ವೀಡಿಯೊ | ನಾನೇಕೆ ಸ್ಫೋಟಿಸಿದ್ದೇನೆಂದರೆ, ಅವರು..: ಕೊಚ್ಚಿ ತ್ರಿವಳಿ ಸ್ಫೋಟಕ್ಕೆ ಹೊಣೆ ಹೊತ್ತ ಮಾರ್ಟಿನ್ ಎಂಬಾತನಿಂದ ವೀಡಿಯೊ ಬಿಡುಗಡೆ

ತಿರುವನಂತಪುರ: ಕೊಚ್ಚಿಯ ಕಲಮಸ್ಸೇರಿ ಕ್ರಿಶ್ಚಿಯನ್ ಧಾರ್ಮಿಕ ಸಮಾವೇಶದಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಸ್ಫೋಟ ಮಾಡಿದ ಹೊಣೆ ಹೊತ್ತಿದ್ದು, ಈ ಸಂಬಂಧ ವೀಡಿಯೊ ಬಿಡುಗಡೆ ಮಾಡಿದ್ದಾನೆ.
ಡೊಮಿನಿಕ್ ಮಾರ್ಟಿನ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬ ಸರಣಿ ಸ್ಫೋಟದ ಹೊಣೆ ಹೊತ್ತುಕೊಂಡು ಪೊಲೀಸರ ಮುಂದೆ ಶರಣಾಗಿದ್ದಾನೆ. ಹಲವಾರು ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾದ ವೀಡಿಯೊ ಪ್ರಕಾರ, ತನ್ನನ್ನು ಮಾರ್ಟಿನ್ ಎಂದು ಗುರುತಿಸಿಕೊಂಡಿರುವ ವ್ಯಕ್ತಿ, ಯಹೋವನ ವಿಟ್ನೆಸಸ್ ಎಂಬ ಕ್ರಿಶ್ಚಿಯನ್ ಸಂಘಟನೆಗೆ ಸೇರಿದವನೆಂದು ಹೇಳಿಕೊಂಡಿದ್ದಾನೆ. ಪೊಲೀಸರಿಗೆ ಶರಣಾಗುವ ಮೊದಲು, ಮಾರ್ಟಿನ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿದ್ದು, ತಾನು ಈ ಕ್ರಿಶ್ಚಿಯನ್ ಪಂಥವನ್ನು ಏಕೆ ಟಾರ್ಗೆಟ್‌ ಮಾಡಲು ನಿರ್ಧರಿಸಿದೆ ಎಂಬ ಬಗ್ಗೆ ವೀಡಿಯೊದಲ್ಲಿ ಹೇಳೊಕೊಂಡಿದ್ದಾನೆ.
ವೀಡಿಯೊದಲ್ಲಿ, ಸುಮಾರು 50 ರ ಆಸುಪಾಸಿನಲ್ಲಿರುವ ವ್ಯಕ್ತಿ, ತಾನು ಯಹೋವನ ವಿಟ್ನೆಸಸ್ ಬೋಧನೆಗಳನ್ನು ಒಪ್ಪುವುದಿಲ್ಲ ಮತ್ತು ಅವರ ಚಟುವಟಿಕೆಗಳನ್ನು ನಿಲ್ಲಿಸಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾನೆ. ಅವರ ವಿಚಾರಗಳು ‘ದೇಶಕ್ಕೆ ಅಪಾಯಕಾರಿ’ ಎಂದು ಪ್ರತಿಪಾದಿಸಿದ ಆತ, ‘ಅವರು ಯುವ ಮನಸುಗಳನ್ನು ವಿಷಪೂರಿತಗೊಳಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾನೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ 6 ನಿಮಿಷಗಳ ವೀಡಿಯೊದಲ್ಲಿ, ಮಾರ್ಟಿನ್, “ಅದಕ್ಕೆ ನಾನು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ಅಲ್ಲಿ ಸ್ಫೋಟವನ್ನು ನಡೆಸಿದ್ದು ನಾನೇ ಎಂದು ಹೇಳಿದ್ದಾನೆ.
ತನ್ನ ಉದ್ದೇಶವನ್ನು ವಿವರಿಸುತ್ತಾ, “ಆರು ವರ್ಷಗಳ ಹಿಂದೆ, ಈ ಸಂಘಟನೆಯು ತಪ್ಪು ಹಾದಿಯಲ್ಲಿದೆ ಮತ್ತು ಅವರ ಬೋಧನೆಗಳು ದೇಶ ವಿರೋಧಿ ಎಂದು ನಾನು ಅರಿತುಕೊಂಡೆ. ನಾನು ಹಲವಾರು ಬಾರಿ ಅದನ್ನು ಸರಿಪಡಿಸಲು ಕೇಳಿದೆ. ಆದಾಗ್ಯೂ, ಅವರು ಅದನ್ನು ಮಾಡಲು ಸಿದ್ಧರಿರಲಿಲ್ಲ ಎಂದು ಹೇಳಿದ್ದಾನೆ.

ಪ್ರಮುಖ ಸುದ್ದಿ :-   ಕೇವಲ ಒಂದೇ ಒಂದು ಸುಳಿವಿನಿಂದ 22 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾಂಟೆಡ್ ಸಿಮಿ ಉಗ್ರನ ಬಂಧಿಸಿದ ಪೊಲೀಸರು...!

“ನಂಬಿಕೆಯನ್ನು ಹೊಂದಿರುವುದರಲ್ಲಿ ತಪ್ಪೇನಿಲ್ಲ. ಆದರೆ ಅವರು ಕಲಿಸುವುದು ಈ ಜಗತ್ತಿನಲ್ಲಿ ಎಲ್ಲರೂ ನಾಶವಾಗುತ್ತಾರೆ. 850 ಕೋಟಿ ಜನರ ಅಂತ್ಯವನ್ನು ಬಯಸುವ ಗುಂಪಿನ ಬಗ್ಗೆ ನಾವು ಏನು ಮಾಡಬೇಕು? ನನಗೆ ಬೇರೆ ದಾರಿ ಕಾಣಲಿಲ್ಲ. ನಾನು ಈ ತಪ್ಪು ಸಿದ್ಧಾಂತದ ಬಗ್ಗೆ ಸಂಪೂರ್ಣವಾಗಿ ತಿಳಿದಿರುವ ಕಾರಣ ಅದಕ್ಕೆ ಪ್ರತಿಕ್ರಿಯಿಸಲು ನಿರ್ಧರಿಸಿದೆ ಎಂದು ಹೇಳಿದ್ದಾನೆ.
ಅಪಾಯಕಾರಿ ವಿಚಾರಗಳನ್ನು ಹರಡುವ ಈ ರೀತಿಯ ಗುಂಪುಗಳನ್ನು ನೀವು ನಿಯಂತ್ರಿಸದಿದ್ದರೆ, ನನ್ನಂತಹ ಜನರು ಪ್ರಾಣ ತ್ಯಾಗ ಮಾಡಬೇಕಾಗುತ್ತದೆ” ಎಂದು ಮಾರ್ಟಿನ್ ಹೇಳಿದ್ದಾನೆ.
ಡೊಮಿನಿಕ್ ಮಾರ್ಟಿನ್ ಶರಣಾಗಿದ್ದಾನೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಆದಾಗ್ಯೂ, ಅಧಿಕಾರಿಗಳು ಆತನನ್ನು ಕೂಲಂಕಷವಾಗಿ ವಿಚಾರಣೆ ನಡೆಸುತ್ತಿದ್ದಾರೆ ಮತ್ತು ಆತ ಹೇಳಿದ್ದರ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಹೇಳಿದ್ದಾರೆ. ಈ ಸ್ಫೋಟದ ಹಿಂದೆ ಆತನ ಕೈವಾಡವಿದೆಯೇ ಎಂಬುದನ್ನು ಇದುವರೆಗೆ ಪೊಲೀಸರು ಖಚಿತಪಡಿಸಿಲ್ಲ.
ಈ ಆರೋಪಗಳಿಗೆ ಸಂಬಂಧಿಸಿದಂತೆ ಸಂಘಟನೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಪ್ರಮುಖ ಸುದ್ದಿ :-   ವೀಡಿಯೊ..| ಕೊಳೆ ಬಟ್ಟೆ ಧರಿಸಿ ಬಂದಿದ್ದ ವ್ಯಕ್ತಿಗೆ ʼನಮ್ಮ ಮೆಟ್ರೋʼ ಮೆಟ್ರೋ ಒಳಗೆ ಬಿಡದ ಸಿಬ್ಬಂದಿ: ಸೇವೆಯಿಂದ ಉದ್ಯೋಗಿ ವಜಾ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement