ಕ್ರಿಕೆಟ್‌ ವಿಶ್ವಕಪ್‌ 2023: ಶಮಿ- ಬೂಮ್ರಾ ಮಾರಕ ಬೌಲಿಂಗ್‌ : ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ ಸುಲಭದ ಜಯ

ಲಕ್ನೋ: ಪ್ರಸಕ್ತ ವಿಶ್ವಕಪ್‌ನಲ್ಲಿ ಭಾರತ ತಂಡದ ಗೆಲುವಿನ ಓಟವು ಅಡೆತಡೆಯಿಲ್ಲದೆ ಮುಂದುವರೆದಿದೆ. ಭಾನುವಾರ ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ, ಭಾರತದ ತಂಡವು ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ವಿರುದ್ಧ ಪಂದ್ಯಾವಳಿಯ ಆರನೇ ಗೆಲುವನ್ನು ದಾಖಲಿಸಿತು. ಭಾರತ ಒಂಬತ್ತು ವಿಕೆಟ್‌ಗೆ 229 ರನ್ ಗಳ ಸಾಧಾರಣ ಮೊತ್ತ ದಾಖಲಿಸಿತು. ಆದರೆ ಭಾರತವು ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ತಂಡವನ್ನು ಭಾರತ 34.5 ಓವರ್‌ಗಳಲ್ಲಿ 129 ರನ್‌ಗಳಿಗೆ ಆಲೌಟ್ ಮಾಡಿ 100 ರನ್‌ಗಳ ಜಯ ದಾಖಲಿಸಿತು.
ಟಾಸ್ ಗೆದ್ದು ಬಟ್ಲರ್‌ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಾಗ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಭಾರತ ಪಡೆಯಿತು. ಭಾರತ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 229 ರನ್ ಗಳಿಸಿತು. ನಾಯಕ ರೋಹಿತ ಶರ್ಮಾ 87, ಸೂರ್ಯಕುಮಾರ ಯಾದವ್ 49, ಕೆ.ಎಲ್‌. ರಾಹುಲ್ 39 ರನ್ ಗಳಿಸಿ ತಂಡಕ್ಕೆ ಆಸರೆಯಾದರು.
230 ರನ್‌ಗಳ ಗುರಿ ಬೆನ್ನತ್ತಿದ ಹಾಲಿ ಚಾಂಪಿಯನ್ ಇಂಗ್ಲೆಂಡ್, 34.5 ಓವರ್‌ಗಳಲ್ಲಿ 129 ರನ್ ಗಳಿಸುವಷ್ಟರಲ್ಲಿಯೇ ಎಲ್ಲ ವಿಕೆಟ್‌ಗಳನ್ನೂ ಕಳೆದುಕೊಂಡಿತು. ಇಂಗ್ಲೆಂಡ್‌ ಪರ ಲಿಯಾಮ್ ಲಿವಿಂಗ್‌ಸ್ಟೋನ್ 27, ಡೇವಿಡ್ ಮಲಾನ್ 16, ಡೇವಿಡ್ ವಿಲಿ 16, ಮೋಯಿನ್ ಆಲಿ 15, ಜಾನಿ ಬೆಸ್ಟೊ 14 ರನ್ ಗಳಿಸಿದರು.
ಭಾರತದ ಪರ ಮೊಹಮ್ಮದ್ ಶಮಿ 4, ಜಸ್‌ಪ್ರೀತ್ ಬೂಮ್ರಾ 3, ಕುಲದೀಪ ಯಾದವ್ 2 ಹಾಗೂ ರವೀಂದ್ರ ಜಡೇಜ ಒಂದು ವಿಕೆಟ್ ಪಡೆದರು.

ಪ್ರಮುಖ ಸುದ್ದಿ :-   'ಭಾರತದ ಮೇಲೆ ಆಕ್ರಮಣ ಮಾಡಿ ಮೋದಿಯನ್ನು ಸರಪಳಿ ಹಾಕಿ ಬಂಧಿಸ್ತೇವೆ': ಬಡಾಯಿ ಕೊಚ್ಚಿಕೊಂಡ ಪಾಕ್ ಸೇನಾಧಿಕಾರಿ | ವೀಡಿಯೊ ವೀಕ್ಷಿಸಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement