸ್ಟ್ರೇಲಿಯಾದ ಪರವಾಗಿ ಆರಂಭಿಕ ಆಟಗಾರ ಡೇವಿಡ್‌ ವಾರ್ನರ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಶತಕ ಸಿಡಿಸಿದರು. ನೆದರ್ಲೆಂಡ್ಸ್ ಪರ ಲಾನ್ ವೀಕ್‌ 4 ವಿಕೆಟ್‌ ಪಡೆದರು. ಆರಂಭಿಕ ಬ್ಯಾಟರ್‌ ಡೇವಿಡ್‌ ವಾರ್ನರ್‌ 93 ಬಾಲ್‌ಗಳಲ್ಲಿ 104 ರನ್‌ಗಳಿಸಿದರು. ಆಲೌಂಡರ್‌ ಮ್ಯಾಕ್ಸ್‌ವೆಲ್‌ ಕೇವಲ 40 ಬಾಲ್‌ಗಳಲ್ಲಿ ಶತಕ ಸಿಡಿಸಿದರು. ಇದು ವಿಶ್ವಕಪ್‌ ಕ್ರಿಕೆಟ್‌ನಲ್ಲಿ ವೇಗದ ಶತಕವಾಗಿ ದಾಖಲಾಯಿತು. ಮ್ಯಾಕ್ಸ್‌ವೆಲ್‌ 44 ಬಾಲ್‌ಗಳಲ್ಲಿ 106 ರನ್‌ ಬಾರಿಸಿದರು. ಉಳಿದಂತೆ ಸ್ಮಿತ್‌ 76, ಲಾಬುಶೇನ್‌ 66 ರನ್‌ ಹೊಡೆಯುವ ಮೂಲಕ ತಂಡಕ್ಕೆ ಉತ್ತಮ ಕಾಣಿಕೆ ನೀಡಿದರು.
ಇದಕ್ಕೆ ಉತ್ತರವಾಗಿ ನೆದರ್ಲೆಂಡ್ಸ್ ತಂಡ ಕೇವಲ 21 ಓವರ್‌ಗಳಲ್ಲಿ 90 ರನ್‌ಗಳಿಗೆ ಆಲೌಟ್‌ ಆಯಿತು. ಆಸ್ಟ್ರೇಲಿಯಾ ಪದ ಲಾನ್‌ ವೀಕ್‌ ಪಡೆದರು.

ಪ್ರಮುಖ ಸುದ್ದಿ :-   ‘ತಪ್ಪು ಮಾಡಿದ್ದೇನೆ....’: ವೀಡಿಯೊ ರಿಟ್ವೀಟ್ ಮಾಡಿದ್ದಕ್ಕೆ ಸುಪ್ರೀಂ ಕೋರ್ಟಿನಲ್ಲಿ ಅರವಿಂದ ಕೇಜ್ರಿವಾಲ್ ತಪ್ಪೊಪ್ಪಿಗೆ

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement